Mahashivratri 2023: ಶುಭಾಶಯ ತಿಳಿಸಿದ ದೇವೇಗೌಡ; ಬೆಂಗಳೂರಿನ ತ್ರಂಬಕೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ
Mahashivratri: ಮಾಹಾಶಿವರಾತ್ರಿ ಹಿನ್ನೆಲೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಜೆ ಪಿ ನಗರದಲ್ಲಿರುವ ತ್ರಂಬಕೇಶ್ವರ ಸ್ವಾಮಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಬೆಂಗಳೂರು: ಇಂದು (ಫೆ.18) ಮಾಹಾಶಿವರಾತ್ರಿ ಹಿನ್ನೆಲೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ(HD Devegowda) ಜೆ ಪಿ ನಗರದಲ್ಲಿರುವ ತ್ರಂಬಕೇಶ್ವರ ಸ್ವಾಮಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಪೂಜೆ ನಂತರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು ಎಲ್ಲರಿಗೂ ಮಹಾಶಿವರಾತ್ರಿಯ ಹಬ್ಬದ ಶುಭಾಶಯಗಳು. ಭಾರತದಲ್ಲಿ ಮಹಾಶಿವರಾತ್ರಿಯನ್ನು ಅತ್ಯಂತ ಭಕ್ತಿಯಿಂದ ಆಚರಿಸುತ್ತಾರೆ. ಒಂದೊಂದು ಪಂಗಡದವರು ಒಂದೊಂದು ರೀತಿಯಲ್ಲಿ ಆಚರಿಸುತ್ತಾರೆ. ನಾವು ಈಶ್ವರನ ಆರಾಧಕರು, ವಂಶ ಪಾರಂಪರ್ಯವಾಗಿ ಪೂಜಿಸುತ್ತಿದ್ದೇವೆ. ಪ್ರತಿ ವರ್ಷ ನಮ್ಮೂರಿನ ಭೈರವೇಶ್ವರ ದೇಗುಲದಲ್ಲಿ ಪೂಜೆ ಮಾಡುತ್ತಿದ್ದೆ. ಈ ಬಾರಿ ಹೋಗುವುದಕ್ಕೆ ಆಗಿಲ್ಲ, ಹೀಗಾಗಿ ಇಲ್ಲೇ ಪೂಜೆ ಸಲ್ಲಿಸಿದೆ ಎಂದು ಹೇಳಿದರು. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.
Latest Videos