AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೊಮ್ಮಾಯಿ ಬಜೆಟ್ ಬಗ್ಗೆ ವ್ಯಂಗ್ಯ; ಬಜೆಟ್ ಪ್ರತಿಗೆ ಎಳ್ಳು ನೀರು ಬಿಟ್ಟು ಆಕ್ರೋಶ ಹೊರ ಹಾಕಿದ ಕಾಂಗ್ರೆಸ್

ಬೊಮ್ಮಾಯಿ ಬಜೆಟ್ ಬಗ್ಗೆ ವ್ಯಂಗ್ಯ; ಬಜೆಟ್ ಪ್ರತಿಗೆ ಎಳ್ಳು ನೀರು ಬಿಟ್ಟು ಆಕ್ರೋಶ ಹೊರ ಹಾಕಿದ ಕಾಂಗ್ರೆಸ್

TV9 Web
| Updated By: ಆಯೇಷಾ ಬಾನು|

Updated on: Feb 18, 2023 | 2:41 PM

Share

ಬಜೆಟ್ ಪ್ರತಿಗೆ ಎಳ್ಳು ನೀರು ಬಿಟ್ಟಿದ್ದಾರೆ. ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್​​ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕತರು ಕಿವಿಗೆ ಹೂವು ಇಟ್ಟುಕೊಂಡು ಎಳ್ಳುನೀರು ಬಿಟ್ಟಿದ್ದಾರೆ.

2023 -24ನೇ ಸಾಲಿನ ರಾಜ್ಯ ಬಜೆಟ್ ಮಂಡನೆಗೆ ಕಾಂಗ್ರೆಸ್​ ನಾಯಕರು ಈಗಾಗಲೇ ಹಲವು ರೀತಿಯಲ್ಲಿ ಕಿಡಿಕಾರಿದ್ದಾರೆ. ಕಿವಿಯಲ್ಲಿ ಹೂವು ಇಟ್ಕೊಂಡು ವ್ಯಂಗ್ಯವಾಡಿದ ಬೆನ್ನಲ್ಲೇ ಇಂದು ಮೈಸೂರಿನಲ್ಲಿ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್​ ಬೊಮ್ಮಾಯಿ ಬಜೆಟ್​ಗೆ ತರ್ಪಣ ಬಿಟ್ಟು ವಿಭಿನ್ನ ರೀತಿಯಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಬಜೆಟ್ ಪ್ರತಿಗೆ ಎಳ್ಳು ನೀರು ಬಿಟ್ಟಿದ್ದಾರೆ. ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್​​ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕತರು ಕಿವಿಗೆ ಹೂವು ಇಟ್ಟುಕೊಂಡು ಎಳ್ಳುನೀರು ಬಿಟ್ಟಿದ್ದಾರೆ.