ಅಕ್ಟೋಬರ್​ ಹಿಂದೂ ಪರಂಪರೆ ತಿಂಗಳು, ಆಸ್ಟ್ರೇಲಿಯಾ ಘೋಷಣೆ

ಅಕ್ಟೋಬರ್​ ಹಿಂದೂ ಪರಂಪರೆ ತಿಂಗಳು, ಆಸ್ಟ್ರೇಲಿಯಾ ಘೋಷಣೆ

ವಿವೇಕ ಬಿರಾದಾರ
|

Updated on: Oct 28, 2024 | 8:07 AM

ಆಸ್ಟ್ರೇಲಿಯಾ ಅಕ್ಟೋಬರ್​ ತಿಂಗಳನ್ನು "ಹಿಂದೂ ಪರಂಪರೆ ಮಾಸ" ಎಂದು ಘೋಷಿಸಿದೆ. ರವಿವಾರ ಆಸ್ಟ್ರೇಲಿಯಾ ಸಂಸದ ಆಂಡ್ರ್ಯೂ ಚಾರ್ಲ್ಟನ್ "ಅಕ್ಟೋಬರ್​ ತಿಂಗಳನ್ನು ಹಿಂದೂ ಪರಂಪರೆ ಮಾಸ" ಎಂದು ಘೋಷಿಸಿದರು. ಹಿಂದೂ ಪರಂಪರೆ ಮಾಸ ಎಂದು ಘೋಷಿಸಿರುವ ಆಸ್ಟ್ರೇಲಿಯಾ ಸಂಸದ ಆಂಡ್ರ್ಯೂ ಚಾರ್ಲ್ಟನ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ಜಗತ್ತಿನ ಹಲವು ದೇಶಗಲ್ಲಿ ದೀಪಾವಳಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಹಿಂದೂಗಳು ಪ್ರತಿವರ್ಷ ದೀಪಾವಳಿಯನ್ನು ಅದ್ದೂರಿಯಾಗಿ ಆಚರಿಸುತ್ತಾರೆ. ಈ ವರ್ಷ ಆಸ್ಟ್ರೇಲಿಯಾ ಅಕ್ಟೋಬರ್​ ತಿಂಗಳನ್ನು “ಹಿಂದೂ ಪರಂಪರೆ ಮಾಸ” ಎಂದು ಘೋಷಿಸಿದೆ. ರವಿವಾರ ಆಸ್ಟ್ರೇಲಿಯಾ ಸಂಸದ ಆಂಡ್ರ್ಯೂ ಚಾರ್ಲ್ಟನ್ “ಅಕ್ಟೋಬರ್​ ತಿಂಗಳನ್ನು ಹಿಂದೂ ಪರಂಪರೆ ಮಾಸ” ಎಂದು ಘೋಷಿಸಿದರು.