ಕಳೆದ ವರ್ಷದಂತೆ ಈ ವರ್ಷವೂ ಹಾಸನಾಂಬೆಯ ದರ್ಶನ ಮಾಡಿಕೊಂಡಿರುವೆ: ಪ್ರತಾಪ್ ಸಿಂಹ
ವಿಧಾನಸಭೆಗಾಗಿ ನಡೆಯುತ್ತಿರುವ ಎಲ್ಲ ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿಗಳು ಗೆಲ್ಲಲಿದ್ದಾರೆ, ದೇಶದೆಲ್ಲೆಡೆ ಬಿಜೆಪಿಗೆ ಒಳ್ಳೆಯ ವಾತಾವರಣವಿದೆ ಮತ್ತು ತಾನು ಮೂರು ಕ್ಷೇತ್ರಗಳಲ್ಲೂ ಚುನಾವಣಾ ಪ್ರಚಾರ ಮಾಡಲು ತೆರಳುವುದಾಗಿ ಪ್ರತಾಪ್ ಸಿಂಹ ಹೇಳಿದರು.
ಹಾಸನ: ಹಾಸನಾಂಬೆಯ ದರ್ಶನ ಮಾಡಿಕೊಂಡ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಮಾಜಿ ಸಂಸದ ಪ್ರತಾಪ್ ಸಿಂಹ, ಕಳೆದ ವರ್ಷ ತಾಯಿಯ ದರ್ಶನಕ್ಕೆ ಅಗಮಿಸಿದಂತೆ ಈ ವರ್ಷವೂ ದರ್ಶನ ಮಾಡಿಕೊಂಡಿರುವುದಾಗಿ ಹೇಳಿದರು. ಹಾಸನಾಂಬೆಯ ದರ್ಶನಕ್ಕೆ ಪ್ರತಿವರ್ಷ ಲಕ್ಷಾಂತರ ಜನ ಬರುತ್ತಾರೆ. ಧರ್ಮನಿಷ್ಠರನ್ನು ತಾಯಿ ಆಶೀರ್ವದಿಸಿ ಕಾಪಾಡಲಿ ಎಂದು ಬೇಡಿಕೊಂಡಿರುವುದಾಗಿ ಇತ್ತೀಚಿಗೆ ಅಪರೂಕ್ಕೊಮ್ಮೆ ಮಾಧ್ಯಮಗಳ ಕಣ್ಣಿಗೆ ಬೀಳುವ ಪ್ರತಾಪ್ ಸಿಂಹ ಹೇಳಿದರು.ಮತ್ತಷ್ಟು
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ಕೈ ಬಿಟ್ಟ ಬಿಜೆಪಿ: ಪ್ರತಾಪ್ ಸಿಂಹ ಹೇಳಿದ್ದಿಷ್ಟು
Latest Videos