ಧಾರವಾಡ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಹತ್ತಿ ಮತ್ತು ಮೆಣಸಿನಕಾಯಿ ಬೆಳೆಹಾಳು, ರೈತ ಕಂಗಾಲು
ಸರ್ಕಾರ ನೀಡುವ ಐದಾರು ಸಾವಿರ ರೂ. ಪರಿಹಾರ ಯಾವ ಮೂಲೆಗೂ ಸಾಲದು, ಪಕ್ಕದಲ್ಲಿ ಹರಿಯುತ್ತಿರುವ ಹಳ್ಳದ ಕಡೆ ಸರ್ಕಾರ ಗಮನ ಹರಿಸುತ್ತಿಲ್ಲ, ಭಾರಿ ಮಳೆಯಿಂದ ಹಳ್ಳ ಉಕ್ಕಿ ಹರಿದು ಜಮೀನುಗಳಿಗೆ ನೀರು ನುಗ್ಗಿ ಬೆಳೆಗಳು ಹಾಳಾಗಿವೆ, ತಮಗೆ ಸೂಕ್ತ ಪರಿಹಾರ ನೀಡದಿದ್ದರೆ ವಿಧಾನ ಸೌಧದ ಮುಂದೆ ಧರಣಿ ಕೂರುವುದಾಗಿ ರೈತ ಹೇಳುತ್ತಾರೆ.
ಹುಬ್ಬಳ್ಳಿ: ಧಾರವಾಡ ಜಿಲ್ಲೆ ಕುಂದಗೋಳ ತಾಲ್ಲೂಕಿನ ಗುಂಡೇನಕಟ್ಟಿ ಗ್ರಾಮದ ರೈತ ಸೋಮರಾಯಪ್ಪ ಯೋಗಪ್ಪನವರ್ ತೀವ್ರ ಸಂಕಷ್ಟದಲ್ಲಿದ್ದಾರೆ. ಅತಿವೃಷ್ಟಿಯಿಂದ ಅವರು ತಮ್ಮ ಮೂರು ಎಕರೆ ಜಮೀನಲ್ಲಿ ಬೆಳೆದಿದ್ದ ಹತ್ತಿ ಮತ್ತು ಮೆಣಸಿನಕಾಯಿ ಬೆಳೆ ಸಂಪೂರ್ಣವಾಗಿ ನಾಶವಾಗಿವೆ. ಅವರ ಕುಟುಂಬಸ್ಥರು ಒಣಗಿ ಸುಕ್ಕುಗಟ್ಟಿದಂತಿರುವ ಮೆಣಸಿನಕಾಯಿ ಬೆಳೆ ಕಿತ್ತುಹಾಕುತ್ತಿರುವುದನ್ನು ನೋಡಬಹುದು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮಳೆಯಿಂದ ಅತಿವೃಷ್ಟಿ ಅನಾಹುತ ಕಡಿಮೆಯಾಗಲೆಂದು ಕಳಸೇಶ್ವರನಿಗೆ ಅಗಿಲು ಸೇವೆ ಸಲ್ಲಿಸಿದ ಕಳಸ ಗ್ರಾಮಸ್ಥರು
Latest Videos