ಮಳೆಯಿಂದ ಅತಿವೃಷ್ಟಿ ಅನಾಹುತ ಕಡಿಮೆಯಾಗಲೆಂದು ಕಳಸೇಶ್ವರನಿಗೆ ಅಗಿಲು ಸೇವೆ ಸಲ್ಲಿಸಿದ ಕಳಸ ಗ್ರಾಮಸ್ಥರು

ಮಳೆಯಿಂದ ಅತಿವೃಷ್ಟಿ ಅನಾಹುತ ಕಡಿಮೆಯಾಗಲೆಂದು ಕಳಸೇಶ್ವರನಿಗೆ ಅಗಿಲು ಸೇವೆ ಸಲ್ಲಿಸಿದ ಕಳಸ ಗ್ರಾಮಸ್ಥರು

ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Updated By: ಆಯೇಷಾ ಬಾನು

Updated on:Aug 03, 2024 | 8:10 AM

ರಾಜ್ಯದ ಹಲವೆಡೆ ಭಾರಿ ಮಳೆಯಿಂದಾಗಿ ಸಮಸ್ಯೆಗಳು ಎದುರಾಗಿವೆ. ಜನ ಜೀವನ ಅಸ್ತವ್ಯಸ್ತವಾಗಿದೆ. ಹೀಗಾಗಿ ಮಳೆ ನಿಲ್ಲಿಸಿ, ಅತಿವೃಷ್ಟಿ, ಅನಾಹುತ ತಡೆಯುವಂತೆ ಕಳಸ ಗ್ರಾಮಸ್ಥರು ದೇವರ ಮೊರೆ ಹೋಗಿದ್ದಾರೆ. ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದಿರುವ ಕಳಸ ಪಟ್ಟಣದ ಕಳಸೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಅಗಿಲು ಸೇವೆ ಸಲ್ಲಿಸಿದ್ದಾರೆ.

ಚಿಕ್ಕಮಗಳೂರು, ಆಗಸ್ಟ್.03: ಮಲೆನಾಡು ಭಾಗದಲ್ಲಿ ಮಳೆಯಿಂದ ಅತಿವೃಷ್ಟಿ ಅನಾಹುತ ಹಿನ್ನೆಲೆ ಮಲೆನಾಡಿಗರು ದೇವರ ಮೊರೆ ಹೋಗಿದ್ದಾರೆ. ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದಿರುವ ಕಳಸ ಪಟ್ಟಣದ ಕಳಸೇಶ್ವರ ದೇವಾಲಯದಲ್ಲಿ ಗ್ರಾಮಸ್ಥರು ವಿಶೇಷ ಪೂಜೆ ಸಲ್ಲಿಸಿ ಅಗಿಲು ಸೇವೆ ಸಲ್ಲಿಸಿದ್ದಾರೆ.

ಕಳಸ ತಾಲೂಕಿನ ನೂರಾರು ಗ್ರಾಮಸ್ಥರು ಕಳಸೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮಳೆ ನಿಲ್ಲಿಸಿ, ಅತಿವೃಷ್ಟಿ, ಅನಾಹುತ ತಡೆಯುವಂತೆ ಪ್ರಾರ್ಥನೆ ಮಾಡಿದ್ದಾರೆ. ಗ್ರಾಮಸ್ಥರ ಮನವಿ ಮೇರೆಗೆ ಅಗಿಲು ಸೇವೆ, ಅಗ್ನಿಸೂಕ್ತ ಮಂತ್ರ ಮಠಣ ಮಾಡಲಾಯಿತು. ಅನಾದಿಕಾಲದಿಂದಲೂ ಅತಿವೃಷ್ಟಿ ತಡೆಗಾಗಿ ಇಲ್ಲಿ ಗ್ರಾಮಸ್ಥರು ಅಗಿಲು ಸೇವೆ ಮಾಡುತ್ತಾ ಬಂದಿದ್ದಾರೆ. ಶತಮಾನಗಳಿಂದ ಅತಿವೃಷ್ಠಿ-ಅನಾವೃಷ್ಠಿಯಲ್ಲಿ ಪೂಜೆ ಸಲ್ಲಿಸಿದರೆ ಭಕ್ತರ ಬಯಕೆ ಈಡೇರಿಕೆಯಾಗುತ್ತದೆ ಎಂಬ ಪ್ರತೀತಿಯಿದೆ. ಈ ಬಾರಿ ವಾಡಿಕೆಗಿಂತ ಹೆಚ್ಚಿನ ಮಳೆಗೆ ಕಳಸ ತಾಲೂಕಿನ ಜನರು ಕಂಗಾಲಾಗಿದ್ದಾರೆ. ಮಳೆ ನಿಂತು ಜನರ ಜೀವನ ಉಳಿಯುವಂತೆ ಕಳಸೇಶ್ವರನಿಗೆ ಅಗಿಲು ಸೇವೆ ನೀಡಿ ಗ್ರಾಮಸ್ಥರು ಬೇಡಿಕೊಂಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ

Published on: Aug 03, 2024 08:09 AM