ಕೇರಳ ಗುಡ್ಡ ಕುಸಿತ: ಕನ್ನಡತಿ ಜಯಮ್ಮರ ಜೀವ ಉಳಿಸಿದ ದನಕರುಗಳು

ಕೇರಳದ ವಯನಾಡು ಜಿಲ್ಲೆಯಲ್ಲಿ ಭೀಕರ ಭೂಕುಸಿತದಿಂದ ಸಾವನ್ನಪ್ಪಿದವರ ಸಂಖ್ಯೆ 330 ದಾಟಿದೆ. ಇನ್ನೂ 300 ಜನರು ನಾಪತ್ತೆಯಾಗಿದ್ದಾರೆ. ಈ ನಡುವೆ ಭೀಕರ ಗುಡ್ಡ ಕುಸಿತದಿಂದ ತಪ್ಪಿಸಿಕೊಂಡು ಸಾವನ್ನು ಗೆದ್ದು ಬಂದ ಗಟ್ಟಿಗಿತ್ತಿ ಕನ್ನಡತಿಯ ರೋಚಕ ಕಥೆ ಇಲ್ಲಿದೆ.

ಕೇರಳ ಗುಡ್ಡ ಕುಸಿತ: ಕನ್ನಡತಿ ಜಯಮ್ಮರ ಜೀವ ಉಳಿಸಿದ ದನಕರುಗಳು
ಜಯಮ್ಮ
Follow us
| Updated By: ವಿವೇಕ ಬಿರಾದಾರ

Updated on: Aug 03, 2024 | 9:24 AM

ಚಾಮರಾಜನಗರ, ಆಗಸ್ಟ್​ 03: ಕೇರಳದ ವಯನಾಡಿನಲ್ಲಿ ಭಾರಿ ಗುಡ್ಡ ಕುಸಿತದಿಂದ  (Wayanad land slide) ಸಾವನ್ನಪ್ಪಿದವರ ಸಂಖ್ಯೆ 330 ದಾಟಿದೆ. ಇನ್ನೂ 300 ಜನರು ನಾಪತ್ತೆಯಾಗಿದ್ದಾರೆ. ಅವರಿಗಾಗಿ ಮಣ್ಣಿನ ಅವಶೇಷಗಳಲ್ಲಿ ತೀವ್ರ ಶೋಧ ಕಾರ್ಯಾಚರಣೆ ನಡೆದಿದೆ. ಕರ್ನಾಟಕದ ಆರು ಜನ ಮೃತಪಟ್ಟಿದ್ದಾರೆ. ಇದೇ ಭೀಕರ ಗುಡ್ಡ ಕುಸಿತದಿಂದ ತಪ್ಪಿಸಿಕೊಂಡು ಸಾವನ್ನು ಗೆದ್ದು ಬಂದ ಗಟ್ಟಿಗಿತ್ತಿ ಕನ್ನಡತಿಯ ರೋಚಕ ಕಥೆ ಇಲ್ಲಿದೆ.

ಜಯಮ್ಮ ದಂಪತಿ ವಯನಾಡು ಬಳಿಯ ಚೂರಲ್ಮಲದಲ್ಲಿ 35 ವರ್ಷಗಳಿಂದ ವಾಸವಾಗಿದ್ದರು. ಟೀ ಎಸ್ಟೇಟ್​ನಲ್ಲಿ ಕೆಲಸ ಮಾಡುತ್ತ ಹೈನುಗಾರಿಕೆ ಮಾಡಿಕೊಂಡಿದ್ದರು. ಜುಲೈ 23ರ ರಾತ್ರಿ ದನಕರಗಳು ಇದ್ದಕ್ಕಿದ್ದಂತೆ ಅರಚಲು ಶುರು ಮಾಡಿದ್ದವು. ದನಕರುಗಳು ಅರಚುವುದನ್ನು ಕಂಡು ಜಯಮ್ಮ ಕೊಟ್ಟಿಗೆ ಬಳಿ ಹೋಗಿ ನೋಡಿದಾಗ ಒಂದು ಕ್ಷಣ ಧಿಗ್ಬ್ರಾಂತರಾಗಿದ್ದಾರೆ.

ಸುಮುದ್ರದ ಅಲೆಯಂತೆ ಇರುವಝಿಂಜಿ ನದಿಯ ಹರಿವು ಜೋರಾಗಿತ್ತು. ನದಿ ನೀರು ಗ್ರಾಮದೊಳಗೆ ನುಗ್ಗಲು ಆರಂಭಿಸಿದೆ. ಹಾಗೆ ಅತ್ತ ಆಗುತಾನೆ ಗುಡ್ಡ ಕುಸಿಯಲು ಆರಂಭಿಸಿತ್ತು. ತಕ್ಷಣವೇ ಜಯಮ್ಮ ಪತಿ ಹಾಗೂ ಮಗನನ್ನು ಹೊರಗೆ ಕರೆದಿದ್ದಾರೆ. ಬಳಿಕ, ಅದಾಗಲೆ ಗುಡ್ಡ ಹತ್ತಿ ಕೂತಿದ್ದ ವಿನೋದ್​ ಎಂಬುವರು ಜಯಮ್ಮರ ಕೈ ಹಿಡಿದು ಮೇಲೆ ಎಳೆದುಕೊಂಡಿದ್ದಾರೆ. ನಂತರ ಗುಡ್ಡದ ಮೇಲೆ ಇದ್ದ ಇನ್ನೀತರರು ಜಯಮ್ಮನ ಪತಿ ಹಾಗೂ ಮಗನನ್ನೂ ಮೇಲೆ ಏಳುದುಕೊಂಡಿದ್ದಾರೆ.

ಇದನ್ನೂ ಓದಿ: ಕೇರಳ ವಯನಾಡು ಗುಡ್ಡ ಕುಸಿತದಿಂದ ಪಾರಾಗಿ, ಮೂವರನ್ನ ರಕ್ಷಿಸಿದ ಕನ್ನಡಿಗನ ಸಾಹಸ ಕಥೆ ಇಲ್ಲಿದೆ

ಆದರೆ, ಕಣ್ಣ ಮುಂದೆಯೇ ಆರು ಹಸುಗಳು ಕೊಚ್ಚಿ ಹೋದವು. ಹಸುಗಳು ಕೊಚ್ಚಿ ಹೋಗುತ್ತಿದ್ದರೂ ಏನು ಮಾಡಲಾಗದ ಪರಿಸ್ಥಿತಿ ಅವರಿಗಿತ್ತು. ಜಯಮ್ಮನ ಮನೆ ಸಂಪೂರ್ಣ ನಾಶವಾಗಿದೆ. ಜಯಮ್ಮ ಉಟ್ಟು ಬಟ್ಟೆಯಲ್ಲೇ ಕೇರಳ ತೊರೆದು, ತವರು ಮನೆ ಚಾಮರಾಜನಗರಕ್ಕೆ ಬಂದಿದ್ದಾರೆ. ಸದ್ಯ ಜಯಮ್ಮ ಮಗಳ ಮನೆಯಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.

“ನಮ್ಮ ಜೀವನಕ್ಕೆ ಆಧಾರವಾಗಿದ್ದ ದನಕರುಗಳು ಕೊಚ್ಚಿಕೊಂಡು ಹೋಗಿವೆ. ನಾವು ಬೀದಿಗೆ ಬಂದಿದ್ದೇವೆ. ಮುಂದೆ ನಾವು ಜೀವನ ನಡೆಸಲು ಕಷ್ಟವಾಗುತ್ತದೆ. ನಮಗೆ ಮತ್ತೆ ಕೇರಳಕ್ಕೆ ಹೋಗಿ ಜೀವನ ಮಾಡಲು ಆಗಲ್ಲ. ನಾವು ಇಲ್ಲೇ ಜೀವನ ಸಾಗಿಸುತ್ತೇವೆ. ಹೀಗಾಗಿ ಸರ್ಕಾರ ನಮಗೆ ಇಲ್ಲೇ ಒಂದು ಕೆಲಸ ನೀಡಲಿ. ಜೀವನ ಸಾಗಿಸಿಕೊಂಡು ಹೋಗುತ್ತೇವೆ” ಎಂದು ಜಯಮ್ಮ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

‘ಕನ್ನಡ ಚಿತ್ರರಂಗಕ್ಕೆ ಸಮಿತಿ ಬೇಡ, ಇದರಿಂದ ಚಿತ್ರರಂಗಕ್ಕೆ ನಷ್ಟ’; ಗೋವಿಂದು
‘ಕನ್ನಡ ಚಿತ್ರರಂಗಕ್ಕೆ ಸಮಿತಿ ಬೇಡ, ಇದರಿಂದ ಚಿತ್ರರಂಗಕ್ಕೆ ನಷ್ಟ’; ಗೋವಿಂದು
ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ಈ ರಾಶಿಯವರು ಆಸ್ತಿಯ ವಿಚಾರವಾಗಿ ಕಾನೂನು ಹೋರಾಟ ಮಾಡಲಿದ್ದೀರಿ
ಈ ರಾಶಿಯವರು ಆಸ್ತಿಯ ವಿಚಾರವಾಗಿ ಕಾನೂನು ಹೋರಾಟ ಮಾಡಲಿದ್ದೀರಿ
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
‘ನನಗೂ ಕೆಟ್ಟ ಅನುಭವ ಆಗಿದೆ’; ನೀತು ಶೆಟ್ಟಿ ನೇರ ಮಾತು
‘ನನಗೂ ಕೆಟ್ಟ ಅನುಭವ ಆಗಿದೆ’; ನೀತು ಶೆಟ್ಟಿ ನೇರ ಮಾತು
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ