ಕರ್ನಾಟಕದ ಪರ ಧ್ವನಿ ಎತ್ತೋ ಏಕೈಕ ನಾಯಕ ಕುಮಾರಸ್ವಾಮಿ..ಕಟ್..ಕಟ್ ಎಂದ ಸಚಿವ

ಕರ್ನಾಟಕದ ಪರ ಧ್ವನಿ ಎತ್ತೋ ಏಕೈಕ ನಾಯಕ ಕುಮಾರಸ್ವಾಮಿ..ಕಟ್..ಕಟ್ ಎಂದ ಸಚಿವ

Shivaprasad
| Updated By: ರಮೇಶ್ ಬಿ. ಜವಳಗೇರಾ

Updated on: Aug 02, 2024 | 4:34 PM

ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ-ಜೆಡಿಎಸ್ ಹೋರಾಟ ನಡೆಸಿದೆ. ಇದರ ಮಧ್ಯ ಕಂದಾಯ ಸಚಿವ ಮಾತನಾಡುವ ಭರದಲ್ಲಿ ಕರ್ನಾಟಕದ ಪರ ಧ್ವನಿ ಎತ್ತೋ ಏಕೈಕ ನಾಯಕ ಕುಮಾರಸ್ವಾಮಿ ಎಂದು ಹೇಳಿ ಎಡವಟ್ಟು ಮಾಡಿಕೊಂಡಿದ್ದಾರೆ. ​​ಬಳಿಕ ಎಚ್ಚೆತ್ತ ಸಚಿವರು ಕಟ್ ಕಟ್​ ಎಂದಿದ್ದಾರೆ.

ಚಾಮರಾನಗರ, (ಆಗಸ್ಟ್ 02):​ ಚಾಮರಾಜನಗರ ಜಿಲ್ಲಾ ಪ್ರವಾಸದಲ್ಲಿರುವ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಎಡವಟ್ಟು ಮಾಡಿಕೊಂಡಿದ್ದಾರೆ. ಕರ್ನಾಟಕಕ್ಕೆ ಅನ್ಯಾಯವಾದಗ ರಾಜ್ಯದ ಪರ ಧ್ವನಿ ಎತ್ತೋ ಏಕೈಕ ನಾಯಕ ಅಂದ್ರೆ ಎಚ್​ಡಿ ಕುಮಾರಸ್ವಾಮಿ ಎಂದಿದ್ದಾರೆ. ಚಾಮರಾಜನಗರ ಕೊಳ್ಳೇಗಾಲ ತಾಲೂಕಿನ ದಾಸನಪುರ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಬಾಯಿ ತಪ್ಪಿ ಕುಮಾರಸ್ವಾಮಿ ಹೆಸರು ಹೇಳಿದ್ದಾರೆ. ಬಳಿಕ ಎಚ್ಚೆತ್ತ ಕೃಷ್ಣಬೈರೇಗೌಡ, ಕುಮಾರಸ್ವಾಮಿ ಹೆಸರನ್ನ ಬಾಯಿ ತಪ್ಪಿ ಹೇಳಿದ್ದೇನೆ. ಇದನ್ನ ಕಟ್ ಮಾಡಿ ಎಡಿಟ್ ಮಾಡಿ ಎಂದು ಪತ್ರಕರ್ತರಿಗೆ ಮನವಿ ಮಾಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ