Shiradi Ghat: ಮತ್ತೆ ಮತ್ತೆ ಕುಸಿಯುತ್ತಲೇ ಇದೆ ಶಿರಾಡಿ ಘಾಟ್; ಕೆಸರಿನ ರಾಶಿ ಹರಿದುಬರುತ್ತಿರುವ ವಿಡಿಯೋ ಇಲ್ಲಿದೆ
ಹಾಸನ- ದಕ್ಷಿಣ ಕನ್ನಡವನ್ನು ಸಂಪರ್ಕಿಸುವ ಶಿರಾಡಿ ಘಾಟ್ 2-3 ದಿನಗಳಿಂದ ನಿರಂತರವಾಗಿ ಕುಸಿಯುತ್ತಲೇ ಇದೆ. ಈಗಾಗಲೇ 6 ಬಾರಿ ಕುಸಿದಿರುವ ಶಿರಾಡಿ ಘಾಟ್ನಲ್ಲಿ ಮಣ್ಣು ತೆಗೆದಷ್ಟೂ ಮತ್ತೆ ಮತ್ತೆ ಗುಡ್ಡ ಕುಸಿಯುತ್ತಲೇ ಇದೆ. ಅದರ ವಿಡಿಯೋ ಇಲ್ಲಿದೆ.
ಸಕಲೇಶಪುರದಿಂದ ಮಂಗಳೂರಿಗೆ ಬರುವ ಮಾರ್ಗದಲ್ಲಿ ಸಿಗುವ ಶಿರಾಡಿ ಘಾಟ್ ಈ ಬಾರಿ ಭಾರೀ ಭೂಕುಸಿತಕ್ಕೊಳಗಾಗಿದೆ. ರಾಷ್ಟ್ರೀಯ ಹೆದ್ದಾರಿ 75 ದೊಡ್ಡತಪ್ಪಲೆ ಸಮೀಪ ಮತ್ತೆ ಭೂಕುಸಿತ ಉಂಟಾಗಿದೆ. ಶಿರಾಡಿ ಘಾಟ್ನ ರಸ್ತೆಯ ಮೇಲೆ ಕೆಸರಿನ ನೀರು ಹರಿದುಬರುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ಮಾರ್ಗದಲ್ಲಿ ಸಂಚರಿಸಲು ಪ್ರಯಾಣಿಕರು ಭಯಪಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಮಂಗಳವಾರ ಸಂಜೆಯಿಂದ ಗುಡ್ಡ ಕುಸಿತವಾಗುತ್ತಿರುವುದರಿಂದ ತಾತ್ಕಾಲಿಕವಾಗಿ ಶಿರಾಡಿ ಘಾಟ್ ಅನ್ನು ಬಂದ್ ಮಾಡಲಾಗಿತ್ತು. ಆದರೆ, ನಂತರ ಮಣ್ಣು ತೆಗೆದು ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು. ಆದರೂ ಈ ಭಾಗದಲ್ಲಿ ಅಲ್ಲಲ್ಲಿ ಮಣ್ಣು ಕುಸಿತವಾಗುತ್ತಿರುವುದು ಮುಂದುವರೆದಿದೆ.
ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published on: Aug 02, 2024 04:59 PM
Follow Us
Latest Videos
ಅಭಿವೃದ್ಧಿ ಬಗ್ಗೆ ಯುವಕನ ಪ್ರಶ್ನೆಗೆ ಶಾಸಕ ಚಂದ್ರಪ್ಪ ಗರಂ: ವಿಡಿಯೋ ವೈರಲ್
ಕಾಶಿಯಿಂದ ಗುಪ್ತಗಾಮಿನಿಯಾಗಿ ಹರಿಯುತ್ತಾಳೆ ಗಂಗೆ! ಕೋಲಾರದ ಅಂತರಗಂಗೆಯ ಮಹಿಮೆ
ಬಿಗ್ ಬಾಸ್ ಮನೆಯಲ್ಲಿ ಗುಳ್ಳೆನರಿ ಆಟ ಶುರು; ಸ್ಪರ್ಧಿಗಳಿಗೆ ಶುರುವಾಗಿದೆ ಭಯ
ಸತ್ರೂ ಸರಿ, ಸರ್ಕಾರ ಸ್ಪಂದಿಸುವ ವರೆಗೂ ಪಟ್ಟುಬಿಡಲ್ಲ: ಆಶಾಗಳ ಖಡಕ್ ನುಡಿ

