ತಾಕತ್ತು, ದಮ್ಮು ಪದಗಳನ್ನು ಬಳಸುವ ಶೋಭಾ ಕರಂದ್ಲಾಜೆ ಮಾತಿಗೆ ಪ್ರತಿಕ್ರಿಯಿಸುವುದಿಲ್ಲ: ಭೈರತಿ ಸುರೇಶ್

ತಾಕತ್ತು, ದಮ್ಮು ಪದಗಳನ್ನು ಬಳಸುವ ಶೋಭಾ ಕರಂದ್ಲಾಜೆ ಮಾತಿಗೆ ಪ್ರತಿಕ್ರಿಯಿಸುವುದಿಲ್ಲ: ಭೈರತಿ ಸುರೇಶ್

ಅರುಣ್​ ಕುಮಾರ್​ ಬೆಳ್ಳಿ
|

Updated on:Oct 28, 2024 | 12:37 PM

ಹಿಂದೆ ಕೇಂದ್ರದಲ್ಲಿ ಇಂಧನ ಸಚಿವರಾಗಿದ್ದಾಗ ಶೋಭಾ ಕರಂದ್ಲಾಜೆಯವರು ಭಾರೀ ಅಕ್ರಮಗಳನ್ನೆಸಗಿದ್ದಾರೆ ಅವರು ನಡೆಸಿದ ಭ್ರಷ್ಟಾಚಾರವನ್ನು ಬಯಲಿಗೆಳೆಯುತ್ತೇನೆ ಎಂದು ಸುರೇಶ್ ಹೇಳಿದ್ದಕ್ಕೆ ಶೋಭಾ ಅವರು, ತಾನು ಯಾವುದೇ ಅಕ್ರಮ ನಡೆಸಿಲ್ಲ, ತಾಕತ್ತಿದ್ದರೆ ಸುರೇಶ್ ದಾಖಲೆ ಬಿಡುಗಡೆ ಮಾಡಲಿ ಅಂತ ಹೇಳಿದ್ದರು.

ಬೆಂಗಳೂರು: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಕರ್ನಾಟಕ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ನಡುವೆ ವಾಗ್ದ್ದಾಳಿ ಮುಂದುವರಿದಿದೆ. ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸುರೇಶ್, ಶೋಭಾ ಅವರು ತಾಕತ್ತು, ದಮ್ಮು ಅಂತ ಮಾತಾಡುತ್ತಿದ್ದಾರೆ, ಭಾರತದ ಮಹಿಳೆಯರು ಅಂಥ ಭಾಷೆ ಮಾತಾಡಲ್ಲ, ನಮ್ಮ ಹಳ್ಳಿಗಳಲ್ಲೂ ಮಹಿಖೆಯರು ಹಾಗೆ ಮಾತಾಡಲ್ಲ, ಸುಸಂಸ್ಕೃತ ಭಾಷೆಯಲ್ಲಿ ಮಾತಾಡುವವರಿಗೆ ಮಾತ್ರ ತಾನು ಉತ್ತರ ಕೋಡೋದಾಗಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಮುಡಾ ಟೆನ್ಷನ್ ನಡುವೆಯೂ ಸಚಿವ ಭೈರತಿ ಸುರೇಶ್ ಭರ್ಜರಿ ಸ್ಟೆಪ್ಸ್

Published on: Oct 28, 2024 12:36 PM