ವ್ಹೀಲ್ಚೇರ್ನಲ್ಲಿದ್ದ ಮಹಿಳೆ ಕಂಡು ಕಾರಿನಿಂದ ಕೆಳಗಿಳಿದು ಬಂದು ಮಾತನಾಡಿಸಿದ ಪ್ರಧಾನಿ ಮೋದಿ
Narendra Modi special gesture during road show: ವಡೋದರಾದಲ್ಲಿ ಅಕ್ಟೋಬರ್ 28, ಸೋಮವಾರ ನರೇಂದ್ರ ಮೋದಿ ಮತ್ತು ಸ್ಪೇನ್ ಪ್ರಧಾನಿ ಪೆಡ್ರೋ ಸಾಂಚೆಜ್ ರೋಡ್ಶೋ ನಡೆಸಿದರು. ಈ ವೇಳೆ ರಸ್ತೆಯ ಬದಿಯಲ್ಲಿ ವ್ಹೀಲ್ಚೇರ್ನಲ್ಲಿ ಕೂತಿದ್ದ ವಿಶೇಷ ಚೇತನ ಮಹಿಳೆಯೊಬ್ಬರನ್ನು ಕಂಡು ಮೋದಿ ಅವರು ಕಾರಿನಿಂದ ಕೆಳಗಿಳಿದು ಹೋಗಿ ಮಾತನಾಡಿಸಿದ ಘಟನೆ ನಡೆಯಿತು.
ವಡೋದರಾ, ಅಕ್ಟೋಬರ್ 28: ಸ್ಪೇನ್ ಪ್ರಧಾನಿ ಪೆಡ್ರೋ ಸಾಂಚೆಜ್ ಅವರ ಜೊತೆ ನರೇಂದ್ರ ಮೋದಿ ಇಂದು ಸೋಮವಾರ ರೋಡ್ಶೋ ನಡೆಸಿದರು. ವಡೋದರಾ ಏರ್ಪೋರ್ಟ್ನಿಂದ ಆರಂಭವಾದ ರೋಡ್ ಶೋ ಟಾಟಾ ಏರ್ಕ್ರಾಫ್ಟ್ ಕಾಂಪ್ಲೆಕ್ಸ್ ಸ್ಥಳದವರೆಗೆ ಎರಡೂವರೆ ಕಿಮೀ ದೂರ ಸಾಗಿತು. ಮಾರ್ಗದುದ್ದಕ್ಕೂ ಸಾಕಷ್ಟು ಸಂಖ್ಯೆಯಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ನೆರೆದ ಜನರು ಪ್ರಧಾನಿಗೆ ಶುಭ ಹಾರೈಸಿದರು. ಈ ವೇಳೆ ಒಂದೆಡೆ ವ್ಹೀಲ್ಚೇರ್ನಲ್ಲಿ ಕೂತಿದ್ದ ವಿಶೇಷ ಚೇತನ ಮಹಿಳೆಯೊಬ್ಬರನ್ನು ಕಂಡ ಪ್ರಧಾನಿ ಮೋದಿ, ತಮ್ಮ ಮೆರವಣಿಗೆ ವಾಹನದಿಂದ ಕೆಳಗಿಳಿದು ಹೋಗಿ ಆ ಮಹಿಳೆಯನ್ನು ಮಾತನಾಡಿಸಿದ ಘಟನೆ ನಡೆಯಿತು. ಸ್ಪೇನ್ ಪ್ರಧಾನಿಗಳೂ ಕೆಳಗಿಳಿದು ಬಂದು ಮಹಿಳೆಯನ್ನು ಮಾತನಾಡಿಸಿದರು. ಈ ವೇಳೆ ಆ ಮಹಿಳೆ ಭಾವುಕರಾಗಿದ್ದು ಕಂಡು ಬಂದಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Latest Videos

ರಂಗು ರಂಗಿನ ದೀಪಗಳಿಂದ ಕಂಗೊಳಿಸುತ್ತಿದೆ ಶಕ್ತಿಸೌಧ, ಏನು ವಿಶೇಷ ಗೊತ್ತಾ?

ಯುಗಾದಿ ಹಬ್ಬಕ್ಕೆ ಊರುಗಳತ್ತ ಜನ: ಬೆಂಗಳೂರಿನಲ್ಲಿ ಫುಲ್ ಟ್ರಾಫಿಕ್ ಜಾಮ್

ಪ್ರೇಕ್ಷಕರ ನಗು-ಅಳು ನೋಡಿ ‘ಮನದ ಕಡಲು’ ನಾಯಕಿಯರು ಹೇಳಿದ್ದೇನು ನೋಡಿ..

ಟಿವಿ9 ನೆಟ್ವರ್ಕ್ ಜಾಗತಿಕ ಪ್ರೇಕ್ಷಕರನ್ನು ಸೃಷ್ಟಿಸುತ್ತಿದೆ; ಪಿಎಂ ಮೋದಿ
