ಸಮಿತಿಯಲ್ಲಿ ಹೆಸರು ಸೇರಿಸದೆ ವಿಜಯೇಂದ್ರರಿಂದ ನನ್ನನ್ನು ತುಳಿಯುವ ಪ್ರಯತ್ನ: ಬಸನಗೌಡ ಯತ್ನಾಳ್

ಸಮಿತಿಯಲ್ಲಿ ಹೆಸರು ಸೇರಿಸದೆ ವಿಜಯೇಂದ್ರರಿಂದ ನನ್ನನ್ನು ತುಳಿಯುವ ಪ್ರಯತ್ನ: ಬಸನಗೌಡ ಯತ್ನಾಳ್
|

Updated on:Oct 28, 2024 | 3:33 PM

ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅಲ್ಪಸಂಖ್ಯಾತ ಮತ್ತು ವಕ್ಫ್ ಮಂಡಳಿಗೆ ₹ 1,000 ಕೋಟಿ ನೀಡಿದ್ದರು, ತಾನು ತಕರಾರು ಎತ್ತದೆ ಹೋಗಿದ್ದರೆ ಹಣ ಜಮೀರ್ ಅಹ್ಮದ್ ಕೈ ಸೇರುತಿತ್ತು, ಅಷ್ಟು ದೊಡ್ಡ ಬಿಡುಗಡೆ ಮಾಡಿಸಲು ವಿಜಯೇಂದ್ರ ಎಷ್ಟು ಕೋಟಿ ಪಡೆದಿದ್ದರು ಅನ್ನೋದು ಗೊತ್ತಾಗಬೇಕಿದೆ ಎಂದು ಯತ್ನಾಳ್ ಹೇಳಿದರು.

ವಿಜಯಪುರ: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನಡುವೆ ಮತ್ತೊಂದು ಸುತ್ತಿನ ಕದನ ಶುರುವಾಗಿದೆ. ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಯತ್ನಾಳ್, ವಕ್ಫ್ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ರೈತರ ಸಮಸ್ಯೆಗಳನ್ನು ಆಲಿಸಲು ವಿಜಯೇಂದ್ರ ರಚಿಸಿರುವ ಸಮಿತಿಯಲ್ಲಿ ತಾನು ಮತ್ತು ವಿಜಯಪುರ ಸಂಸದರ ಹೆಸರಿಲ್ಲ, ರೈತರಿಗಾಗಿ ಅಸಲು ಹೋರಾಟ ಮಾಡುತ್ತಿರುವ ತಮ್ಮನ್ನು ತುಳಿಯುವ ಪ್ರಯತ್ನವನ್ನು ವಿಜಯೇಂದ್ರ ಮಾಡುತ್ತಿದ್ದಾರೆ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಜಮೀರ್ ಹೇಳುವ ಭೂಮಿಯನ್ನು ರೈತರು ಸಾಗುವಳಿ ಮಾಡಿಕೊಂಡು ಬಂದಿದ್ದಾರೆ: ಬಸನಗೌಡ ಯತ್ನಾಳ್

Published On - 3:32 pm, Mon, 28 October 24

Follow us