Auto Rickshaw Drivers Protest: ಮುಷ್ಕರದ ನಡುವೆ ರಸ್ತೆಗಿಳಿದ ಚಾಲಕರಿಗೆ ಪ್ರತಿಭಟನೆ ನಡೆಸುತ್ತಿರುವ ಚಾಲಕರಿಂದ ತರಾಟೆ
ಬೈಕ್ ಟ್ಯಾಕ್ಸಿ ಸೇವೆಯನ್ನ ಅನಧಿಕೃತಾಗಿ ಅಂದರೆ ಸೇವೆಗೆ ಕಡ್ಡಾಯವಾಗಿರುವ ಹಳದಿ ಪ್ಲೇಟ್ ಅಳವಡಿಸದೆ ನಡೆಸಲಾಗುತ್ತಿದ್ದು ಇದರಿಂದ ಅವರ ಆದಾಯದ ಮೇಲೆ ದೊಡ್ಡ ಹೊಡೆತ ಬಿದ್ದಿದೆ ಎಂದು ಚಾಲಕರು ದೂರುತ್ತಿದ್ದಾರೆ.
ಬೆಂಗಳೂರು: ರ‍್ಯಾಪಿಡ್ (Rapid) ಮತ್ತು ಇತರ ಸಂಸ್ಥೆಗಳು ನಡೆಸುತ್ತಿರುವ ಬೈಕ್ ಟ್ಯಾಕ್ಸಿ ಸೇವೆಯನ್ನು ನಿಷೇಧಿಸಬೇಕೆಂದು ಒತ್ತಾಯಿಸಿ ಅಟೋರಿಕ್ಷಾ ಚಾಲಕರು (autorickshaw drivers) ಇಂದು ನಗರದಲ್ಲಿ ಮುಷ್ಕರ ನಡೆಸುತ್ತಿದ್ದಾರೆ. ಚಾಲಕರ ದೂರೇನೆಂದರೆ, ಬೈಕ್ ಟ್ಯಾಕ್ಸಿ ಸೇವೆಯನ್ನು (bike taxi service) ಅನಧಿಕೃತಾಗಿ ಅಂದರೆ ಟ್ಯಾಕ್ಸಿ ಸೇವೆಗೆ ಕಡ್ಡಾಯವಾಗಿರುವ ಹಳದಿ ಪ್ಲೇಟ್ ಅಳವಡಿಸದೆ ನಡೆಸಲಾಗುತ್ತಿದ್ದು ಇದರಿಂದ ಅವರ ಆದಾಯದ ಮೇಲೆ ದೊಡ್ಡ ಹೊಡೆತ ಬಿದ್ದಿದೆ. ನಗರದ ಎಲ್ಲ ಅಟೋ ಚಾಲಕ ಸಂಸ್ಥೆಗಳು ಮುಷ್ಕರಕ್ಕೆ ಬೆಂಬಲ ನೀಡಿದಾಗ್ಯೂ ಕೆಲ ಆಟೋ ಚಾಲಕರು ವಾಹನಗಳೊಂದಿಗೆ ರಸ್ತೆಗಿಳಿದು ಸವಾರಿ ಓಡಿಸುತ್ತಿದ್ದಾರೆ. ಮುಷ್ಕರ ನಡೆಸುತ್ತಿರುವವರು ಅವರನ್ನು ಅಡ್ಡಗಟ್ಟಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Mar 20, 2023 10:36 AM
Latest Videos