Auto Rickshaw Drivers Protest: ಕಾರ್ಪೋರೇಷನ್ ಸರ್ಕಲ್ ಬಳಿ ಆಟೋ ಚಾಲಕರಿಂದ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ

Auto Rickshaw Drivers Protest: ಕಾರ್ಪೋರೇಷನ್ ಸರ್ಕಲ್ ಬಳಿ ಆಟೋ ಚಾಲಕರಿಂದ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ

ಅರುಣ್​ ಕುಮಾರ್​ ಬೆಳ್ಳಿ
|

Updated on:Mar 20, 2023 | 11:56 AM

ಮುಷ್ಕರದ ಹೊರತಾಗಿಯೂ ಸವಾರಿ ಹೋಗುತ್ತಿರುವ ಆಟೋ ಚಾಲಕರ ವಾಹನಗಳನ್ನು ಮುಷ್ಕರನಿರತ ಆಟೋ ಚಾಲಕರು ಅವುಗಳಲ್ಲಿ ಪ್ರಯಾಣಿಸುತ್ತಿದ್ದ ನಾಗರಿಕರನ್ನು ಕೆಳಗಿಳಿಸಿ ಚಕ್ರಗಳಿಂದ ಗಾಳಿ ತೆಗೆದರು.

ಬೆಂಗಳೂರು: ನಗರದಲ್ಲಿ ಬೈಕ್ ಟ್ಯಾಕ್ಸಿಗಳನ್ನು (bike taxi) ನಿಷೇಧಿಸಬೇಕೆಂದು ಸರ್ಕಾರ ವಿರುದ್ಧ ಆಟೋಚಾಲಕರ ಮುಷ್ಕರ ಬಿಸಿಲೇರುತ್ತಿದ್ದಂತೆ ಕಾವೇರತೊಡಗಿದೆ. ಮುಷ್ಕರದ (protest) ಹೊರತಾಗಿಯೂ ಸವಾರಿ ಹೋಗುತ್ತಿರುವ ಆಟೋ ಚಾಲಕರ ವಾಹನಗಳನ್ನು ಮುಷ್ಕರನಿರತ ಆಟೋ ಚಾಲಕರು ಅವುಗಳಲ್ಲಿ ಪ್ರಯಾಣಿಸುತ್ತಿದ್ದ ನಾಗರಿಕರನ್ನು ಕೆಳಗಿಳಿಸಿ ಚಕ್ರಗಳಿಂದ ಗಾಳಿ (deflate) ತೆಗೆದರು. ಆಟೋ ಓಡಿಸುತ್ತಿರುವ ಚಾಲಕರು ತಮ್ಮ ಅನಿವಾರ್ಯತೆ ಮತ್ತು ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದಾರೆ. ನಗರದ ಕಾರ್ಪೋರೇಷನ್ ಸರ್ಕಲ್ ಮುಂದೆ ಗುಂಪುಗೂಡಿದ ಆಟೋ ಚಾಲಕರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Mar 20, 2023 11:56 AM