Toyota: ಪ್ರೀಮಿಯಂ ಫೀಚರ್ಸ್​​ಗಳೊಂದಿಗೆ ಜೆಎಕ್ಸ್​​(ಒ) ವೆರಿಯೆಂಟ್​ ಬಿಡುಗಡೆ ಮಾಡಿದ ಟೊಯೊಟಾ

|

Updated on: Apr 17, 2024 | 9:57 PM

ಟೊಯೊಟಾ ತನ್ನ ಜನಪ್ರಿಯ ಇನೋವಾ ಹೈಕ್ರಾಸ್ ಎಂಪಿವಿ ಆವೃತ್ತಿಯಲ್ಲಿ ಹೊಸದಾಗಿ ಜಿಎಕ್ಸ್(ಒ) ವೆರಿಯೆಂಟ್ ಬಿಡುಗಡೆ ಮಾಡಿದೆ. ಹೊಸ ವೆರಿಯೆಂಟ್ ಈ ಹಿಂದಿನ ಜಿಎಕ್ಸ್ ವೆರಿಯೆಂಟ್ ಗಿಂತಲೂ ಹೆಚ್ಚಿನ ಮಟ್ಟದ ಫೀಚರ್ಸ್ ಹೊಂದಿದ್ದು, ಇದು ಸುಮಾರು ರೂ. 1 ಲಕ್ಷ ರೂ. ಹೆಚ್ಚುವರಿ ಬೆಲೆ ಹೊಂದಿದೆ. ಇದರ ಸುರಕ್ಷತಾ ಕಿಟ್ ಹೆಚ್ಚುವರಿಯಾಗಿ ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್​ ಒಳಗೊಂಡಿದೆ.

ಟೊಯೊಟಾ (Toyota) ಇಂಡಿಯಾ ಕಂಪನಿಯು ತನ್ನ ಜನಪ್ರಿಯ ಇನೋವಾ ಹೈಕ್ರಾಸ್ (Innova Hycross) ಎಂಪಿವಿ ಆವೃತ್ತಿಯಲ್ಲಿ ಹೊಸದಾಗಿ ಜಿಎಕ್ಸ್(ಒ) ವೆರಿಯೆಂಟ್ ಬಿಡುಗಡೆ ಮಾಡಿದೆ. ಹೊಸ ವೆರಿಯೆಂಟ್ ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 20.99 ಲಕ್ಷ ರೂ. ಬೆಲೆ ಹೊಂದಿದೆ. ಹೊಸ ವೆರಿಯೆಂಟ್ ಈ ಹಿಂದಿನ ಜಿಎಕ್ಸ್ ವೆರಿಯೆಂಟ್ ಗಿಂತಲೂ ಹೆಚ್ಚಿನ ಮಟ್ಟದ ಫೀಚರ್ಸ್ ಹೊಂದಿದ್ದು, ಇದು ಸುಮಾರು ರೂ. 1 ಲಕ್ಷ ರೂ. ಹೆಚ್ಚುವರಿ ಬೆಲೆ ಹೊಂದಿದೆ. ಇದರ ಸುರಕ್ಷತಾ ಕಿಟ್ ಹೆಚ್ಚುವರಿಯಾಗಿ ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ. ಸಿವಿಟಿ ಆಟೋಮ್ಯಾಟಿಕ್‌ ಗೇರ್‌ಬಾಕ್ಸ್‌ಗೆ ಜೋಡಿಸಲಾದ 174 ಪಿಎಸ್‌ 2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ ಹೊಂದಿದೆ. ಇದರ ಎಕ್ಸ್​ಶೋರೂಮ್​ ಬೆಲೆ ಸುಮಾರು 21 ಲಕ್ಷ ರೂ. ಹೊಂದಿದೆ. ಈ ಎಂಪಿವಿ 7 ಮತ್ತು 8 ಆಸನಗಳ ವಿನ್ಯಾಸಗೊಂಡಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.