ಆನ್ಲೈನ್ನಲ್ಲಿ ಉಚಿತವಾಗಿ ಆಧಾರ್ ಅಪ್ಡೇಟ್ ಮಾಡುವುದು ಹೇಗೆ ಗೊತ್ತಾ?
ಉಚಿತವಾಗಿ ಆಧಾರ್ ಅಪ್ಡೇಟ್ ಮಾಡಲು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ ಗಡುವು ವಿಸ್ತರಣೆ ಮಾಡಿದೆ. ಶುಲ್ಕ ಪಾವತಿಸುವ ಅಗತ್ಯ ಇಲ್ಲದೇ ಆನ್ಲೈನ್ನಲ್ಲಿ ಉಚಿತವಾಗಿ ಆಧಾರ್ ಅಪ್ಡೇಟ್ ಮಾಡಲು ನೀಡಲಾಗಿದ್ದ ಸಮಯಾವಕಾಶವನ್ನು ಮಾರ್ಚ್ 14ರಿಂದ ಜೂನ್ 14ಕ್ಕೆ ವಿಸ್ತರಿಸಲಾಗಿದೆ. ವಿಳಾಸ ಬದಲಾಯಿಸಲಾಗಿದ್ದರೆ, ಹೆಸರು ಬದಲಾಯಿಸುವುದಿದ್ದರೆ, ಜನ್ಮದಿನಾಂಕ ಬದಲಿಸುವುದಿದ್ದರೆ ಹೀಗೆ ವಿವಿಧ ವಿವರಗಳನ್ನು ಆಧಾರ್ನಲ್ಲಿ ಅಪ್ಡೇಟ್ ಮಾಡಬಹುದು. 10 ವರ್ಷಕ್ಕೂ ಹೆಚ್ಚು ಹಳೆಯ ಆಧಾರ್ ಅನ್ನು ಅಪ್ಡೇಟ್ ಮಾಡಬೇಕು. ಆನ್ಲೈನ್ನಲ್ಲಿ ಈ ಕಾರ್ಯ ಮಾಡುವುದು ಹೇಗೆ? ಇಲ್ಲಿದೆ ಡೀಟೇಲ್ಸ್..
ಉಚಿತವಾಗಿ ಆಧಾರ್ ಅಪ್ಡೇಟ್(Free Aadhaar Update) ಮಾಡಲು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ ಗಡುವು ವಿಸ್ತರಣೆ ಮಾಡಿದೆ. ಶುಲ್ಕ ಪಾವತಿಸುವ ಅಗತ್ಯ ಇಲ್ಲದೇ ಆನ್ಲೈನ್ನಲ್ಲಿ ಉಚಿತವಾಗಿ ಆಧಾರ್ ಅಪ್ಡೇಟ್ ಮಾಡಲು ನೀಡಲಾಗಿದ್ದ ಸಮಯಾವಕಾಶವನ್ನು ಮಾರ್ಚ್ 14ರಿಂದ ಜೂನ್ 14ಕ್ಕೆ ವಿಸ್ತರಿಸಲಾಗಿದೆ. ವಿಳಾಸ ಬದಲಾಯಿಸಲಾಗಿದ್ದರೆ, ಹೆಸರು ಬದಲಾಯಿಸುವುದಿದ್ದರೆ, ಜನ್ಮದಿನಾಂಕ ಬದಲಿಸುವುದಿದ್ದರೆ ಹೀಗೆ ವಿವಿಧ ವಿವರಗಳನ್ನು ಆಧಾರ್ನಲ್ಲಿ ಅಪ್ಡೇಟ್ ಮಾಡಬಹುದು. 10 ವರ್ಷಕ್ಕೂ ಹೆಚ್ಚು ಹಳೆಯ ಆಧಾರ್ ಅನ್ನು ಅಪ್ಡೇಟ್ ಮಾಡಬೇಕು. ಆನ್ಲೈನ್ನಲ್ಲಿ ಈ ಕಾರ್ಯ ಮಾಡುವುದು ಹೇಗೆ? ಇಲ್ಲಿದೆ ನೋಡಿ ಡೀಟೇಲ್ಸ್.. ಆಧಾರ್ ಕಾರ್ಡ್ ಈಗ ಬಹಳ ಪ್ರಮುಖವಾಗಿ ಬೇಕಾಗಿರುವ ದಾಖಲೆಯಾಗಿದೆ. ವೈಯಕ್ತಿಕ ಗುರುತಿನ ಜೊತೆಗೆ ನಮ್ಮ ನಿವಾಸದ ದಾಖಲೆಯಾಗಿಯೂ ಇದನ್ನು ಬಳಸಬಹುದು. ಸರ್ಕಾರಿ ಸೌಲಭ್ಯಗಳು ಸೇರಿದಂತೆ ನಾನಾ ಸೇವೆಗಳಿಗೆ ಆಧಾರ್ ದಾಖಲೆ ನೆರವಾಗುತ್ತದೆ. ವ್ಯಕ್ತಿಯ ಬಯೋಮೆಟ್ರಿಕ್ ದತ್ತಾಂಶ, ವಿಳಾಸ ಮೊದಲಾದ ಮಾಹಿತಿ ಆಧಾರ್ನಲ್ಲಿ ಇರುತ್ತದೆ. ಆಧಾರ್ನಲ್ಲಿ ಕೆಲವಿಷ್ಟು ಮಾಹಿತಿಯನ್ನು ಆನ್ಲೈನ್ನಲ್ಲಿ ಅಪ್ಡೇಟ್ ಮಾಡಲು ಸಾಧ್ಯವಿದೆ. ಮಾರ್ಚ್ 14ರವರೆಗೂ ಉಚಿತವಾಗಿ ಮಾಡಲು ಅವಕಾಶ ನೀಡಲಾಗಿತ್ತು. ಈಗ ಅದನ್ನು ಜೂನ್ 14ಕ್ಕೆ ವಿಸ್ತರಿಸಲಾಗಿದೆ. ಅಂದರೆ ಜೂನ್ 14ರವರೆಗೂ ನೀವು ಆನ್ಲೈನ್ನಲ್ಲಿ ಆಧಾರ್ ಅನ್ನು ಅಪ್ಡೇಟ್ ಮಾಡಬಹುದಾಗಿದೆ.
ಆಧಾರ್ ಯಾಕೆ ಅಪ್ಡೇಟ್ ಮಾಡಬೇಕು ಎಂದು ಹಲವರು ಪ್ರಶ್ನೆ ಮಾಡಬಹುದು. ಹತ್ತಕ್ಕೂ ಹೆಚ್ಚು ವರ್ಷಗಳಿಂದ ಆಧಾರ್ ಅನ್ನು ಅಪ್ಡೇಟ್ ಮಾಡದೇ ಇದ್ದವರು ಅದನ್ನು ಅಪ್ಡೇಟ್ ಮಾಡಬೇಕು ಎಂದು ಸರ್ಕಾರ ಸೂಚಿಸಿದೆ. ಬಹಳಷ್ಟು ಜನರು ಒಮ್ಮೆ ಆಧಾರ್ ಕಾರ್ಡ್ ಮಾಡಿಸಿದಾಗಿನಿಂದ ಅದನ್ನು ಅಪ್ಡೇಟ್ ಮಾಡಿಲ್ಲ. ನಿಮ್ಮ ಪ್ರೊಫೈಲ್ನಲ್ಲಿ ಯಾವುದೇ ಮಾಹಿತಿ ಬದಲಾವಣೆ ಇಲ್ಲದಿದ್ದರೂ ಕೂಡ ಅದನ್ನು ನಮೂದಿಸಿ ಅಪ್ಡೇಟ್ ಮಾಡಬಹುದು.
ವಯಸ್ಸಾದಂತೆ ಬೆರಳು ಸವೆದು ಬೆರಳಚ್ಚು ಗುರುತು ಮಾಸಬಹುದು. ಮೊದಲಿನಂತೆ ಬೆರಳಚ್ಚು ಸರಿಯಾಗಿ ಮೂಡದೇ ಇರಬಹುದು. ಹೀಗಾಗಿ, ಆಧಾರ್ನಲ್ಲಿ ನಿಮ್ಮ ಬಯೋಮೆಟ್ರಿಕ್ ಮಾಹಿತಿಯನ್ನು ಅಪ್ಡೇಟ್ ಮಾಡುವುದು ಅವಶ್ಯಕ ಎಂದು ಹೇಳಲಾಗುತ್ತದೆ. ಆನ್ಲೈನ್ನಲ್ಲಿ ಆಧಾರ್ ಅಪ್ಡೇಟ್ ಮಾಡುವ ಕ್ರಮಗಳು ಹೀಗಿವೆ. ಮೊದಲಿಗೆ ಯುಐಡಿಎಐನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ. (uidai.gov.in/) ಈ ವೆಬ್ಸೈಟ್ನಿಂದ ಮೈ ಆಧಾರ್ ಪೋರ್ಟಲ್ಗೆ ಹೋಗಿ. ಇಲ್ಲಿ ಆಧಾರ್ ನಂಬರ್ ಮತ್ತು ಒಟಿಪಿ ಮೂಲಕ ಲಾಗಿನ್ ಆಗಿರಿ. ಅದರಲ್ಲಿ ನಿಮ್ಮ ಪ್ರೊಫೈಲ್ಗೆ ಹೋಗಿ ಮಾಹಿತಿ ವೀಕ್ಷಿಸಬಹುದು. ಎಲ್ಲವೂ ಸರಿ ಇದ್ದರೆ ಒಪ್ಪಿಗೆ ನೀಡಬಹುದು.
ಇದನ್ನೂ ಓದಿ:Aadhaar Update Document: ಆಧಾರ್ ಕಾರ್ಡ್ ಅಪ್ಡೇಟ್ಗೆ ಯಾವ ದಾಖಲೆ ಬೇಕು ಮತ್ತು ಸಲ್ಲಿಕೆ ಹೇಗೆ?
ಒಂದು ವೇಳೆ ವಿಳಾಸ ಮತ್ತಿತರ ಮಾಹಿತಿ ಬದಲಿಸಬೇಕೆಂದಿದ್ದರೆ ಅದನ್ನು ಮಾಡಬಹುದು. ಅದರ ದಾಖಲೆಗಳ ಸ್ಕ್ಯಾನ್ಡ್ ಕಾಪಿ ನಿಮ್ಮ ಬಳಿ ಇರಬೇಕು. ವಿಳಾಸ ಮಾಹಿತಿ ಬದಲಾಯಿಸಬೇಕಿದ್ದರೆ ಹೊಸ ವಿಳಾಸದ ಸಾಕ್ಷ್ಯ ಇರುವ ದಾಖಲೆ ಇರಬೇಕು. ಹೆಸರು ಬದಲಾಯಿಸಲಾಗಿದ್ದರೆ, ಅದಕ್ಕೆ ಪೂರಕ ದಾಖಲೆ ಇರಬೇಕು. ಆಧಾರ್ ಅಪ್ಡೇಟ್ ಅನ್ನು ಆನ್ಲೈನ್ ಮಾತ್ರವಲ್ಲದೆ, ಆಧಾರ್ ಕೇಂದ್ರಕ್ಕೆ ಹೋಗಿಯೂ ಮಾಡಿಸಬಹುದು. ನಿಮ್ಮ ಸಮೀಪದ ಆಧಾರ್ ಕೇಂದ್ರಗಳಿಗೆ ಹೋಗಿ ಆಧಾರ್ ಅಪ್ಡೇಟ್ ಮಾಡಬಹುದು. ಬೆಂಗಳೂರು ಒನ್ ಇತ್ಯಾದಿ ಕಡೆಯೂ ಈ ಸೇವೆ ಲಭ್ಯ ಇರುತ್ತದೆ. ಅಲ್ಲಿ 50 ರೂಪಾಯಿ ಶುಲ್ಕ ಪಾವತಿಸಬೇಕಾಗುತ್ತದೆ.
ತಂತ್ರಜ್ಞಾನ ಕುರಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದ್ರೆ ನೆಮ್ಮದಿಯಾಗ್ ಇರ್ಬೇಕ್: ದರ್ಶನ್ ಪರಿಸ್ಥಿತಿ ಬಗ್ಗೆ ಕೆ. ಮಂಜು ಮಾತು

ವಿಷ್ಣು ಸಮಾಧಿ ಮರು ನಿರ್ಮಾಣಕ್ಕೆ ಬಾಲಣ್ಣ ಪುತ್ರಿ ಗೀತಾ ಜಾಗ ಕೊಡ್ತಾರಾ?

ಮೃತ ಮತದಾರರ ಜತ ಟೀ ಕುಡಿಯುವಂತೆ ಮಾಡಿದ ಆಯೋಗಕ್ಕೆ ಧನ್ಯವಾದ:ರಾಹುಲ್

ಶಿವಕುಮಾರ್ ಸಿಎಂ ಆಗ್ತಾರಾ ಅಂತ ಕೇಳಿದರೆ ಇಕ್ಬಾಲ್ ಹುಸ್ಸೇನ್ ಮುಗುಳ್ನಕ್ಕರು
