Aadhaar Update Document: ಆಧಾರ್ ಕಾರ್ಡ್​​ ಅಪ್​ಡೇಟ್​ಗೆ ಯಾವ ದಾಖಲೆ ಬೇಕು ಮತ್ತು ಸಲ್ಲಿಕೆ ಹೇಗೆ?

ಆಧಾರ್ ಕಾರ್ಡ್​ನಲ್ಲಿರುವ ನಿಮ್ಮ ವಿವರಗಳನ್ನು ಆನ್​ಲೈನ್​ನಲ್ಲಿ ಉಚಿತವಾಗಿ ಮಾರ್ಪಡಿಸಲು ಮಾರ್ಚ್ 14ಕ್ಕೆ ಇದ್ದ ಡೆಡ್​ಲೈನ್ ಅನ್ನು ಜೂನ್ 14ಕ್ಕೆ ವಿಸ್ತರಿಸಲಾಗಿದೆ. ಮೈ ಆಧಾರ್ ಪೋರ್ಟಲ್​ನಲ್ಲಿ ವ್ಯಕ್ತಿಯ ವಿವರ ಮತ್ತು ವಿಳಾಸದ ವಿವರವನ್ನು ಬದಲಿಸಬಹುದು. ಅದಕ್ಕೆ ಸಂಬಂಧ ಪಟ್ಟ ಪ್ರೂಫ್ ದಾಖಲೆಗಳ ಸ್ಕ್ಯಾನ್ಡ್ ಕಾಪಿಯನ್ನು ಮೈ ಆಧಾರ್ ಪೋರ್ಟಲ್​ನಲ್ಲಿ ಅಪ್​ಲೋಡ್ ಮಾಡಬೇಕು.

Aadhaar Update Document: ಆಧಾರ್ ಕಾರ್ಡ್​​ ಅಪ್​ಡೇಟ್​ಗೆ ಯಾವ ದಾಖಲೆ ಬೇಕು ಮತ್ತು ಸಲ್ಲಿಕೆ ಹೇಗೆ?
|

Updated on: Apr 17, 2024 | 7:11 AM

ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ, ಆಧಾರ್ ಕಾರ್ಡ್ ಅನ್ನು ಅಪ್​ಡೇಟ್ ಮಾಡುವಂತೆ ಸೂಚಿಸಿದೆ. ಪ್ರತಿ ಹತ್ತು ವರ್ಷಕ್ಕೆ ಒಮ್ಮೆ ಆಧಾರ್ ಕಾರ್ಡ್ ಅಪ್​ಡೇಟ್ ಮಾಡಬೇಕು ಎಂದು ಪ್ರಾಧಿಕಾರ ಹೇಳುತ್ತದೆ. ಆಧಾರ್ ಕಾರ್ಡ್​ನಲ್ಲಿರುವ ನಿಮ್ಮ ವಿವರಗಳನ್ನು ಆನ್​ಲೈನ್​ನಲ್ಲಿ ಉಚಿತವಾಗಿ ಮಾರ್ಪಡಿಸಲು ಮಾರ್ಚ್ 14ಕ್ಕೆ ಇದ್ದ ಡೆಡ್​ಲೈನ್ ಅನ್ನು ಜೂನ್ 14ಕ್ಕೆ ವಿಸ್ತರಿಸಲಾಗಿದೆ. ಮೈ ಆಧಾರ್ ಪೋರ್ಟಲ್​ನಲ್ಲಿ ವ್ಯಕ್ತಿಯ ವಿವರ ಮತ್ತು ವಿಳಾಸದ ವಿವರವನ್ನು ಬದಲಿಸಬಹುದು. ಅದಕ್ಕೆ ಸಂಬಂಧ ಪಟ್ಟ ಪ್ರೂಫ್ ದಾಖಲೆಗಳ ಸ್ಕ್ಯಾನ್ಡ್ ಕಾಪಿಯನ್ನು ಮೈ ಆಧಾರ್ ಪೋರ್ಟಲ್​ನಲ್ಲಿ ಅಪ್​ಲೋಡ್ ಮಾಡಬೇಕು. ಆಧಾರ್ ಕಾರ್ಡ್ ಅಪ್​ಡೇಟ್ ಮಾಡುವ ಕುರಿತು ಹೆಚ್ಚಿನ ಮಾಹಿತಿ ಈ ವಿಡಿಯೊದಲ್ಲಿದೆ.

Follow us