ಚನ್ನರಾಯಪಟ್ಟಣದಲ್ಲಿ ಪ್ರಜ್ವಲ್ ಗೆ ಮತ ಕೇಳುವಾಗ ಕುಮಾರಸ್ವಾಮಿ ತಮ್ಮ ಮತ್ತು ಡಾ ಮಂಜುನಾಥ ಬಗ್ಗೆ ಹೆಚ್ಚು ಮಾತಾಡಿದರು!
ನಂತರ ತಮ್ಮ ಮುಂದಿರುವ ಸವಾಲುಗಳ ಬಗ್ಗೆ ಮಾತಾಡಿದ ಅವರು ಮಂಡ್ಯದಲ್ಲಿ ಪ್ರಚಾರ ಮಾಡಲು ತನಗೆ ಸಮಯ ಸಿಗುತ್ತಿಲ್ಲ ಎಂದರು. ಅಲ್ಲಿನ ಎಂಟು ವಿಧಾನಸಭಾ ಕ್ಷೇತ್ರಗಳ 8 ಸಭೆಗಳಲ್ಲಿ ಭಾಗವಹಿಸಲು ಮಾತ್ರ ಸಾಧ್ಯವಾಗುತ್ತಿದೆ ಎಂದ ಅವರು ಕೆಅರ್ ಪೇಟೆಯಲ್ಲಿ ಇಂದು ಮಧ್ಯಾಹ್ನ ಒಂದು ಸಭೆಯಲ್ಲಿ ಪಾಲ್ಗೊಂಡ ಕಾರಣ ಚನ್ನರಾಯಪಟ್ಟಣಕ್ಕೆ ಬರೋದು ತಡವಾಯಿತು, ಅದಕ್ಕಾಗಿ ಕ್ಷಮೆ ಯಾಚಿಸುವೆ ಎಂದರು.
ಹಾಸನ: ಜೆಡಿಎಸ್ ಪಕ್ಷದ ಧುರೀಣ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಅವರು ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಇಂದು ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ (Prajwal Revanna) ಚುನಾವಣಾ ಪ್ರಚಾರ ಮಾಡಿದರು. ಅವರು ಪ್ರಜ್ವಲ್ ಗಾಗಿ ವೋಟು ಕೇಳುವುದಕ್ಕಿಂತ ಹೆಚ್ಚು ಮಂಡ್ಯದಲ್ಲಿ ತಮ್ಮ ಸ್ಪರ್ಧೆ ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಬಿಜೆಪಿ ಕ್ಯಾಂಡಿಡೇಟ್ ಆಗಿ ಸ್ಪರ್ಧಿಸುತ್ತಿರುವ ಡಾ ಸಿಎನ್ ಮಂಜುನಾಥ್ (Dr CN Manjunath) ಅವರ ಬಗ್ಗೆ ಹೆಚ್ಚು ಮಾತಾಡಿದರು. ಅಸಲಿಗೆ, ಡಾ ಮಂಜುನಾಥ್ ಅವರು ಚನ್ನರಾಯಪಟ್ಟಣ ತಾಲ್ಲೂಕಿನವರಂತೆ. ಒಬ್ಬ ಹೃದ್ರೋಗ ತಜ್ಞರಾಗಿ ಅವರು ಲಕ್ಷಾಂತರ ಜನಕ್ಕೆ ಮಾಡಿರುವ ಸೇವೆಯನ್ನು ಕುಮಾರಸ್ವಾಮಿ ಪ್ರಸ್ತಾಪಿಸಿದರು. ಅವರನ್ನು ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಕಣಕ್ಕಿಳಿಸಲು ಬಿಜೆಪಿಯ ರಾಷ್ಟ್ರೀಯ ನಾಯಕರ ಒತ್ತಡವೇ ಜಾಸ್ತಿಯಾಗಿತ್ತು, ಹಾಗಾಗಿ ಅವರನ್ನು ಆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿಸಲಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.
ನಂತರ ತಮ್ಮ ಮುಂದಿರುವ ಸವಾಲುಗಳ ಬಗ್ಗೆ ಮಾತಾಡಿದ ಅವರು ಮಂಡ್ಯದಲ್ಲಿ ಪ್ರಚಾರ ಮಾಡಲು ತನಗೆ ಸಮಯ ಸಿಗುತ್ತಿಲ್ಲ ಎಂದರು. ಅಲ್ಲಿನ ಎಂಟು ವಿಧಾನಸಭಾ ಕ್ಷೇತ್ರಗಳ 8 ಸಭೆಗಳಲ್ಲಿ ಭಾಗವಹಿಸಲು ಮಾತ್ರ ಸಾಧ್ಯವಾಗುತ್ತಿದೆ ಎಂದ ಅವರು ಕೆಅರ್ ಪೇಟೆಯಲ್ಲಿ ಇಂದು ಮಧ್ಯಾಹ್ನ ಒಂದು ಸಭೆಯಲ್ಲಿ ಪಾಲ್ಗೊಂಡ ಕಾರಣ ಚನ್ನರಾಯಪಟ್ಟಣಕ್ಕೆ ಬರೋದು ತಡವಾಯಿತು, ಅದಕ್ಕಾಗಿ ಕ್ಷಮೆ ಯಾಚಿಸುವೆ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸ್ವಾಮೀಜಿ ಅಥವಾ ಬೇರೆಯವರ ಫೋನ್ ಟ್ಯಾಪ್ ಮಾಡಿಸುವ ಅವಶ್ಯಕತೆ ನನಗಿರಲಿಲ್ಲ: ಹೆಚ್ ಡಿ ಕುಮಾರಸ್ವಾಮಿ