ವಿವಾದಕ್ಕೀಡಾಗಿದ್ದ ಕೆರಗೋಡುನಲ್ಲಿ ಕುಮಾರಸ್ವಾಮಿ ಮತಬೇಟೆ, ರಾಮನವಮಿ ಪ್ರಯುಕ್ತ ಹನಮ ದೇವಸ್ಥಾನಲ್ಲಿ ಪೂಜೆ
ಗುಡಿಯ ಆವರಣದಲ್ಲಿ ಕುಮಾರಸ್ವಾಮಿಯವರು ತಾಯಂದಿರೊಂದಿಗೆ ಬಂದಿದ್ದ ಮಕ್ಕಳ ಕೆನ್ನೆ ತಟ್ಟಿ, ತಲೆ ನೇವರಿಸಿ ಪ್ರೀತಿ ವ್ಯಕ್ತಪಡಿಸಿದರು. ಮಂಡ್ಯ ಲೋಕಸಭಾ ಕ್ಷೇತ್ರ ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ನಾಯಕರಿಗೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಗೆದ್ದೇ ತೀರಬೇಕೆಂಬ ಛಲ ಕುಮಾರಸ್ವಾಮಿಯವರಲ್ಲಿದ್ದರೆ ಅವರನ್ನು ಸೋಲಿಸಲು ಕಾಂಗ್ರೆಸ್ ನಾಯಕರು ಸಂಕಲ್ಪ ಮಾಡಿಕೊಂಡಿದ್ದಾರೆ.
ಮಂಡ್ಯ: ಮಂಡ್ಯ ತಾಲ್ಲೂಕಿನ ಕೆರಗೋಡು ಗ್ರಾಮ ಕಳೆದ ತಿಂಗಳು ಸುದ್ದಿಯಲ್ಲಿತ್ತು. ಹನುಮ ಧ್ವಜವನ್ನು (Hanuman flag) ಕೆಳಗಿಳಿಸಿ ರಾಷ್ಟ್ರಧ್ವಜ (National flag) ಹಾರಿಸುವಂತೆ ಕಾಂಗ್ರೆಸ್ ಸರ್ಕಾರದ ಆದೇಶ ವಿರುದ್ಧ ರೊಚ್ಚಿಗೆದ್ದ ಹಿಂದೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಒಂದೆರಡು ದಿನಗಳ ಕಾಲ ಮಂಡ್ಯ ಜಿಲ್ಲೆ ಪ್ರಕ್ಷುಬ್ದವಾಗಿದ್ದನ್ನು ನಾವು ವರದಿ ಮಾಡಿದ್ದೇವೆ. ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಇಂದು ಗ್ರಾಮದಲ್ಲಿ ಮತಯಾಚಿಸುವ ಮೊದಲು, ಅಲ್ಲಿನ ಹನುಮ ದೇವಸ್ಥಾನದವರೆಗೆ ಮೆರವಣಿಗೆಯಲ್ಲ್ಲಿ ಹೋದರು. ರಾಮನವಮಿ ಪ್ರಯುಕ್ತ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ನೆರೆದಿದ್ದ ನೂರಾರು ಭಕ್ತರಿಗೆ ಹಬ್ಬದ ಶುಭಾಷಯ ಕೋರಿದರು. ಹೆಗಲ ಮೇಲೆ ಕೇಸರಿ ಶಲ್ಯ ಧರಿಸಿ ಅವರು ಮಹಿಳೆಯರಿಂದ ಆರತಿ ಬೆಳಗಿಸಿಕೊಳ್ಳುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಗುಡಿಯ ಆವರಣದಲ್ಲಿ ಕುಮಾರಸ್ವಾಮಿಯವರು ತಾಯಂದಿರೊಂದಿಗೆ ಬಂದಿದ್ದ ಮಕ್ಕಳ ಕೆನ್ನೆ ತಟ್ಟಿ, ತಲೆ ನೇವರಿಸಿ ಪ್ರೀತಿ ವ್ಯಕ್ತಪಡಿಸಿದರು. ಮಂಡ್ಯ ಲೋಕಸಭಾ ಕ್ಷೇತ್ರ ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ನಾಯಕರಿಗೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಗೆದ್ದೇ ತೀರಬೇಕೆಂಬ ಛಲ ಕುಮಾರಸ್ವಾಮಿಯವರಲ್ಲಿದ್ದರೆ ಅವರನ್ನು ಸೋಲಿಸಲು ಕಾಂಗ್ರೆಸ್ ನಾಯಕರು ಸಂಕಲ್ಪ ಮಾಡಿಕೊಂಡಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮಹಿಳೆಯರಿಗೆ ಅಪಮಾನ ಆರೋಪ: ಎಚ್ಡಿ ಕುಮಾರಸ್ವಾಮಿಗೆ ಮತ್ತೊಂದು ಸಂಕಷ್ಟ
ನ್ಯೂ ಇಯರ್: ಕುಡಿದು ಟೈಟಾದ ಯುವತಿ, ಆಟೋದಲ್ಲಿ ಕೂರಿಸಿ ಕಳಿಸಿದ ಪೊಲೀಸ್
ಬೆಳಗಾವಿಯಲ್ಲಿ ನ್ಯೂಇಯರ್ ಕಿಕ್; ಭರ್ಜರಿ ಸ್ಟೆಪ್ ಹಾಕಿದ ಜನರು
New Year 2026: ಹೊಸವರ್ಷಕ್ಕೆ ಅದ್ಧೂರಿ ಸ್ವಾಗತ; ಕುಣಿದು ಕುಪ್ಪಳಿಸಿದ ಜನರು
ನ್ಯೂಇಯರ್ ಸಂಭ್ರಮದ ಮಧ್ಯೆ ಪುಂಡಾಟ: ಮಹಿಳಾ ಪೊಲೀಸರ ಜತೆ ಅನುಚಿತ ವರ್ತನೆ

