‘ಬದುಕೊಂದು ದೊಡ್ಡ ಅವಕಾಶ, ಅದನ್ನು ದ್ವಾರಕೀಶ್ ಬಳಸಿಕೊಂಡ್ರು’: ಯಶ್
ನಟ ರಾಕಿಂಗ್ ಸ್ಟಾರ್ ಯಶ್ ಅವರು ದ್ವಾರಕೀಶ್ ಅವರ ಅಂತಿಮ ದರ್ಶನ ಪಡೆದಿದ್ದಾರೆ. ಕುಟುಂಬದವರಿಗೆ ಅವರು ಸಾಂತ್ವನ ಹೇಳಿದ್ದಾರೆ. ಆ ಬಳಿಕ ಅವರು ಮಾಧ್ಯಮದ ಜೊತೆ ಮಾತನಾಡಿದ್ದಾರೆ. ‘ಬದುಕನ್ನು ಸರಿಯಾದ ರೀತಿಯಲ್ಲಿ ದ್ವಾರಕೀಶ್ ಬಳಸಿಕೊಂಡಿದ್ದಾರೆ’ ಎಂಬ ಅಭಿಪ್ರಾಯವನ್ನು ಹೊರಹಾಕಿದ್ದಾರೆ ಯಶ್.
ನಟ ರಾಕಿಂಗ್ ಸ್ಟಾರ್ ಯಶ್ (Yash) ಅವರು ದ್ವಾರಕೀಶ್ ಅವರ ಅಂತಿಮ ದರ್ಶನ ಪಡೆದಿದ್ದಾರೆ. ಕುಟುಂಬದವರಿಗೆ ಅವರು ಸಾಂತ್ವನ ಹೇಳಿದ್ದಾರೆ. ಆ ಬಳಿಕ ಅವರು ಮಾಧ್ಯಮದ ಜೊತೆ ಮಾತನಾಡಿದ್ದಾರೆ. ‘ದ್ವಾರಕೀಶ್ ಮಹಾನ್ ವ್ಯಕ್ತಿ. ಪ್ರಪಂಚದಲ್ಲಿ ಸಾಕಷ್ಟು ಜನರು ಹುಟ್ಟುತ್ತಾರೆ, ಸಾಯುತ್ತಾರೆ. ಈ ಮಧ್ಯೆ ನೀವು ಎಷ್ಟು ಸಾಧಿಸುತ್ತೀರಾ ಅನ್ನೋದು ಮುಖ್ಯ. ಯಾವ ಮಟ್ಟಕ್ಕೆ ನಿಮ್ಮ ಬದುಕನ್ನು ಉಪಯೋಗಿಸಿಕೊಳ್ಳಬಹುದು ಎಂಬುದಕ್ಕೆ ದ್ವಾರಕೀಶ್ ಅವರು ಉತ್ತಮ ಉದಾಹರಣೆ. ಚಿತ್ರರಂಗದಲ್ಲಿ ಹಲವು ಕಲ್ಪನೆಗಳಿದ್ದವು. ಹೀರೋ ಹೀಗೆ ಇರಬೇಕು, ಹೀಗೆ ಆ್ಯಕ್ಟ್ ಮಾಡಬೇಕು ಎಂಬುದನ್ನೆಲ್ಲ ತೊಡೆದು ಹಾಕಿದವರು ದ್ವಾರಕೀಶ್. ಅವರು ಚಿತ್ರರಂಗಕ್ಕೆ ಕೊಟ್ಟ ದೊಡ್ಡ ಕೊಡುಗೆ. ಬದುಕೊಂದು ದೊಡ್ಡ ಅವಕಾಶ, ಅದನ್ನು ದ್ವಾರಕೀಶ್ ಬಳಸಿಕೊಂಡ್ರು. ಕುಟುಂಬಕ್ಕೆ ಇದನ್ನು ಸಹಿಸೋ ಶಕ್ತಿ ಕೊಡಲಿ’ ಎಂದು ಕೇಳಿದ್ದಾರೆ ಯಶ್.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಕ್ಕಳಿಂದ ಶುಚಿಮಾಡಿಸಿದರೆ ಕೂಡಲೇ ಕ್ರಮ ಜರುಗಿಸುತ್ತೇವೆ: ಮಧು ಬಂಗಾರಪ್ಪ

ಕಾಂಗ್ರೆಸ್ ನಾಯಕರ ಒಳಜಗಳಗಳಿಂದ ಸರ್ಕಾರ ಪತನಗೊಳ್ಳಲಿದೆ: ಜಗದೀಶ್ ಶೆಟ್ಟರ್

CSK ವಿರುದ್ಧದ ಗೆಲುವಿನ ಖುಷಿಯಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಡ್ಯಾನ್ಸ್

ಸಿನಿಮೀಯ ರೀತಿಯಲ್ಲಿ ವಾಹನ ಚೇಸ್ ಮಾಡಿ ಗೋವುಗಳ ರಕ್ಷಣೆ: ವಿಡಿಯೋ ನೋಡಿ
