ದ್ವಾರಕೀಶ್ ಇನ್ನಿಲ್ಲ; ದ್ವಾರಕೀಶ್ ಮತ್ತು ನಾನು ಹೆಲಿಕಾಪ್ಟರ್ ನಲ್ಲಿ ಒಮ್ಮೆ ಮೈಸೂರಿಗೆ ಹೋಗಿದ್ದೆವು: ಸಿದ್ದರಾಮಯ್ಯ
ನಟ-ನಿರ್ಮಾಪಕ-ನಿರ್ದೇಶಕ ದ್ವಾರಕೀಶ್ ಇನ್ನಿಲ್ಲ: ಒಮ್ಮೆ ದ್ವಾರಕೀಶ್ ಅವರೊಂದಿಗೆ ಹೆಲಿಕಾಪ್ಟರ್ ನಲ್ಲಿ ಮೈಸೂರಿಗೆ ಹೋದ ಸಂಗತಿಯನ್ನು ಸಹ ಅವರು ಹೇಳಿದರು. ಅವರು ವಿಧಿವಶರಾಗಿರುವುದು ಸಮಸ್ತ ಕನ್ನಡಿಗರನ್ನು ಶೋಕಸಾಗರದಲ್ಲಿ ಮುಳುಗಿಸಿರುವಂತೆ ತನಗೂ ಅಪಾರ ನೋವನ್ನುಂಟು ಮಾಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರು: ನಿನ್ನೆ ಕಣ್ಮರೆಯಾದ ಕನ್ನಡ ಚಿತ್ರರಂದ ದಿಗ್ಗಜ ನಟ-ನಿರ್ಮಾಪಕ-ನಿರ್ದೇಶಕ ದ್ವಾರಕೀಶ್ (Dwarakish) ಅವರ ಪಾರ್ಥೀವ ಶರೀರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಇಂದು ರವೀಂದ್ರ ಕಲಾಕ್ಷೇತ್ರಕ್ಕೆ ತೆರಳಿ ಶ್ರದ್ಧಾಂಜಲಿ ಸಲ್ಲಿಸಿದರು. ಅವರ ದುಃಖತಪ್ತ ಮಕ್ಕಳನ್ನು ಸಂತೈಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತಾಡಿದ ಸಿದ್ದರಾಮಯ್ಯ ಪ್ರಚಂಡ ಹಾಸ್ಯನಟನೊಂದಿಗಿದ್ದ ತಮ್ಮ ಒಡನಾಟವನ್ನು ಮೆಲಕು ಹಾಕಿದರು. ಎಲ್ಲಕ್ಕಿಂತ ಮುಖ್ಯವಾಗಿ ದ್ವಾರಕೀಶ್ ತಮ್ಮೂರು ಮೈಸೂರಿನವರು (Mysuru) ಎಂದು ಮುಖ್ಯಮಂತ್ರಿ ಅಭಿಮಾನದಿಂದ ಹೇಳಿದರು. ಒಬ್ಬ ನಟನಾಗಿ, ನಿರ್ಮಾಪಕ ಮತ್ತು ನಿರ್ದೇಶಕನಾಗಿ ಅವರು ಕನ್ನಡ ಚಿತ್ರರಂಗಕ್ಕೆ ಬಹು ದೊಡ್ಡ ಕಾಣಿಕೆ ಸಲ್ಲಿಸಿದ್ದಾರೆ. ದ್ವಾರಕೀಶ್ ಅವರು ಡಾ ರಾಜ್ ಕುಮಾರ್, ಅಂಬರೀಶ್, ವಿಷ್ಣುವರ್ಧನ್ ಅವರೊಂದಿಗೆ ನಟಿಸಿದ ಚಿತ್ರಗಳನ್ನು ನೋಡಿದ್ದೇನೆ, ಸಿನಿಮಾಗಳನ್ನು ಮಾಡುವಾಗ ಅವರು ಹಲವಾರು ಏಳುಬೀಳುಗಳನ್ನು ಕಂಡಿದ್ದು ನಿಜ, ಸೋತಾಗ ಎದೆಗುಂದದೆ ಮುಂದೆ ಸಾಗಿದ ಅವರ ಆತ್ಮಸ್ಥೈರ್ಯ ಅಭಿನಂದನೀಯ ಎಂದು ಸಿದ್ದರಾಮಯ್ಯ ಹೇಳಿದರು. ಒಮ್ಮೆ ದ್ವಾರಕೀಶ್ ಅವರೊಂದಿಗೆ ಹೆಲಿಕಾಪ್ಟರ್ ನಲ್ಲಿ ಮೈಸೂರಿಗೆ ಹೋದ ಸಂಗತಿಯನ್ನು ಸಹ ಅವರು ಹೇಳಿದರು. ಅವರು ವಿಧಿವಶರಾಗಿರುವುದು ಸಮಸ್ತ ಕನ್ನಡಿಗರನ್ನು ಶೋಕಸಾಗರದಲ್ಲಿ ಮುಳುಗಿಸಿರುವಂತೆ ತನಗೂ ಅಪಾರ ನೋವನ್ನುಂಟು ಮಾಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ‘ಬದುಕೊಂದು ದೊಡ್ಡ ಅವಕಾಶ, ಅದನ್ನು ದ್ವಾರಕೀಶ್ ಬಳಸಿಕೊಂಡ್ರು’: ಯಶ್