ನಾನು ಕಾಂಗ್ರೆಸ್ ಪಕ್ಷಕ್ಕೆ ವಾಪಸ್ಸಾಗಲು ಲಕ್ಷ್ಮಣ ಸವದಿ ಕಾರಣ: ಕರಡಿ ಸಂಗಣ್ಣ, ಮಾಜಿ ಬಿಜೆಪಿ ಸಂಸದ

ನಾನು ಕಾಂಗ್ರೆಸ್ ಪಕ್ಷಕ್ಕೆ ವಾಪಸ್ಸಾಗಲು ಲಕ್ಷ್ಮಣ ಸವದಿ ಕಾರಣ: ಕರಡಿ ಸಂಗಣ್ಣ, ಮಾಜಿ ಬಿಜೆಪಿ ಸಂಸದ

ಅರುಣ್​ ಕುಮಾರ್​ ಬೆಳ್ಳಿ
|

Updated on:Apr 17, 2024 | 3:00 PM

ಕೆಳಹಂತದ ರಾಜಕಾರಣದಿಂದ ಸಂಸತ್ ವರಗೆ ತಲುಪಿದ ತನಗೆ ಹೆಚ್ ಜಿ ರಾಮುಲು ಮತ್ತು ಎಸ್ ಎನ್ ಖಾದ್ರಿ ರಾಜಕೀಯ ಗುರುಗಳು ಅವರ ಮಾರ್ಗದರ್ಶನದಲ್ಲಿ ರಾಜಕೀಯ ಬದುಕು ರೂಪಿಸಕೊಂಡಿರುವೆ ಎಂದು ಸಂಗಣ್ಣ ಕರಡಿ ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರ ಜೊತೆ ಕೆಲಸ ಮಾಡಿರುವ ಅನುಭವ ತನಗಿದೆ ಎಂದು ಅವರು ಹೇಳಿದರು

ಬೆಂಗಳೂರು: ರಾಜ್ಯ ಬಿಜೆಪಿಗೆ ಮತ್ತೊಂದು ಹೊಡೆತ ಬಿದ್ದಿದೆ. ಕೊಪ್ಪಳ ಭಾಗದಲ್ಲಿ ಪ್ರಭಾವಿ ರಾಜಕಾರಣಿಯೆನಿಸಿಕೊಂಡಿದ್ದ ಕರಡಿ ಸಂಗಣ್ಣ (Karadi Sanganna) ಕಾಂಗ್ರೆಸ್ ಸೇರಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ (DK Shivakumar) ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಸಮ್ಮುಖ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಸೇರಿದ ಸಂಗಣ್ಣ, ತಾನು ಪಕ್ಷಕ್ಕೆ ವಾಪಸ್ಸಾಗಲು ಅಥಣಿ ಶಾಸಕ ಲಕ್ಷ್ಮಣ ಸವದಿ (Laxman Savadi) ಕಾರಣ ಎಂದು ಹೇಳಿದರು. ಸುಮಾರು 14 ವರ್ಷಗಳ ಹಿಂದೆ ಆಗಿನ ಬಿಜೆಪಿ ಸರ್ಕಾರದಲ್ಲಿ ಮಂತ್ರಿಯಾಗಿದ್ದ ಸವದಿ, ಪ್ರತಿಭಟನೆ ನಡೆಸುತ್ತಿದ್ದ ತನ್ನಲ್ಲಿಗೆ ಬಂದು ನಿಂಗೆ ಹೋರಾಟ ಬೇಕಾ? ಅಥವಾ ಅಭಿವೃದ್ಧಿಯಾ ಅಂತ ಕೇಳಿದ್ದರು. ಅಭಿವೃದ್ಧಿ ಎಂದಿದ್ದ ತನ್ನನ್ನು ಕಾಂಗ್ರೆಸ್ ನಿಂದ ಬಿಜೆಪಿಗೆ ಕರೆದುಕೊಂಡು ಹೋಗಿದ್ದರು. ಈಗ ಪುನಃ ಅವರಿಂದಾಗೇ ತಾನು ಕಾಂಗ್ರೆಸ್ ಪಕ್ಷಕ್ಕೆ ವಾಪಸ್ಸು ಬಂದಿರೋದು ಕಾಕತಾಳೀಯ ಎಂದು ಸಂಗಣ್ಣ ಹೇಳಿದರು. ಕೆಳಹಂತದ ರಾಜಕಾರಣದಿಂದ ಸಂಸತ್ ವರಗೆ ತಲುಪಿದ ತನಗೆ ಹೆಚ್ ಜಿ ರಾಮುಲು ಮತ್ತು ಎಸ್ ಎನ್ ಖಾದ್ರಿ ರಾಜಕೀಯ ಗುರುಗಳು ಅವರ ಮಾರ್ಗದರ್ಶನದಲ್ಲಿ ರಾಜಕೀಯ ಬದುಕು ರೂಪಿಸಕೊಂಡಿರುವೆ ಎಂದು  ಕರಡಿ ಸಂಗಣ್ಣ ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರ ಜೊತೆ ಕೆಲಸ ಮಾಡಿರುವ ಅನುಭವ ತನಗಿದೆ ಎಂದು ಅವರು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಚುನಾವಣೆ ಹೊತ್ತಲ್ಲೇ ಕೇಸರಿ ಪಡೆಗೆ ಬಿಗ್ ಶಾಕ್: ಬಿಜೆಪಿಗೆ ಗುಡ್​ ಬೈ ಹೇಳಿದ ಸಂಸದ ಕರಡಿ ಸಂಗಣ್ಣ

Published on: Apr 17, 2024 01:43 PM