ಬೇಸಿಗೆಯ ಮಳೆಯ ಅಬ್ಬರಕ್ಕೆ ಚಿಕ್ಕೋಡಿ ಜನತೆ ಫುಲ್ ಖುಷ್

ಬೇಸಿಗೆಯ ಮಳೆಯ ಅಬ್ಬರಕ್ಕೆ ಚಿಕ್ಕೋಡಿ ಜನತೆ ಫುಲ್ ಖುಷ್

ಕಿರಣ್ ಹನುಮಂತ್​ ಮಾದಾರ್
|

Updated on: Apr 17, 2024 | 5:12 PM

ರಾಜ್ಯದಲ್ಲಿ ಬಿರುಬಿಸಿಲಿಗೆ ಜನ ಹೈರಾಣಾಗಿದ್ದಾರೆ. ಮಳೆಗಾಗಿ ವರುಣ ದೇವನನ್ನ ಪ್ರಾರ್ಥಿಸುತ್ತಿದ್ದಾರೆ. ಕೆಲವೆಡೆ ಮನೆಯಿಂದ ಹೊರಬರುವುದಕ್ಕೂ ಕಷ್ಟವಾಗಿದ್ದು, ರಣ ಬಿಸಿಲಿಗೆ ಜನ ಅಕ್ಷರಶಃ ಬೆಚ್ಚಿಬಿದ್ದಿದ್ದಾರೆ. ಇನ್ನು ರಾಜ್ಯದ ಕೆಲವೆಡೆ ಅಲ್ಪಸ್ವಲ್ಪ ಮಳೆಯ ಸಿಂಚನ ಮೂಡಿದೆ. ಅದರಂತೆ ಚಿಕ್ಕೋಡಿ(Chikkodi)ತಾಲೂಕಿನಾದ್ಯಂತ ಇಂದು(ಏ.17) ಸುಮಾರು ಅರ್ಧ ಗಂಟೆಗಳ ಕಾಲ ಭರ್ಜರಿ ಮಳೆ ಸುರಿದಿದ್ದು, ಬೇಸಿಗೆಯಲ್ಲೂ ಆಲಿಕಲ್ಲು ಸಹಿತ ಮಳೆಯಾಗಿದೆ.

ಬೆಳಗಾವಿ, ಏ.17: ರಾಜ್ಯದಲ್ಲಿ ಬಿರುಬಿಸಿಲಿಗೆ ಜನ ಹೈರಾಣಾಗಿದ್ದಾರೆ. ಮಳೆಗಾಗಿ ವರುಣ ದೇವನನ್ನ ಪ್ರಾರ್ಥಿಸುತ್ತಿದ್ದಾರೆ. ಕೆಲವೆಡೆ ಮನೆಯಿಂದ ಹೊರಬರುವುದಕ್ಕೂ ಕಷ್ಟವಾಗಿದ್ದು, ರಣ ಬಿಸಿಲಿಗೆ ಜನ ಅಕ್ಷರಶಃ ಬೆಚ್ಚಿಬಿದ್ದಿದ್ದಾರೆ. ಇನ್ನು ರಾಜ್ಯದ ಕೆಲವೆಡೆ ಅಲ್ಪಸ್ವಲ್ಪ ಮಳೆಯ ಸಿಂಚನ ಮೂಡಿದೆ. ಅದರಂತೆ ಚಿಕ್ಕೋಡಿ(Chikkodi)ತಾಲೂಕಿನಾದ್ಯಂತ ಇಂದು(ಏ.17) ಸುಮಾರು ಅರ್ಧ ಗಂಟೆಗಳ ಕಾಲ ಭರ್ಜರಿ ಮಳೆ ಸುರಿದಿದ್ದು, ಬೇಸಿಗೆಯಲ್ಲೂ ಆಲಿಕಲ್ಲು ಸಹಿತ ಮಳೆಯಾಗಿದೆ. ಹಲವು ತಿಂಗಳಿನಿಂದ ಮಳೆಗಾಗಿ ಕಾದಿದ್ದ ಜನರು, ಏಕಾಏಕಿ ಸುರಿದ ಮಳೆಯಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಈ ಬಾರಿ ಅದೆಷ್ಟೋ ರೈತರು ಮಳೆ ಇಲ್ಲದೆ ಬೆಳೆಯನ್ನ ಬೆಳೆದಿರಲಿಲ್ಲ, ಕೆಲವು ರೈತರು ಎಲ್ಲಿಂದಲೂ ತಂದು ಪರ್ಯಾಯ ವ್ಯವಸ್ಥೆ ಮೂಲಕ ಅಲ್ಪಸ್ವಲ್ಪ ಬೆಳೆ ಬೆಳೆದಿದ್ದರು, ಇದೀಗ ಚಿಕ್ಕೋಡಿ ತಾಲೂಕಿನಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದ್ದು, ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನು ದಿಢೀರ್​ ಮಳೆಯಿಂದ ವಾಹನ ಸವಾರರು ಪರದಾಟ ನಡೆಸುವಂತಾಗಿದೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ