ರಾಹುಲ್ ಎದುರು ಅಬ್ಬರದ ಭಾಷಣ ಮಾಡಿದ ಶಿವಕುಮಾರ್ ಜೆಡಿಎಸ್ ಅಭ್ಯರ್ಥಿ ಕುರಿತು ಮಾತಾಡಲ್ಲ ಎಂದರು

ರಾಹುಲ್ ಎದುರು ಅಬ್ಬರದ ಭಾಷಣ ಮಾಡಿದ ಶಿವಕುಮಾರ್ ಜೆಡಿಎಸ್ ಅಭ್ಯರ್ಥಿ ಕುರಿತು ಮಾತಾಡಲ್ಲ ಎಂದರು

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 17, 2024 | 5:46 PM

ರಾಹುಲ್ ಗಾಂಧಿಯವರು ಇಲ್ಲಿಗೆ ಬಂದಿರುವ ಕಾರಣವೂ ಅದೇ, ಮಂಡ್ಯದಲ್ಲಿ ಗೆದ್ದರೆ ಇಂಡಿಯದಲ್ಲೂ ಗೆಲ್ಲುತ್ತೇನೆ ಎಂಬ ಅಚಲ ವಿಶ್ವಾಸ ಅವರು ಇಟ್ಟುಕೊಂಡು ಇಲ್ಲಿಗೆ ಬಂದಿದ್ದಾರೆ ಎಂದು ಶಿವಕುಮಾರ್ ಹೇಳಿದರು. ಮಂಡ್ಯದ ಕಾಂಗ್ರೆಸ್ ಪಕ್ಷದ ಎದುರಾಳಿಯ ಬಗ್ಗೆ ಮಾತಾಡಲ್ಲ ಯಾಕೆಂದರೆ ಅಭ್ಯರ್ಥಿಯಿಂದಾಗಲೀ ಅಥವಾ ಕಾಂಗ್ರೆಸ್ ನೆರವನಿಂದ ಪ್ರಧಾನಿಯಾದ ಅವರ ತಂದೆಯಿಂದಾಗಲೀ ಮಂಡ್ಯಗೆ ಯಾವುದೇ ಸಹಾಯವಾಗಿಲ್ಲ ಎಂದು ಶಿವಕುಮಾರ್ ಹೇಳಿದರು.

ಮಂಡ್ಯ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರ ಸಮಕ್ಷಮ ಮಂಡ್ಯದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅಬ್ಬರದ ಭಾಷಣ ಮಾಡಿದರು. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಭಾರೀ ಗೆಲುವು ಸಾಧಿಸಲು ರಾಹುಲ್ ಗಾಂಧಿ ನಡೆಸಿದ ಭಾರತ ಜೋಡೋ ಯಾತ್ರೆ (Bharat Jodo Yatra) ಪ್ರಮುಖ ಕಾರಣವಾಯಿತು ಎಂದು ಹೇಳಿದರು. ಯಾತ್ರೆಯ ಸಂದರ್ಭದಲ್ಲಿ ಅವರು ಚಾಮರಾಜಪೇಟೆಯಿಂದ ತೆಲಂಗಾಣಕ್ಕೆ ನಡೆದು ಹೋಗುವಾಗ ರಾಜ್ಯದ ಹಲವಾರು ವಿಧಾನಸಭಾ ಕ್ಷೇತ್ರಗಳ ಮೂಲಕ ಹಾದು ಹೋದರು ಮತ್ತು ಆ ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದರು ಎಂದು ಶಿವಕುಮಾರ್ ಹೇಳಿದರು. ಮಂಡ್ಯ ಜಿಲ್ಲೆಯಲ್ಲೂ ಕಾಂಗ್ರೆಸ್ ಪಕ್ಷಕ್ಕೆ ಅಭೂತಪೂರ್ವ ಜನಾದೇಶ ಸಿಕ್ಕು ಜಿಲ್ಲೆಯ ಒಂದು ಕ್ಷೇತ್ರ ಬಿಟ್ಟು ಉಳಿದೆಲ್ಲ ಕ್ಷೇತ್ರಗಳಲ್ಲಿ ಗೆಲುವು ದಕ್ಕಿತು ಎಂದು ಉಪ ಮುಖ್ಯಮಂತ್ರಿ ಹೇಳಿದರು. ರಾಹುಲ್ ಗಾಂಧಿಯವರು ಇಲ್ಲಿಗೆ ಬಂದಿರುವ ಕಾರಣವೂ ಅದೇ, ಮಂಡ್ಯದಲ್ಲಿ ಗೆದ್ದರೆ ಇಂಡಿಯದಲ್ಲೂ ಗೆಲ್ಲುತ್ತೇನೆ ಎಂಬ ಅಚಲ ವಿಶ್ವಾಸ ಅವರು ಇಟ್ಟುಕೊಂಡು ಇಲ್ಲಿಗೆ ಬಂದಿದ್ದಾರೆ ಎಂದು ಶಿವಕುಮಾರ್ ಹೇಳಿದರು. ಮಂಡ್ಯದ ಕಾಂಗ್ರೆಸ್ ಪಕ್ಷದ ಎದುರಾಳಿಯ ಬಗ್ಗೆ ಮಾತಾಡಲ್ಲ ಯಾಕೆಂದರೆ ಅಭ್ಯರ್ಥಿಯಿಂದಾಗಲೀ ಅಥವಾ ಕಾಂಗ್ರೆಸ್ ನೆರವನಿಂದ ಪ್ರಧಾನಿಯಾದ ಅವರ ತಂದೆಯಿಂದಾಗಲೀ ಮಂಡ್ಯಗೆ ಯಾವುದೇ ಸಹಾಯವಾಗಿಲ್ಲ ಎಂದು ಶಿವಕುಮಾರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಮಂಡ್ಯಕ್ಕೆ ಬಂದ ರಾಹುಲ್ ಗಾಂಧಿ ಹೆಲಿಕಾಪ್ಟರ್ ಇಂಚಿಂಚೂ ಚೆಕ್ಕಿಂಗ್