AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಂಗ್ರೆಸ್ ಪಕ್ಷಕ್ಕೆ ಬುಕ್ ಆಗಿರುವ ವಚನಾನಂದ ಸ್ವಾಮೀಜಿಗೆ ಬಿಜೆಪಿ ಬಗ್ಗೆ ಮಾತಾಡುವ ನೈತಿಕತೆ ಇಲ್ಲ: ಬಸನಗೌಡ ಪಾಟೀಲ್ ಯತ್ನಾಳ್

ಕಾಂಗ್ರೆಸ್ ಪಕ್ಷಕ್ಕೆ ಬುಕ್ ಆಗಿರುವ ವಚನಾನಂದ ಸ್ವಾಮೀಜಿಗೆ ಬಿಜೆಪಿ ಬಗ್ಗೆ ಮಾತಾಡುವ ನೈತಿಕತೆ ಇಲ್ಲ: ಬಸನಗೌಡ ಪಾಟೀಲ್ ಯತ್ನಾಳ್

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 17, 2024 | 4:55 PM

Share

ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ಸ್ವಾಮೀಜಿಗೆ ಹೆಲಿಕಾಪ್ಟರ್ ಲ್ಲಿ ಹಾರಾಡುವ ಹಂಬಲ ಹುಟ್ಟಿಕೊಂಡುಬಿಟ್ಟಿತ್ತು, ತಾವು ಆಕಾಶದಲ್ಲಿ ಹಾರಾಡುವುದನ್ನು ಜನ ನೋಡಲಿ ಅಂತ ಅವರು ಆಸೆ ಪಡುತ್ತಿದರು ಎಂದು ಯತ್ನಾಳ್ ಹೇಳಿದರು. ಯಡಿಯೂರಪ್ಪ ಅವಧಿಯಲ್ಲಿ ಅವರು 10 ಕೋಟಿ ಅನುದಾನ ತೆಗೆದುಕೊಂಡು ಹೋಗಿದ್ದು ಎಲ್ಲರಿಗೂ ಗೊತ್ತಿದೆ ಎಂದು ಅವರು ಹೇಳಿದರು.

ವಿಜಯಪುರ: ಹರಿಹರ ಪಂಚಮಸಾಲಿ ಮಠದ ವಚನಾನಂದ ಸ್ವಾಮೀಜಿ (Vachananda Swamiji) ಅವರನ್ನು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಪರಮಪೂಜ್ಯ ಬುಕ್ಕಿಂಗ್ ಮಹಾಸ್ವಾಮಿ ಅಂತ ಗೇಲಿ ಮಾಡಿದರು. ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಯತ್ನಾಳ್, ಶ್ವಾಸಗುರು (Shwasa Guru) ಅಂತಲೂ ಕರೆಸಿಕೊಳ್ಳುವ ವಚನಾನಂದ ಸ್ವಾಮಿಗಳು ಬಿಎಸ್ ಯಡಿಯೂರಪ್ಪ ಮಮತ್ತು ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಗಳಾಗಿದ್ದ ಮಠಕ್ಕೆ ಎಷ್ಟೆಷ್ಟು ಅನುದಾನ ತೆಗೆದುಕೊಂಡು ಹೋಗಿದ್ದಾರೆ ಮತ್ತು ಅದರಲ್ಲಿ ಮಠಕ್ಕಾಗಿ ವಿನಿಯೋಗಿಸಿದ ಹಣವೆಷ್ಟು ಮತ್ತು ದುರುಪಯೋಗಪಡಿಸಿಕೊಂಡಿದ್ದು ಎಷ್ಟು ಅನ್ನೋದನ್ನು ಹೇಳಲಿ ಎಂದು ಸವಾಲೆಸೆದರು. ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ಸ್ವಾಮೀಜಿಗೆ ಹೆಲಿಕಾಪ್ಟರ್ ಲ್ಲಿ ಹಾರಾಡುವ ಹಂಬಲ ಹುಟ್ಟಿಕೊಂಡುಬಿಟ್ಟಿತ್ತು, ತಾವು ಆಕಾಶದಲ್ಲಿ ಹಾರಾಡುವುದನ್ನು ಜನ ನೋಡಲಿ ಅಂತ ಅವರು ಆಸೆ ಪಡುತ್ತಿದರು ಎಂದು ಯತ್ನಾಳ್ ಹೇಳಿದರು. ಯಡಿಯೂರಪ್ಪ ಅವಧಿಯಲ್ಲಿ ಅವರು 10 ಕೋಟಿ ಅನುದಾನ ತೆಗೆದುಕೊಂಡು ಹೋಗಿದ್ದು ಎಲ್ಲರಿಗೂ ಗೊತ್ತಿದೆ, ಸ್ವಾಮೀಜಿಯವರಿಗೆ ಬಿಜೆಪಿ ಬಗ್ಗೆ ಮಾತಾಡುವ ನೈತಿಕತೆ ಇಲ್ಲ, ಆದರೆ ಯಾಕೆ ಮಾತಾಡುತ್ತಿದ್ದಾರೆ ಅಂದರೆ ಅವರು ಕಾಂಗ್ರೆಸ್ ಪಕ್ಷಕ್ಕೆ ಬುಕ್ ಆಗಿದ್ದಾರೆ ಎಂದ ಎಂದು ಯತ್ನಾಳ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಚುನಾವಣೆ ಮುಗಿದ 15 ದಿನಗಳಲ್ಲಿ ಡಿಕೆಶಿ ಸಿಎಂ ಆಗುವ ಪ್ಲಾನ್: ಡಿಸಿಎಂ ತಂತ್ರ ಬಿಚ್ಚಿಟ್ಟ ಯತ್ನಾಳ್