Video: ಜಮ್ಮು ಮತ್ತು ಕಾಶ್ಮೀರದ ರೆಸಾರ್ಟ್​ ಮೇಲೆ ಭಾರಿ ಹಿಮಪಾತ

Updated on: Jan 28, 2026 | 7:20 AM

ಜಮ್ಮು ಮತ್ತು ಕಾಶ್ಮೀರದ ಸೋನಾಮಾರ್ಗ್​ ಪ್ರವಾಸಿ ರೆಸಾರ್ಟ್​ ಮೇಲೆ ಭಾರಿ ಹಿಮಪಾತವಾಗಿದೆ. ಇದು ಆತಂಕ ಸೃಷ್ಟಿಸಿದೆ. ಆದರೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ., ಮಧ್ಯ ಕಾಶ್ಮೀರದ ಗಂಡೇರ್ಬಲ್ ಜಿಲ್ಲೆಯ ಸೋನಾಮಾರ್ಗ್‌ನಲ್ಲಿ ರಾತ್ರಿ 10 ಗಂಟೆ ಸುಮಾರಿಗೆ ಹಿಮಪಾತ ಸಂಭವಿಸಿದೆ. ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳು ಪರ್ವತದಿಂದ ಇಳಿಜಾರಿನ ಕೆಳಗೆ ಬರುತ್ತಿರುವ ಹಿಮವನ್ನು ಕಾಣಬಹುದು.

ಶ್ರೀನಗರ, ಜನವರಿ 28: ಜಮ್ಮು ಮತ್ತು ಕಾಶ್ಮೀರದ ಸೋನಾಮಾರ್ಗ್​ ಪ್ರವಾಸಿ ರೆಸಾರ್ಟ್​ ಮೇಲೆ ಭಾರಿ ಹಿಮಪಾತವಾಗಿದೆ. ಇದು ಆತಂಕ ಸೃಷ್ಟಿಸಿದೆ. ಆದರೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ., ಮಧ್ಯ ಕಾಶ್ಮೀರದ ಗಂಡೇರ್ಬಲ್ ಜಿಲ್ಲೆಯ ಸೋನಾಮಾರ್ಗ್‌ನಲ್ಲಿ ರಾತ್ರಿ 10 ಗಂಟೆ ಸುಮಾರಿಗೆ ಹಿಮಪಾತ ಸಂಭವಿಸಿದೆ. ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳು ಪರ್ವತದಿಂದ ಇಳಿಜಾರಿನ ಕೆಳಗೆ ಬರುತ್ತಿರುವ ಹಿಮವನ್ನು ಕಾಣಬಹುದು. ಮಂಗಳವಾರ ಕಾಶ್ಮೀರದಾದ್ಯಂತ ಈ ವರ್ಷದ ಹೊಸ ಹಿಮಪಾತವು ಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯನ್ನು ಮುಚ್ಚಲಾಯಿತು ಮತ್ತು ಶ್ರೀನಗರ ವಿಮಾನ ನಿಲ್ದಾಣದ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಲಾಯಿತು, ಇದರಿಂದಾಗಿ ನೂರಾರು ಪ್ರವಾಸಿಗರು ಕಣಿವೆಯಲ್ಲಿ ಸಿಲುಕಿಕೊಂಡರು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ