AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಂದೂ ವ್ಯಕ್ತಿ ಮನೆಗೆ ಬೆಂಕಿ ಹಚ್ಚಿದ ಮುಸ್ಲಿಂ ಯುವಕ: ಕುಮಟಾದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡ

ಹಿಂದೂ ವ್ಯಕ್ತಿ ಮನೆಗೆ ಬೆಂಕಿ ಹಚ್ಚಿದ ಮುಸ್ಲಿಂ ಯುವಕ: ಕುಮಟಾದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡ

ಸೂರಜ್​, ಮಹಾವೀರ್​ ಉತ್ತರೆ
| Edited By: |

Updated on: Jan 28, 2026 | 8:30 AM

Share

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ದೇವರ ಹಕ್ಕಲದಲ್ಲಿ ಕುಟುಂಬದವರು ವೆಂಕಟರಮಣ ಜಾತ್ರೆಗೆ ತೆರಳಿದ್ದಾಗ ದಿನಕರ್ ಎಂಬುವರ ಮನೆಗೆ 18 ವರ್ಷದ ಫೈಸಾನ್ ಜಾಫರ್ ಶೇಕ್ ಎಂಬ ಯುವಕ ಬೆಂಕಿ ಹಚ್ಚಿದ್ದಾನೆ. ಬೆಂಕಿ ಹಚ್ಚಿದ ತಕ್ಷಣ ಸ್ಥಳೀಯರು ಆರೋಪಿಯನ್ನು ಹಿಡಿದಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಎಸ್ಪಿ ವಿಷ್ಣು ಪಂತವರ್ ಸ್ಥಳಕ್ಕೆ ಧಾವಿಸಿದ್ದಾರೆ.

ಕಾರವಾರ, ಜನವರಿ 28: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ದೇವರ ಹಕ್ಕಲದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಕುಟುಂಬದವರು ಜಾತ್ರೆಗೆ ತೆರಳಿದ್ದ ಸಂದರ್ಭದಲ್ಲಿ ಯುವಕನೊಬ್ಬ ದಿನಕರ್ ಎಂಬುವರ ಮನೆಗೆ ಬೆಂಕಿ ಹಚ್ಚಿದ್ದಾನೆ. ಕುಮಟಾದ ವೆಂಕಟರಮಣ ಜಾತ್ರೆಗೆ ದಿನಕರ್ ಕುಟುಂಬದವರು ತೆರಳಿದ್ದರು. ಈ ಸಂದರ್ಭವನ್ನು ದುರುಪಯೋಗಪಡಿಸಿಕೊಂಡ 18 ವರ್ಷದ ಫೈಸಾನ್ ಜಾಫರ್ ಶೇಕ್ ಎಂಬ ಯುವಕ ಅವರ ಮನೆಗೆ ಬೆಂಕಿ ಹಚ್ಚಿ ದ್ವೇಷ ಸಾಧಿಸಲು ಯತ್ನಿಸಿದ್ದಾನೆ. ಇನ್ನು ಬೆಂಕಿ ಹಚ್ಚಿದ ತಕ್ಷಣವೇ ಆರೋಪಿಯನ್ನು ಸ್ಥಳೀಯರು ಹಿಡಿದಿದ್ದಾರೆ. ಸಾರ್ವಜನಿಕರ ಸಮಯಪ್ರಜ್ಞೆಯಿಂದ ಹೆಚ್ಚಿನ ಅನಾಹುತ ತಪ್ಪಿದೆಯಾದರೂ, ಘಟನೆಯಿಂದಾಗಿ ದೇವರ ಹಕ್ಕಲದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಕ್ರಮ ಕೈಗೊಂಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.