ನಿಮ್ಮ ಬಿಲ್‌ನಲ್ಲಿ ‘M.D. Penalty’ ಬರುತ್ತಿದೆಯೇ? ದಂಡದಿಂದ ತಪ್ಪಿಸಿಕೊಳ್ಳಲು ಈ ಸರಳ ಸೂತ್ರ ಅನುಸರಿಸಿ!
ವಿದ್ಯುತ್ ಬಿಲ್‌ನಲ್ಲಿ ಬರುವ 'M.D. Penalty' ನಿಮ್ಮ ಸ್ಯಾಂಕ್ಷನ್ಡ್ ಲೋಡ್ ಮೀರಿದಾಗ ವಿಧಿಸಲಾಗುತ್ತದೆ. ಏಕಕಾಲದಲ್ಲಿ ಹೆಚ್ಚು ವಿದ್ಯುತ್ ಬಳಸುವ ಉಪಕರಣಗಳನ್ನು ಚಾಲೂ ಮಾಡುವುದರಿಂದ ದಂಡ ಬೀಳುತ್ತದೆ. ಇದನ್ನು ತಪ್ಪಿಸಲು, ಉಪಕರಣಗಳನ್ನು ಒಂದೇ ಬಾರಿಗೆ ಬಳಸುವುದನ್ನು ಕಡಿಮೆ ಮಾಡಿ ಅಥವಾ ನಿಮ್ಮ ಸ್ಯಾಂಕ್ಷನ್ಡ್ ಲೋಡ್ ಅನ್ನು ಹೆಚ್ಚಿಸಲು ಅರ್ಜಿ ಸಲ್ಲಿಸಿ. ಇದರಿಂದ ಅನಗತ್ಯ ದಂಡದಿಂದ ಮುಕ್ತರಾಗಿ ವಿದ್ಯುತ್ ಬಿಲ್ ಉಳಿಸಬಹುದು.
ಬೆಂಗಳೂರು, ಏ.9: ನಿಮ್ಮ ವಿದ್ಯುತ್ ಬಿಲ್‌ನಲ್ಲಿ ‘M.D. Penalty’ (Maximum Demand Penalty) ಏಕೆ ಬರುತ್ತದೆ ಮತ್ತು ಅದನ್ನು ತಪ್ಪಿಸುವುದು ಹೇಗೆ ಎಂಬ ಬಗ್ಗೆ ಮಹಿಳೆಯೊಬ್ಬರು ವಿಡಿಯೋ ಮಾಡಿದ್ದಾರೆ, ಇದನ್ನು @Karnataka Portfolio ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ‘M.D. Penalty’ ಎಂದರೆ ವಿದ್ಯುತ್ನ ಗರಿಷ್ಠ ಬೇಡಿಕೆ ದಂಡ. ಇದನ್ನು ಯಾಕೆ ವಿಧಿಸಲಾಗುತ್ತದೆ ಎಂಬ ಬಗ್ಗೆ ವಿವರವಾಗಿ ಹೇಳಿದ್ದಾರೆ. ನೀವು ನಿಮ್ಮ ಮನೆಗೆ ಅಥವಾ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಪಡೆಯುವಾಗ ಇಂತಿಷ್ಟೇ ಕಿಲೋವ್ಯಾಟ್ (kw) ವಿದ್ಯುತ್ ಬಳಸುತ್ತೇವೆ ಎಂದು ಒಪ್ಪಂದ ಮಾಡಿಕೊಂಡಿರುತ್ತೀರಿ. ಇದನ್ನು ‘Sanctioned Load’ ಎಂದು ಕರೆಯಲಾಗುತ್ತದೆ. ನೀವು ಒಮ್ಮೆಗೆ ಬಳಸುವ ವಿದ್ಯುತ್ ಈ ಮಿತಿಗಿಂತ ಹೆಚ್ಚಾದಾಗ, ವಿದ್ಯುತ್ ಸರಬರಾಜು ಕಂಪನಿಗಳು (BESCOM ಅಥವಾ ಇತರ) ದಂಡವನ್ನು ವಿಧಿಸುತ್ತವೆ, ಅದನ್ನೇ ‘M.D. Penalty’ ಎನ್ನಲಾಗುತ್ತದೆ. ನೀವು ಏಕಕಾಲದಲ್ಲಿ ಗೀಸರ್, ವಾಷಿಂಗ್ ಮೆಷಿನ್ ಮತ್ತು ಇತರ ಅತಿ ಹೆಚ್ಚು ವಿದ್ಯುತ್ ಬಳಸುವ ಉಪಕರಣಗಳನ್ನು ಆನ್ ಮಾಡಿದರೆ, ಲೋಡ್ ಹೆಚ್ಚಾಗುತ್ತದೆ. ವಿಡಿಯೋದಲ್ಲಿ ತೋರಿಸಿರುವಂತೆ, ಒಬ್ಬ ಗ್ರಾಹಕರು 1kw ಮಿತಿಯನ್ನು ಹೊಂದಿದ್ದು, 1.006kw ಬಳಸಿದಾಗ ಅವರಿಗೆ ದಂಡ ವಿಧಿಸಲಾಗುತ್ತದೆ. ಹಳೆಯ ಬಿಲ್‌ನಲ್ಲಿ ‘M.D. Penalty’ ಶೂನ್ಯವಾಗಿದ್ದರೆ, ಬಿಲ್ ಮೊತ್ತ ಕಡಿಮೆ ಇರುತ್ತದೆ (ಉದಾಹರಣೆಗೆ 604 ರೂ.).ಹೊಸ ಬಿಲ್‌ನಲ್ಲಿ ಮಿತಿ ಮೀರಿದಾಗ (ಉದಾಹರಣೆಗೆ 1003.24 ರೂ.), ಅಲ್ಲಿ ಮಿತಿ ಮೀರಿದ ಲೋಡ್ ಅನ್ನು ಮಾರ್ಕ್ ಮಾಡಲಾಗಿರುತ್ತದೆ. ಗೀಸರ್ ಮತ್ತು ವಾಷಿಂಗ್ ಮೆಷಿನ್‌ನಂತಹ ಅತಿ ಹೆಚ್ಚು ವಿದ್ಯುತ್ ಬಳಸುವ ಯಂತ್ರಗಳನ್ನು ಒಂದೇ ಸಮಯದಲ್ಲಿ ಆನ್ ಮಾಡಬೇಡಿ. ಮನೆಯಲ್ಲಿ ಉಪಕರಣಗಳು ಹೆಚ್ಚಾಗಿದ್ದರೆ, ನಿಮ್ಮ ‘Sanctioned Load’ ಅನ್ನು 1kw ನಿಂದ 1kw ಅಥವಾ ಅದಕ್ಕಿಂತ ಹೆಚ್ಚಕ್ಕೆ ಏರಿಸಿಕೊಳ್ಳಲು ಅರ್ಜಿ ಸಲ್ಲಿಸಿ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ