Video: ದೂರ ಕುಳಿತು ಮಾತನಾಡಿ, ಮುಖದ ಹತ್ತಿರ ಬಂದು ಮಾತನಾಡಿದ ವ್ಯಕ್ತಿಗೆ ಸಂಸದೆ ಪ್ರಿಯಾ ಖಡಕ್ ರಿಯಾಕ್ಷನ್
ಸಮಾಜವಾದಿ ಪಕ್ಷದ ಸಂಸದೆ ಹಾಗೂ ಭಾರತೀಯ ಕ್ರಿಕೆಟಿಗ ರಿಂಕು ಸಿಂಗ್ ಅವರ ಮದುವೆಯಾಗಲಿರುವ ಪ್ರಿಯಾ ಸರೋಜ್ ವೇದಿಕೆ ಕಾರ್ಯಕ್ರಮವೊಂದರಲ್ಲಿ ಇರಿಸುಮುರಿಸು ಅನುಭವಿಸಿರುವ ವಿಡಿಯೋ ವೈರಲ್ ಆಗಿದೆ. ವೇದಿಕೆಯಲ್ಲಿ ಖಾಲಿ ಇದ್ದ ಖುರ್ಚಿಯಲ್ಲಿ ವ್ಯಕ್ತಿಯೊಬ್ಬರು ಬಂದು ಕುಳಿತು ಪ್ರಿಯಾ ಅವರ ಮುಖದ ಹತ್ತಿರ ತಮ್ಮ ಮುಖ ತಂದು ಮಾತನಾಡಿದ್ದು, ಪ್ರಿಯಾ ಅವರ ಕೋಪಕ್ಕೆ ಕಾರಣವಾಗಿದೆ.
ಲಕ್ನೋ, ಜನವರಿ 22: ಸಮಾಜವಾದಿ ಪಕ್ಷದ ಸಂಸದೆ ಹಾಗೂ ಭಾರತೀಯ ಕ್ರಿಕೆಟಿಗ ರಿಂಕು ಸಿಂಗ್ ಅವರ ಮದುವೆಯಾಗಲಿರುವ ಪ್ರಿಯಾ ಸರೋಜ್ ವೇದಿಕೆ ಕಾರ್ಯಕ್ರಮವೊಂದರಲ್ಲಿ ಇರಿಸುಮುರಿಸು ಅನುಭವಿಸಿರುವ ವಿಡಿಯೋ ವೈರಲ್ ಆಗಿದೆ. ವೇದಿಕೆಯಲ್ಲಿ ಖಾಲಿ ಇದ್ದ ಖುರ್ಚಿಯಲ್ಲಿ ವ್ಯಕ್ತಿಯೊಬ್ಬರು ಬಂದು ಕುಳಿತು ಪ್ರಿಯಾ ಅವರ ಮುಖದ ಹತ್ತಿರ ತಮ್ಮ ಮುಖ ತಂದು ಮಾತನಾಡಿದ್ದು, ಪ್ರಿಯಾ ಅವರ ಕೋಪಕ್ಕೆ ಕಾರಣವಾಗಿದೆ.
ಕೂಡಲೇ ಪ್ರಿಯಾ ಸ್ವಲ್ಪ ಪಕ್ಕಕ್ಕೆ ಸರಿದು ದೂರದಿಂದ ಮಾತನಾಡಿ ಎಂದು ಖಡಕ್ ಆಗಿ ಉತ್ತರ ಕೊಟ್ಟಿದ್ದಾರೆ. ಈ ಘಟನೆ ಉತ್ತರ ಪ್ರದೇಶದ ಜೌನ್‌ಪುರದಲ್ಲಿ ನಡೆದಿದೆ ಎಂದು ವರದಿಯಾಗಿದೆ.ಈ ಘಟನೆ ನಡೆದಾಗ ಪ್ರಿಯಾ ಸರೋಜ್ ಅವರನ್ನು ದಂಗಲ್ (ಕುಸ್ತಿ) ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಹ್ವಾನಿಸಲಾಗಿತ್ತು.
ಪ್ರಿಯಾ 2024ರ ಲೋಕಸಭಾ ಚುನಾವಣೆಯಲ್ಲಿ, ಸಮಾಜವಾದಿ ಪಕ್ಷದ ಟಿಕೆಟ್‌ನಲ್ಲಿ ಮೊದಲ ಬಾರಿಗೆ ಮಚ್ಲಿಶಹರ್‌ನಿಂದ ಸ್ಪರ್ಧಿಸಿ ಗೆದ್ದರು, ಬಿಜೆಪಿಯ ಹಾಲಿ ಸಂಸದ ಬಿಪಿ ಸರೋಜ್ ಅವರನ್ನು 35,೦೦೦ ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ