Video: ಅಯೋಧ್ಯೆಯಲ್ಲಿ ನಿರ್ಮಾಣವಾಗಲಿದೆ 25 ಅಡಿ ಎತ್ತರದ ರಾವಣನ ಪ್ರತಿಮೆ

Updated on: Nov 10, 2025 | 8:14 AM

ಅಯೋಧ್ಯೆಯಲ್ಲಿ 25 ಅಡಿ ಎತ್ತರದ ರಾವಣನ ಪ್ರತಿಮೆ ನಿರ್ಮಾಣವಾಗಲಿದೆ ಎಂದು ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ. ಧಾರ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಿಸಲು ಯೋಗಿ ಆದಿತ್ಯನಾಥ್ ಸರ್ಕಾರವು ಅಯೋಧ್ಯೆಯಲ್ಲಿ ಅಭಿವೃದ್ಧಿಪಡಿಸುತ್ತಿರುವ ಭವ್ಯ ರಾಮಾಯಣ ಉದ್ಯಾನದಲ್ಲಿ 25 ಅಡಿ ಎತ್ತರದ ರಾವಣನ ಪ್ರತಿಮೆಯನ್ನು ಶೀಘ್ರದಲ್ಲೇ ಸ್ಥಾಪಿಸಲಾಗುವುದು. ಈ ಪ್ರತಿಮೆಯು ಭಗವಾನ್ ರಾಮ ಮತ್ತು ರಾವಣನ ನಡುವಿನ ಯುದ್ಧವನ್ನು ಚಿತ್ರಿಸುತ್ತದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಗುಪ್ತಾರ್ ಘಾಟ್ ಬಳಿ ಈ ಉದ್ಯಾನ ನಿರ್ಮಿಸಲಾಗುತ್ತಿದೆ. ಮತ್ತೊಂದು ಪ್ರಮುಖ ಆಕರ್ಷಣೆ ರಾಮ ದರ್ಬಾರ್ ಆಗಿದ್ದು, ಇದರಲ್ಲಿ ರಾಮ, ಸೀತೆ ಮತ್ತು ಲಕ್ಷ್ಮಣರ ಪ್ರತಿಮೆಗಳಿವೆ. ರಾಮಾಯಣದ ಪ್ರಮುಖ ಕ್ಷಣಗಳ ಆಧ್ಯಾತ್ಮಿಕ ಅನುಭವವನ್ನು ಜನರಿಗೆ ಒದಗಿಸುವುದು ಇದರ ಉದ್ದೇಶವಾಗಿದೆ.

ಲಕ್ನೋ, ನವೆಂಬರ್ 10: ಅಯೋಧ್ಯೆಯಲ್ಲಿ 25 ಅಡಿ ಎತ್ತರದ ರಾವಣನ ಪ್ರತಿಮೆ ನಿರ್ಮಾಣವಾಗಲಿದೆ ಎಂದು ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ. ಧಾರ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಿಸಲು ಯೋಗಿ ಆದಿತ್ಯನಾಥ್ ಸರ್ಕಾರವು ಅಯೋಧ್ಯೆಯಲ್ಲಿ ಅಭಿವೃದ್ಧಿಪಡಿಸುತ್ತಿರುವ ಭವ್ಯ ರಾಮಾಯಣ ಉದ್ಯಾನದಲ್ಲಿ 25 ಅಡಿ ಎತ್ತರದ ರಾವಣನ ಪ್ರತಿಮೆಯನ್ನು ಶೀಘ್ರದಲ್ಲೇ ಸ್ಥಾಪಿಸಲಾಗುವುದು. ಈ ಪ್ರತಿಮೆಯು ಭಗವಾನ್ ರಾಮ ಮತ್ತು ರಾವಣನ ನಡುವಿನ ಯುದ್ಧವನ್ನು ಚಿತ್ರಿಸುತ್ತದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಗುಪ್ತಾರ್ ಘಾಟ್ ಬಳಿ ಈ ಉದ್ಯಾನ ನಿರ್ಮಿಸಲಾಗುತ್ತಿದೆ. ಮತ್ತೊಂದು ಪ್ರಮುಖ ಆಕರ್ಷಣೆ ರಾಮ ದರ್ಬಾರ್ ಆಗಿದ್ದು, ಇದರಲ್ಲಿ ರಾಮ, ಸೀತೆ ಮತ್ತು ಲಕ್ಷ್ಮಣರ ಪ್ರತಿಮೆಗಳಿವೆ. ರಾಮಾಯಣದ ಪ್ರಮುಖ ಕ್ಷಣಗಳ ಆಧ್ಯಾತ್ಮಿಕ ಅನುಭವವನ್ನು ಜನರಿಗೆ ಒದಗಿಸುವುದು ಇದರ ಉದ್ದೇಶವಾಗಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ