ಶೃಂಗೇರಿ ಶಾರದಾಮಠದಲ್ಲಿದೆ ಅಯೋಧ್ಯೆ ರಾಮಮಂದಿರ ಪ್ರತಿಕೃತಿ
ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗಿದೆ. ಈ ಮಂದಿರದಲ್ಲಿ ಪ್ರಾಣ ಪ್ರತಿಷ್ಠೆಗೆ ಕ್ಷಣಗಣನೆ ಆರಂಭವಾಗಿದೆ. ಅಯೋಧ್ಯೆಯಲ್ಲಿರುವ ರಾಮಮಂದಿರದ ಪ್ರತಿಕೃತಿ ಶೃಂಗೇರಿ ಶಾರದಾಂಭೆಯ ಸನ್ನಿದಿಯಲ್ಲಿದೆ. ತುಮಕೂರು ಮೂಲಕ ವಿನಯ್ ರಾಮ್ ಅವರು ರಾಮಮಂದಿರ ಪ್ರತಿಕೃತಿ ತಯಾರಿಸಿದ್ದಾರೆ.
ಚಿಕ್ಕಮಗಳೂರು, ಜನವರಿ 21: ಅಯೋಧ್ಯೆಯಲ್ಲಿ (Ayodhya) ಭವ್ಯ ರಾಮಮಂದಿರ (Ram Mandir) ನಿರ್ಮಾಣವಾಗಿದೆ. ಈ ಮಂದಿರದಲ್ಲಿ ಪ್ರಾಣ ಪ್ರತಿಷ್ಠೆಗೆ ಕ್ಷಣಗಣನೆ ಆರಂಭವಾಗಿದೆ. ಅಯೋಧ್ಯೆಯಲ್ಲಿರುವ ರಾಮಮಂದಿರದ ಪ್ರತಿಕೃತಿ ಶೃಂಗೇರಿ ಶಾರದಾಂಬೆಯ (Sringeri) ಸನ್ನಿದಿಯಲ್ಲಿದೆ. ತುಮಕೂರು ಮೂಲಕ ವಿನಯ್ ರಾಮ್ ಅವರು ರಾಮಮಂದಿರ ಪ್ರತಿಕೃತಿ ತಯಾರಿಸಿದ್ದಾರೆ. ದೇವಸ್ಥಾನದ ಯಾಗ ಮಂಟಪದಲ್ಲಿ ಪ್ರದರ್ಶನಕ್ಕೆ ಇಡಲಾಗಲಿದೆ. ರಾಮಮಂದಿರದ ಕಲಾಕೃತಿಯನ್ನು 55 ಸ್ಥಳಗಳಲ್ಲಿ ಪ್ರದರ್ಶಿಸಲು ನಿಶ್ಚಯಿಸಲಾಗಿದೆ. ಕಲಾಕೃತಿಯಲ್ಲಿ ರಾಮ, ಲಕ್ಷ್ಮಣ ಮತ್ತು ಸೀತೆಯರ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ. ಕಲಾಕೃತಿ ಪ್ರದರ್ಶನ 2022ರ ಡಿಸೆಂಬರ್ 31 ರಿಂದ ಬೆಂಗಳೂರಿನಿಂದ ಪ್ರಾರಂಭವಾಗಿದೆ. ಇದೀಗ ಶೃಂಗೇರಿ ಮಠಕ್ಕೆ ಆಗಮಿಸಿದ್ದು, ಯಾಗ ಮಂಟಪದಲ್ಲಿ 8 ದಿನಗಳ ಕಾಲ ಪ್ರದರ್ಶನಕ್ಕೆ ಇಡಲಾಗಿದೆ.
Published on: Jan 21, 2024 04:24 PM