ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು

Updated on: Jan 30, 2026 | 8:30 PM

B Jayashree land issue: ಹಿರಿಯ ನಟಿ, ರಂಗಕರ್ಮಿ, ಮಾಜಿ ರಾಜ್ಯಸಭಾ ಸದಸ್ಯೆಯೂ ಆಗಿರುವ ಬಿ ಜಯಶ್ರೀ ಅವರು ಸರ್ಕಾರಿ ಅಧಿಕಾರಿಗಳು, ವಿಶೇಷವಾಗಿ ಗುಬ್ಬಿ ಭೂಮಾಪನಾ ಇಲಾಖೆ ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ತಾವು ದಾನ ಕೊಟ್ಟ ಭೂಮಿಗೆ ಸಂಬಂಧಿಸಿದಂತೆ ಅಧಿಕಾರಿಗಳ ನಿರ್ಲಕ್ಷ್ಯ ವರ್ತನೆಯೇ ಇದಕ್ಕೆ ಕಾರಣ. ವಿಡಿಯೋ ನೋಡಿ...

ಮಾಜಿ ರಾಜ್ಯಸಭಾ ಸದಸ್ಯೆ, ಹಿರಿಯ ನಟ, ರಂಗಕರ್ಮಿ ಬಿ ಜಯಶ್ರೀ (B Jayashree) ಅವರು ತಮ್ಮ ತಾಯಿ ಜಿವಿ ಮಾಲತಮ್ಮ ಆರ್ಟ್ ಟ್ರಸ್ಟ್ ಗೆ ತಮ್ಮೂರಾದ ಗುಬ್ಬಿಯಲ್ಲಿ ರಂಗ ಚಟುವಟಿಕೆ ನಡೆಸಲು ಅವರ ಹೆಸರಿನಲ್ಲಿದ್ದ 5 ಗುಂಟೆ ಜಾಗವನ್ನ ದಾನವಾಗಿ ಕೊಟ್ಟಿದ್ದರು, ಇದೇ ಜಾಗದ ಸರ್ವೇಗೆ ಮೂರು ಬಾರಿ ಅರ್ಜಿ ಸಹ ಸಲ್ಲಿಸಿದ್ದರು. ಸರ್ವೆಗೆ ಅರ್ಜಿ ಶುಲ್ಕ 3500ರೂ ಪಾವತಿ ಕೂಡಾ ಮಾಡಿದ್ದಾರೆ. ಆದರೆ ಅಧಿಕಾರಿಗಳು ಇದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ನಿನ್ನೆ ಜಾಗದ ಸರ್ವೆ ಮಾಡಲು ಬರೋದಾಗಿ ತಿಳಿಸಿದ್ದಾರೆ. ಹೀಗಾಗಿ ಬೆಂಗಳೂರಿಂದ ಗುಬ್ಬಿಗೆ ಜಯಶ್ರೀ ಅವರು ಬಂದಿದ್ದರು. ಜಾಗದ ಬಳಿ ಗಂಟೆಗಟ್ಟಲೆ ಕಾದರು ಅಧಿಕಾರಿಗಳು ಸರ್ವೆ ಮಾಡಲು ಬಂದಿಲ್ಲವಂತೆ. ಕೂಡಲೇ ಗುಬ್ಬಿ ಪಟ್ಟಣದಲ್ಲಿರುವ ಭೂ ಮಾಪನ ಇಲಾಖೆ ಕಚೇರಿಗೆ ಹೋಗಿ ನೇರವಾಗಿ ಅಧಿಕಾರಿಗಳ ಮುಂದೆ ಬೇಸರ ವ್ಯಕ್ತಪಡಿಸಿದ್ದಾರೆ. ಇಲ್ಲಿದೆ ನೋಡಿ ವಿಡಿಯೋ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ