VIDEO: ಮೊದಲ ಓವರ್ನಲ್ಲೇ ಗೆರೆ ದಾಟಿ ಔಟಾದ ಬಾಬರ್ ಆಝಂ
BBL 2026: ಈ ಪಂದ್ಯದಲ್ಲಿ ಮೊದಲ ಓವರ್ನಲ್ಲೇ ವಿಕೆಟ್ ಕೈಚೆಲ್ಲುವ ಮೂಲಕ ಬಾಬರ್ ಆಝಂ ನೀಡಿದ ಆತ್ಮ ವಿಶ್ವಾಸದೊಂದಿಗೆ ಪರ್ತ್ ಸ್ಕಾಚರ್ಸ್ ತಂಡವು ಅತ್ಯುತ್ತವಾಗಿ ಬೌಲಿಂಗ್ ಸಂಘಟಿಸಿದರು. ಪರಿಣಾಮ ಸಿಡ್ನಿ ಸಿಕ್ಸರ್ಸ್ 15 ಓವರ್ಗಳಲ್ಲಿ 99 ರನ್ಗಳಿಸಿ ಆಲೌಟ್ ಆಗಿದ್ದಾರೆ. ಈ ಮೂಲಕ ಪರ್ತ್ ಸ್ಕಾಚರ್ಸ್ ತಂಡವು 48 ರನ್ಗಳ ಜಯ ಸಾಧಿಸಿ ಫೈನಲ್ಗೆ ಪ್ರವೇಶಿಸಿದೆ.
ಬಿಗ್ ಬ್ಯಾಷ್ ಲೀಗ್ನಲ್ಲಿ ಬಾಬರ್ ಆಝಂ ಅವರ ಕಳಪೆ ಪ್ರದರ್ಶನ ಮುಂದುವರೆದಿದೆ. ಈ ಕಳಪೆ ಪ್ರದರ್ಶನದ ನಡುವೆ ಕ್ವಾಲಿಫೈಯರ್ ಪಂದ್ಯದಲ್ಲಿ ಔಟಾದ ರೀತಿ ಈಗ ಚರ್ಚೆಗೆ ಕಾರಣವಾಗಿದೆ. ಪರ್ತ್ನಲ್ಲಿ ನಡೆದ ಬಿಗ್ ಬ್ಯಾಷ್ ಲೀಗ್ನ ಕ್ವಾಲಿಫೈಯರ್ ಪಂದ್ಯದಲ್ಲಿ ಸಿಡ್ನಿ ಸಿಕ್ಸರ್ಸ್ ಹಾಗೂ ಪರ್ತ್ ಸ್ಕಾಚರ್ಸ್ ತಂಡಗಳು ಮುಖಾಮುಖಿಯಾಗಿದ್ದವು.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪರ್ತ್ ಸ್ಕಾಚರ್ಸ್ ತಂಡವು 20 ಓವರ್ಗಳಲ್ಲಿ ಕಲೆಹಾಕಿದ್ದು ಕೇವಲ 147 ರನ್ಗಳು ಮಾತ್ರ. ಈ ಸುಲಭ ಗುರಿಯನ್ನು ಬೆನ್ನತ್ತಿದ ಸಿಡ್ನಿ ಸಿಕ್ಸರ್ಸ್ ತಂಡಕ್ಕೆ ಆಘಾತ ನೀಡಿದ್ದು ಬಾಬರ್ ಆಝಂ.
ಏಕೆಂದರೆ ಅಲ್ಪ ಮೊತ್ತದ ಗುರಿ ಹೊಂದಿದ್ದರೂ ಬಾಬರ್ ಆಝಂ ಮೊದಲ ಓವರ್ನ ಮೊದಲ ಎಸೆತದಲ್ಲೇ ಮುನ್ನುಗ್ಗಿ ಬಂದು ಶಾಟ್ ಬಾರಿಸಲು ಪ್ರಯತ್ನಿಸಿದ್ದರು. ಅತ್ತ ಮೊದಲ ಓವರ್ನಲ್ಲಿ ಸ್ಪಿನ್ನರ್ನನ್ನು ಬಳಸಿ ವಿಕೆಟ್ ಬೇಟೆಗೆ ಪರ್ತ್ ಸ್ಕಾಚರ್ಸ್ ತಂಡ ಪ್ಲ್ಯಾನ್ ರೂಪಿಸಿತ್ತು.
ಈ ತಂತ್ರವನ್ನು ಅರಿಯದೇ ಬಾಬರ್ ಕ್ರೀಸ್ ಗೆರೆ ದಾಟುತ್ತಿದ್ದಂತೆ ವಿಕೆಟ್ ಕೀಪರ್ ಬೇಲ್ಸ್ ಎಗರಿಸಿದರು. ಈ ಮೂಲಕ ಬಾಬರ್ ಆಝಂ ಮೊದಲ ಓವರ್ನ 2ನೇ ಎಸೆತದಲ್ಲೇ ಸ್ಟಂಪ್ ಔಟ್ ಔಟಾಗಿ ಶೂನ್ಯದೊಂದಿಗೆ ಮರಳಿದರು.
ಹೀಗೆ ಮೊದಲ ಓವರ್ನಲ್ಲೇ ಸ್ಟಂಪ್ ಔಟ್ ಆಗಿ ಹೊರ ನಡೆದಿರುವ ಬಾಬರ್ ಆಝಂ ಅವರ ಬ್ಯಾಟಿಂಗ್ ವೈಖರಿಯ ಬಗ್ಗೆ ಈಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗಳು ನಡೆಯುತ್ತಿದೆ. ಅದರಲ್ಲೂ ಸಿಡ್ನಿ ಸಿಕ್ಸರ್ಸ್ ಅಭಿಮಾನಿಗಳು ಪಾಕ್ ದಾಂಡಿಗನ ಕಳಪೆಯಾಟಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಏಕೆಂದರೆ ಈ ಪಂದ್ಯದಲ್ಲಿ ಮೊದಲ ಓವರ್ನಲ್ಲೇ ವಿಕೆಟ್ ಕೈಚೆಲ್ಲುವ ಮೂಲಕ ಬಾಬರ್ ಆಝಂ ನೀಡಿದ ಆತ್ಮ ವಿಶ್ವಾಸದೊಂದಿಗೆ ಪರ್ತ್ ಸ್ಕಾಚರ್ಸ್ ತಂಡವು ಅತ್ಯುತ್ತವಾಗಿ ಬೌಲಿಂಗ್ ಸಂಘಟಿಸಿದರು. ಪರಿಣಾಮ ಸಿಡ್ನಿ ಸಿಕ್ಸರ್ಸ್ 15 ಓವರ್ಗಳಲ್ಲಿ 99 ರನ್ಗಳಿಸಿ ಆಲೌಟ್ ಆಗಿದ್ದಾರೆ. ಈ ಮೂಲಕ ಪರ್ತ್ ಸ್ಕಾಚರ್ಸ್ ತಂಡವು 48 ರನ್ಗಳ ಜಯ ಸಾಧಿಸಿ ಫೈನಲ್ಗೆ ಪ್ರವೇಶಿಸಿದೆ.