ರಮ್ಯಾ ಬಗ್ಗೆ ಅವಹೇಳನಾಕಾರಿ ಪೋಸ್ಟ್: ಆರೋಪಿಗಳ ಮೊಬೈಲ್​ FSLಗೆ ರವಾನೆ

Updated on: Oct 05, 2025 | 10:36 AM

ನಟಿ ರಮ್ಯಾ ಬಗ್ಗೆ ಅವಹೇಳನಕಾರಿ ಪೋಸ್ಟ್​ ಮಾಡುವ ಮೂಲಕ ಪೊಲೀಸರ ಅತಿಥಿಗಳಾಗಿರೋ 12 ಜನ ಆರೋಪಿಗಳ ಮೊಬೈಲ್​ ಗಳನ್ನ FSLಗೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ಚಾರ್ಜ್​ ಶೀಟ್​ ಸಲ್ಲಿಕೆಗೆ ಸೈಬರ್​​ ಕ್ರೈಮ್​ ಪೊಲೀಸರು ತಯಾರಿ ನಡೆಸಿದ್ದರೆ, ಮತ್ತೊಂದೆಡೆ ಜೈಲಲ್ಲಿರೋ ಮಕ್ಕಳನ್ನ ಹೊರಗೆ ಕರೆತರಲು ಜಾಮೀನಿಗಾಗಿ ಪೋಷಕರು ಹರಸಾಹಸ ಪಡ್ತಿದ್ದಾರೆ.

ಬೆಂಗಳೂರು, ಅಕ್ಟೋಬರ್​ 05: ಮಾಜಿ ಸಂಸದೆ, ನಟಿ ರಮ್ಯಾ (Ramya) ಬಗ್ಗೆ ಅವಹೇಳನಾಕಾರಿ ಪೋಸ್ಟ್ ಕೇಸ್ ಸಂಬಂಧ 12 ಆರೋಪಿಗಳ ಫೋನ್ ಗಳನ್ನು​​ ರಿಟ್ರೀವ್​​ ಗಾಗಿ ಎಫ್​ಎಸ್​ಎಲ್​ ಗೆ ರವಾನೆ ಮಾಡಲಾಗಿದೆ. ಆರೋಪಿಗಳ ಖಾತೆಗಳು, ಪೋಸ್ಟ್ ರಿಟ್ರೀವ್ ಆಗಬೇಕಿದ್ದು, ವರದಿ ಬಂದ ಬಳಿಕ ಸೈಬರ್​​ ಕ್ರೈಮ್​ ಪೊಲೀಸರು ಚಾರ್ಜ್​ ಶೀಟ್​ ಸಲ್ಲಿಕೆ ಮಾಡಲಿದ್ದಾರೆ.
ಮಹಿಳೆಯ ಘನತೆ, ಗೌರವಕ್ಕೆ ಧಕ್ಕೆಯಾಗುವಂತೆ ಪೋಸ್ಟ್ ಆರೋಪ ಹಿನ್ನೆಲೆ ಪ್ರಕರಣ ಸಂಬಂಧ ಈವರೆಗೂ 12 ಆರೋಪಿಗಳನ್ನು ಸಿಸಿಬಿ ಬಂಧಿಸಿದೆ. ಮತ್ತೊಂದೆಡೆ ಜಾಮೀನಿಗಾಗಿ ಆರೋಪಿಗಳು ಪರದಾಟ ನಡೆಸುತ್ತಿದ್ದು, ಮಕ್ಕಳ ಜೈಲಿನಿಂದ ಮಕ್ಕಳನ್ನ ಹೊರ ತರಲು ಪೋಷಕರು ಹರಸಾಹಸ ಪಡ್ತಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ.