6ಕ್ಕೆ ಆರೂ ವಿಷಯದಲ್ಲಿ ಫೇಲಾದ ಮಗನಿಗೆ ಕೇಕ್‌ ತಿನ್ನಿಸಿ ಧೈರ್ಯ ತುಂಬಿದ ಅಪ್ಪ

Edited By:

Updated on: May 02, 2025 | 10:55 PM

ಬಾಗಲಕೋಟೆಯ ನವನಗರದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಆರು ವಿಷಯಗಳಲ್ಲಿಯೂ ಫೇಲ್ ಆದ ಅಭಿಷೇಕ್ ಯಲ್ಲಪ್ಪ ಚೊಳಚಗುಡ್ಡ ಎಂಬ ವಿದ್ಯಾರ್ಥಿಗೆ ಅವನ ಕುಟುಂಬ ಕೇಕ್ ತಿನ್ನಿಸಿ ಧೈರ್ಯ ತುಂಬಿದೆ. ಪೋಷಕರು, ಸಹೋದರ, ಸಹೋದರಿ ಮತ್ತು ಅಜ್ಜಿ ಸೇರಿದಂತೆ ಇಡೀ ಕುಟುಂಬ ಈ ಸಂದರ್ಭದಲ್ಲಿ ಒಟ್ಟಾಗಿ ನಿಂತು ಅಭಿಷೇಕ್‌ಗೆ ಭವಿಷ್ಯದಲ್ಲಿ ಯಶಸ್ಸು ಸಾಧಿಸಲು ಪ್ರೋತ್ಸಾಹ ನೀಡಿದೆ. ಈ ಘಟನೆ ಕುಟುಂಬದ ಪ್ರೀತಿ ಮತ್ತು ಬೆಂಬಲದ ಶಕ್ತಿಯನ್ನು ತೋರಿಸುತ್ತದೆ.

ಬಾಗಲಕೋಟೆ, ಮೇ 02: ಎಸ್​ಎಸ್​ಎಲ್​ಸಿ 6 ವಿಷಯದಲ್ಲೂ ಫೇಲ್ ಆದ ಮಗನಿಗೆ ಪೋಷಕರು ಕೇಕ್‌ ತಿನ್ನಿಸಿ ಧೈರ್ಯ ಹೇಳಿದ ಘಟನೆ ಬಾಗಲಕೋಟೆಯ ನವನಗರದಲ್ಲಿ ನಡೆದಿದೆ. ಫೇಲ್ ಆದ ಮನೆ ಮಗನಿಗೆ ತಂದೆ, ತಾಯಿ, ಸಹೋದರ, ಸಹೋದರಿ ಅಜ್ಜಿ ಹಾಗೂ ಕುಟುಂಬದ ಇತರ ಸದಸ್ಯರು ಕೇಕ್ ತಿನ್ನಿಸಿ ಧೈರ್ಯ ಹೇಳಿದ್ದಾರೆ. ಅಭಿಷೇಕ ಯಲ್ಲಪ್ಪ ಚೊಳಚಗುಡ್ಡ ಎಂಬುವರು ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ 625ಕ್ಕೆ 200 ಅಂಕ (ಶೇ 32 ರಷ್ಟು) ಅಂಕ ಪಡೆದು ಆರಕ್ಕೆ ಆರೂ ವಿಷಯದಲ್ಲಿ ಪೇಲ್​ ಆಗಿದ್ದಾರೆ.