ಟಿಕೆಟ್ ಸಿಗದಿದ್ದರೆ ವೀಣಾ ಕಾಶಪ್ಪನವರ್ ಬಂಡಾಯವೇಳಲಿದ್ದಾರೆಯೇ? ಅವರ ಮಾತುಗಳಲ್ಲಿ ಸುಳಿವನ್ನು ಗುರುತಿಸಬಹುದು!

|

Updated on: Mar 18, 2024 | 2:55 PM

ಟಿಕೆಟ್ ಹಂಚಿಕೆ ಅಂತಿಮಗೊಳ್ಳಲು ಇನ್ನೂ ಎರಡು ದಿನ ಬಾಕಿಯಿದೆ, ಅದು ಸಿಗುವ ಭರವಸೆ ಇದೆ. ಯಾಕೆಂದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ತಾನು ಅಲ್ಪ ಅಂತರದಿಂದ ಸೋತ ಬಳಿಕ ನಿರಾಶಳಾಗಿ ಮನೆಯಲ್ಲಿ ಕೂರದೆ ಈ ಐದು ವರ್ಷಗಳ ಕಾಲ ಕ್ಷೇತ್ರದೆಲ್ಲೆಡೆ ಓಡಾಡಿ ಕೆಲಸ ಮಾಡಿರುವುದಾಗಿ ಹೇಳಿದ ವೀಣಾ ಸೋತಲ್ಲೇ ಗೆಲ್ಲುವ ಛಲ ತನ್ನದು ಎಂದರು.

ಬೆಂಗಳೂರು: ಬಂಡಾಯ ಪ್ರವೃತ್ತಿ ಕೇವಲ ಬಿಜೆಪಿ ನಾಯಕರು ಮಾತ್ರ ಪ್ರದರ್ಶಿಸುತ್ತಿಲ್ಲ, ಟಿಕೆಟ್ ಆಕಾಂಕ್ಷಿಗಳಾಗಿರುವ ಕಾಂಗ್ರೆಸ್ ಪಕ್ಷದ ನಾಯಕರಲ್ಲೂ ಅಂತ ಧೋರಣೆ ಕಾಣಿಸುತ್ತಿದೆ. ಬಾಗಲಕೋಟೆ ಕ್ಷೇತ್ರದ ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರು ಇಂದು ಬೆಂಗಳೂರಿಗೆ ಬಂದು ವೀಣಾ ಕಾಶಪ್ಪನವರ್​ ಅವರಿಗೆ (Veena Kashappanavar) ಟಿಕೆಟ್ ನೀಡಲೇಬೇಕೆಂದು ಸಿಎಂ ಸಿದ್ದರಾಮಯ್ಯ ನಿವಾಸದ (CM Siddaramaiah residence) ಮುಂದೆ ಪ್ರದರ್ಶನ ನಡೆಸಿದರು. ಇದೇ ಸಂದರ್ಭದಲ್ಲಿ ಬೆಂಗಳೂರಲ್ಲಿರುವ ವೀಣಾರೊಂದಿಗೆ ಟಿವಿ9 ಬೆಂಗಳೂರು ವರದಿಗಾರ ಮಾತಾಡಿದ್ದು, ತಮ್ಮ ಮೇಲಿನ ಪ್ರೀತಿ ಮತ್ತು ಅಭಿಮಾನಕ್ಕಾಗಿ ಮಹಿಳೆಯರು ಇಲ್ಲಿಯವರೆಗೆ ಬಂದಿದ್ದಾರೆ ಅವರ ಪ್ರೀತಿ-ವಿಶ್ವಾಸಕ್ಕೆ ಅಭಾರಿಯಾಗಿದ್ದೇನೆ (indebted) ಎಂದರು. ಟಿಕೆಟ್ ಹಂಚಿಕೆ ಅಂತಿಮಗೊಳ್ಳಲು ಇನ್ನೂ ಎರಡು ದಿನ ಬಾಕಿಯಿದೆ, ಅದು ಸಿಗುವ ಭರವಸೆ ಇದೆ. ಯಾಕೆಂದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ತಾನು ಅಲ್ಪ ಅಂತರದಿಂದ ಸೋತ ಬಳಿಕ ನಿರಾಶಳಾಗಿ ಮನೆಯಲ್ಲಿ ಕೂರದೆ ಈ ಐದು ವರ್ಷಗಳ ಕಾಲ ಕ್ಷೇತ್ರದೆಲ್ಲೆಡೆ ಓಡಾಡಿ ಕೆಲಸ ಮಾಡಿರುವುದಾಗಿ ಹೇಳಿದ ವೀಣಾ ಸೋತಲ್ಲೇ ಗೆಲ್ಲುವ ಛಲ ತನ್ನದು ಎಂದರು.

ಸಚಿವ ಶಿವಾನಂದ ಪಾಟೀಲ್ ಅವರ ಪುತ್ರಿ ಬೇರೆ ಜಿಲ್ಲೆಯವರಾದರೂ ಇಲ್ಲಿಂದ ಯಾಕೆ ಟಿಕೆಟ್ ಆಕಾಂಕ್ಷಿಯಾಗಿದ್ದಾರೋ ಗೊತ್ತಿಲ್ಲ, ಆದರೆ 5 ವರ್ಷಗಳಿಂದ ಸಿದ್ಧತೆ ಮಾಡಿಕೊಂಡಿರುವ ತನಗೆ ಟಿಕೆಟ್ ಸಿಗಬೇಕು ಎಂದು ವೀಣಾ ಹೇಳಿದರು. ಒಂದು ವೇಳೆ ಸಿಗದಿದ್ದರೆ? ಮುಂದಿನ ದಿನಗಳಲ್ಲಿ ತನ್ನ ನಿರ್ಧಾರ ತಿಳಿಸುವುದಾಗಿ ಹೇಳಿದ ವೀಣಾ ಸ್ವರದಲ್ಲಿ ಬಂಡಾವೇಳುವ ಅಂಶ ಸ್ಪಷ್ಟವಾಗಿತ್ತು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಪತ್ನಿಗೆ ಲೋಕಸಭೆ ಟಿಕೆಟ್​ ನೀಡುವಂತೆ ಸಿಎಂಗೆ ಬೇಡಿಕೆಯಿಟ್ಟ ಶಾಸಕ ವಿಜಯಾನಂದ ಕಾಶಪ್ಪನವರ್

Follow us on