ಶಕ್ತಿ ಯೋಜನೆಯ ಸವಲತ್ತು ಬಳಸಿಕೊಂಡ ಬಾಗಲಕೋಟೆ ಜಿಲ್ಲಾಧಿಕಾರಿ ಜಾನಕಿ; ಮಹಿಳಾ ಸಿಬ್ಬಂದಿಯೊಂದಿಗೆ ಕೆಎಸ್ಸಾರ್ಟಿಸಿ ಬಸ್ಸಲ್ಲಿ ಉಚಿತ ಪ್ರಯಾಣ!

|

Updated on: Oct 10, 2023 | 1:27 PM

ಇವರೆಲ್ಲ ಸರ್ಕಾರದಿಂದ ಉತ್ತಮ ಸಂಬಳ ಮತ್ತು ಬೇರೆ ಆರ್ಥಿಕ ಸವಲತ್ತುಗಳನ್ನು ಪಡೆದುಕೊಳ್ಳುತ್ತಾರೆ, ಟಿಕೆಟ್ ಖರೀದಿಸಿ ಪ್ರಯಾಣಿಸಬಹುದಿತ್ತು ಅಂತ ಕೆಲವರು ಅಂದುಕೊಂಡಿರಲಿಕ್ಕೂ ಸಾಕು. ಒಂದರ್ಥದಲ್ಲಿ ಅದು ನಿಜ ಅನಿಸುತ್ತದೆ, ಆದರೆ ಸರ್ಕಾರ ಶಕ್ತಿ ಯೋಜನೆ ಘೋಷಿಸುವಾಗ ಷರತ್ತುಗಳೇನೂ ಸೇರಿಸಿರಲಿಲ್ಲ. ಹಾಗಾಗಿ, ಮಹಿಳಾ ಅಧಿಕಾರಿಗಳು ಯೋಜನೆಯ ಫಲ ಪಡೆಯುತ್ತಿರುವುದರಲ್ಲಿ ತಪ್ಪೇನೂ ಇಲ್ಲ

ಬಾಗಲಕೋಟೆ: ಈ ಸುದ್ದಿಯನ್ನು ಗಮನಿಸಿ. ಬಾಗಲಕೋಟೆಯಿಂದ ತೇರದಾಳಕ್ಕೆ ಹೊರಟಿರುವ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್ ನಲ್ಲಿ ಇಲ್ಲಿನ ಜಿಲ್ಲಾಧಿಕಾರಿ ಕೆ ಎಂ ಜಾನಕಿ (KM Janaki), ಅವರ ಕಚೇರಿಯ ಹಾಗೂ ಬೇರೆ ಬೇರೆ ಇಲಾಖೆಯ ಆಧಿಕಾರಿಗಳು ಮತ್ತು ಸಿಬ್ಬಂದಿ ಸಹ ಪ್ರಯಾಣಿಕರು. ಜನತಾ ದರ್ಶನ ಕಾರ್ಯಕ್ರಮದ ಅಂಗವಾಗಿ ಜನರ ದೂರು-ದುಮ್ಮಾನ ಆಲಿಸಲು ಡಿಸಿ ಮೇಡಂ ತೇರದಾಳಕ್ಕೆ (Terdal) ಹೊರಟಿದ್ದಾರೆ. ಅದರಲ್ಲೇನು ವಿಶೇಷ ಅಂತ ನೀವು ಅಂದುಕೊಳ್ಳುತ್ತಿರಬಹುದು. ವಿಶೇಷ ಇದೆ ಮಾರಾಯ್ರೇ. ಜಾನಕಿ ಮತ್ತು ಮಹಿಳಾ ಸಿಬ್ಬಂದಿ ಸಿದ್ದರಾಮಯ್ಯ ಸರ್ಕಾರ (Siddaramaiah government) ಜಾರಿಗೊಳಿಸಿರುವ ಶಕ್ತಿ ಯೋಜನೆಯ (Shakti scheme) ಸವಲತ್ತು ಪಡೆದು ಪ್ರಯಾಣಿಸುತ್ತಿದ್ದಾರೆ. ಬಸ್ ನಿರ್ವಾಹಕ ಎಲ್ಲ ಮಹಿಳೆಯರಿಗೆ ಉಚಿತ ಪ್ರಯಾಣದ ಟಕೆಟ್ ವಿತರಿಸುತ್ತಿರುವುದನ್ನು ನೋಡಬಹುದು. ಇವರೆಲ್ಲ ಸರ್ಕಾರದಿಂದ ಉತ್ತಮ ಸಂಬಳ ಮತ್ತು ಬೇರೆ ಆರ್ಥಿಕ ಸವಲತ್ತುಗಳನ್ನು ಪಡೆದುಕೊಳ್ಳುತ್ತಾರೆ, ಟಿಕೆಟ್ ಖರೀದಿಸಿ ಪ್ರಯಾಣಿಸಬಹುದಿತ್ತು ಅಂತ ಕೆಲವರು ಅಂದುಕೊಂಡಿರಲಿಕ್ಕೂ ಸಾಕು. ಒಂದರ್ಥದಲ್ಲಿ ಅದು ನಿಜ ಅನಿಸುತ್ತದೆ, ಆದರೆ ಸರ್ಕಾರ ಶಕ್ತಿ ಯೋಜನೆ ಘೋಷಿಸುವಾಗ ಷರತ್ತುಗಳೇನೂ ಸೇರಿಸಿರಲಿಲ್ಲ. ಹಾಗಾಗಿ, ಮಹಿಳಾ ಅಧಿಕಾರಿಗಳು ಯೋಜನೆಯ ಫಲ ಪಡೆಯುತ್ತಿರುವುದರಲ್ಲಿ ತಪ್ಪೇನೂ ಇಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ