ಬಾಗಲಕೋಟೆ: ಸಚಿವ ಸಿಸಿ ಪಾಟೀಲರ ಹಲವು ಪ್ರಯತ್ನಗಳ ಹೊರತಾಗಿಯೂ ಧ್ವಜದ ಕುಣಿಕೆ ಬಿಚ್ಚಿಕೊಳ್ಳಲಿಲ್ಲ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 15, 2022 | 10:47 AM

ಪಾಟೀಲರ ಹಲವು ಯತ್ನಗಳ ಹೊರತಾಗಿಯೂ ತಿರಂಗ ಬಿಚ್ಚಿಕೊಳ್ಳದ ಕಾರಣ ಅದನ್ನು ಕೆಳಗಿಳಿಸಿ ಕುಣಿಕೆಯ ತೊಡಕು ನಿವಾರಿಸಿ, ಕೆಳಗಿರುವಾಗಲೇ ಧ್ವಜವನ್ನು ಬಿಚ್ಚಿ ಮೇಲೆತ್ತಲಾಯಿತು.

ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಸಿಸಿ ಪಾಟೀಲ್ (CC Patil) ಅವರಿಂದ ಜಿಲ್ಲಾ ಕ್ರೀಡಾಂಗಣದಲ್ಲಿ (district stadium) ಇಂದು ಧ್ವಜಾರೋಹಣ (flag hoisting) ಸಾಂಗವಾಗಿ ನೆರವೇರಲಿಲ್ಲ. ಧ್ವಜಕ್ಕೆ ಹಾಕಿದ್ದ ಕುಣಿಕೆ ಪಾಟೀಲರು ಅದನ್ನು ಮೇಲೆ ಹಾರಿಸಿದಾಗ ಬಿಚ್ಚಿಕೊಳ್ಳದೆ ಎಡವಟ್ಟಾಯಿತು. ಧ್ವಜ ಹಾರದೆ ಹೋದಾಗ ಕುಣಿಕೆ ಹಾಕಿದವರ ಮೇಲೆ ಸಚಿವರ ಅಸಹನೆ ಮುಖದಲ್ಲಿ ವ್ಯಕ್ತವಾಗುತಿತ್ತು. ಪಾಟೀಲರ ಹಲವು ಯತ್ನಗಳ ಹೊರತಾಗಿಯೂ ತಿರಂಗ ಬಿಚ್ಚಿಕೊಳ್ಳದ ಕಾರಣ ಅದನ್ನು ಕೆಳಗಿಳಿಸಿ ಕುಣಿಕೆಯ ತೊಡಕು ನಿವಾರಿಸಿ, ಕೆಳಗಿರುವಾಗಲೇ ಧ್ವಜವನ್ನು ಬಿಚ್ಚಿ ಮೇಲೆತ್ತಲಾಯಿತು. ಧ್ವಜ ಹಾರಿಸುವಾಗ ಇಂಥ ಎಡವಟ್ಟುಗಳು ಆಗುತ್ತಿರುತ್ತವೆ ಹಾಗಾಗಿ ಅಧಿಕಾರಿಗಳು ಮುಂಜಾಗ್ರತೆ ವಹಿಸುವುದು ಅಗತ್ಯ.