ಕೆಡಿಪಿ ಸಭೆಯಿಂದ ಅಧಿಕಾರಿಯೊಬ್ಬರನ್ನು ಹೊರ ಹಾಕಿದ ಬಾಗಲಕೋಟೆ ಉಸ್ತುವಾರಿ ಸಚಿವ ಆರ್ ಬಿ ತಿಮ್ಮಾಪುರ
ಕೆಡಿಪಿ ಸಭೆಗಳನ್ನು ಸೀರಿಯಸ್ಸಾಗಿ ಪರಿಗಣಿಸದಿದ್ದರೆ ಎಲ್ಲರ ಮುಂದೆ ಅವಮಾನಕ್ಕೊಳಗಾಗೋದು ನಿಶ್ಚಿತ. ಅಧಿಕಾರಿಗಳು ಇಂಥ ದೋರಣೆಗಳನ್ನು ಹೊಂದಿದ್ದರೆ ಅದು ಯಾವ ಕೋನದಿಂದಲೂ ಸ್ವೀಕೃತವಲ್ಲ. ಹಾಗೆಯೇ ಕೆಲ ಮಿನಿಸ್ಟ್ರುಗಳು ಕೇವಲ ಕಾಟಾಚಾರಕ್ಕೆ ಕೆಡಿಪಿ ಮೀಟಿಂಗ್ ನಡೆಸುವ ಸಂದರ್ಭಗಳೂ ಉಂಟು. ಜನ ಬೆವರು ಸುರಿಸಿ ದುಡಿದು ಕಟ್ಟುವ ತೆರಿಗೆ ಹಣದಿಂದ ಸಭೆಗಳು ನಡೆಯುತ್ತವೆ ಅನ್ನೋದನ್ನು ಇವರು ಅರ್ಥಮಾಡಿಕೊಳ್ಳಬೇಕು.
ಬಾಗಲಕೋಟೆ: ಇಂದು ಬಾಗಲಕೋಟೆಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಉಸ್ತುವಾರಿ ಸಚಿವ ಆರ್ ಬಿ ತಿಮ್ಮಾಪುರ ಅಧಿಕಾರಿಯೊಬ್ಬರ ಮೇಲೆ ಆಕ್ರೋಷಗೊಂಡು ಅವರನ್ನು ಸಭೆಯಿಂದ ಆಚೆ ಕಳಿಸಿದ ಘಟನೆ ನಡೆಯಿತು. ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಲಕ್ಷ್ಮಣ ಕಳ್ಳೆಣ್ಣವರ್ ಮಂತ್ರಿಯಿಂದ ತರಾಟೆಗೊಳಗಾದ ಅಧಿಕಾರಿ. ಇಲಾಖೆಗೆ ಸಂಬಂಧಿಸಿದ ಸಚಿವ ಕೇಳಿದ ಹಲವಾರು ಪ್ರಶ್ನೆಗಳಿಗೆ ಕಳ್ಳೆಣ್ಣವರ್ ಸಮರ್ಪಕ ಉತ್ತರ ನೀಡದೆ ತೊದಲಿದರು. ಅವರ ಅಸರ್ಮಪಕ ಉತ್ತರಗಳಿಂದ ರೊಚ್ಚಿಗೆದ್ದ ಸಚಿವ ಸಭಾಂಗಣದಿಂದ ಹೊರ ಹೋಗುವಂತೆ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಲಂಚಕ್ಕೆ ಬೇಡಿಕೆಯಿಟ್ಟ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿ ಇಲಾಖಾ ತನಿಖೆಗೆ ಆದೇಶ: ಆರ್ ಬಿ ತಿಮ್ಮಾಪುರ, ಅಬಕಾರಿ ಸಚಿವ