ಯಾರು ಬಿಗ್ ಬಾಸ್ ಗೆಲ್ತಾರೆ ಅಂತ ನಾನು ಹೇಳಲ್ಲ: ಪ್ರಥಮ್ ಖಡಕ್ ಮಾತು

ಯಾರು ಬಿಗ್ ಬಾಸ್ ಗೆಲ್ತಾರೆ ಅಂತ ನಾನು ಹೇಳಲ್ಲ: ಪ್ರಥಮ್ ಖಡಕ್ ಮಾತು

Mangala RR
| Updated By: ಮದನ್​ ಕುಮಾರ್​

Updated on: Jan 22, 2025 | 8:32 PM

‘ಬಿಗ್ ಬಾಸ್ ಕನ್ನಡ ಸೀಸನ್​ 11’ ಶೋನಲ್ಲಿ ಯಾರು ಟ್ರೋಫಿ ಹಿಡಿಯುತ್ತಾರೆ ಎಂಬ ಕೌತುಕ ಹೆಚ್ಚಿದೆ. ಈ ಬಗ್ಗೆ ಬಿಗ್ ಬಾಸ್ ಮಾಜಿ ಸ್ಪರ್ಧಿ, ನಟ ಪ್ರಥಮ್ ಅವರು ಮಾತನಾಡಿದ್ದಾರೆ. ಆದರೆ ಯಾರು ವಿನ್ ಆಗಬಹುದು ಎಂಬುದನ್ನು ಪ್ರಥಮ್ ಅವರು ಹೇಳಿಲ್ಲ. ಅದಕ್ಕೆ ಕಾರಣ ಏನು ಎಂಬುದನ್ನು ಅವರು ವಿವರಿಸಿದ್ದಾರೆ.

ನಟ ಪ್ರಥಮ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್​ 4’ ವಿನ್ನರ್ ಆಗಿದ್ದರು. ಈಗ 11ನೇ ಸೀಸನ್ ಫಿನಾಲೆ ಬರುತ್ತಿದೆ. ಈ ಬಾರಿ ಯಾರು ವಿನ್ ಆಗಬಹುದು ಎಂಬ ಪ್ರಶ್ನೆಗೆ ಪ್ರಥಮ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಯಾರೋ ಒಬ್ಬರ ಹೆಸರನ್ನು ಹೇಳಿದರೆ ಇನ್ನುಳಿದವರ ಬಗ್ಗೆ ಬೇರೆ ರೀತಿ ಅಭಿಪ್ರಾಯ ಮೂಡುತ್ತದೆ. ಎಲ್ಲರಿಗೂ ಗೆಲ್ಲುವ ಅರ್ಹತೆ ಇದೆ. ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ’ ಎಂದು ಪ್ರಥಮ್ ಅವರು ಹೆಸರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.