ಕಣ್ಮುಂದೆ ಲಕ್ಷಾಂತರ ರೂ ಮೌಲ್ಯದ ಟ್ರ್ಯಾಕ್ಟರ್ ಬೆಂಕಿಗಾಹುತಿ: ಕಣ್ಣೀರಿಟ್ಟ ರೈತ
ಕಬ್ಬಿಗೆ ನ್ಯಾಯಯುತ ಬೆಲೆಗಾಗಿ ಬಾಗಲಕೋಟೆ ಜಿಲ್ಲೆ ರೈತರು ಪ್ರತಿಭಟಿಸುತ್ತಿದ್ದ ಸಂದರ್ಭದಲ್ಲಿ, ಬಾಗಲಕೋಟೆಯಲ್ಲಿ ರೈತನೊಬ್ಬನ ಲಕ್ಷಾಂತರ ರೂ. ಮೌಲ್ಯದ ಟ್ರ್ಯಾಕ್ಟರ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಬೆಳಗ್ಗೆ ಪೂಜೆ ಮಾಡಿ ತಂದಿದ್ದ ಟ್ರ್ಯಾಕ್ಟರ್ ನಾಶವಾಗಿದ್ದರಿಂದ, ಸಾಲದ ಸುಳಿಯಲ್ಲಿರುವ ರೈತ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ. ವಿಡಿಯೋ ನೋಡಿ.
ಬಾಗಲಕೋಟೆ, ನವೆಂಬರ್ 13: ಬೆಳಗ್ಗೆಯಿಂದ ಶಾಂತವಾಗಿ ಸಾಗಿದ್ದ ಕಬ್ಬು ಬೆಳೆಗಾರರ ಹೋರಾಟ ಸಂಜೆಯಾಗುತ್ತಿದ್ದಂತೆ ವಿಕೋಪಕ್ಕೆ ತಿರುಗಿತ್ತು. ನೋಡನೋಡುತ್ತಿದ್ದಂತೆ 100ಕ್ಕೂ ಹೆಚ್ಚು ಟ್ರ್ಯಾಕ್ಟರ್ ಟ್ರಾಲಿಗಳಿಗೆ ಬೆಂಕಿ ಹಚ್ಚಲಾಗಿದೆ. ಸಾಲ-ಸೋಲ ಮಾಡಿ ತಂದಿದ್ದ ಸುಮಾರು 60 ಲಕ್ಷ ರೂ ಮೌಲ್ಯದ ಟ್ರ್ಯಾಕ್ಟರ್ ಕಳೆದುಕೊಂಡ ರೈತ ಕಣ್ಣೀರು ಹಾಕಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
