ಸಿಡಿ ರಾಜಕೀಯ ಬಿಟ್ಟು ಸ್ವಚ್ಛ ರಾಜಕೀಯ ಮಾಡುವಂತೆ ರಮೇಶ್, ಡಿಕೆಶಿ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಗೆ ಬಾಲಚಂದ್ರ ಜಾರಕಿಹೊಳಿ ಮನವಿ
ಸಿಡಿ ರಾಜಕೀಯದಿಂದ ಎಲ್ಲ ಮೂರು ಕುಟುಂಬಗಳ ಪ್ರತಿಷ್ಠೆಗೆ ದೊಡ್ಡ ಹಾನಿಯಾಗುತ್ತದೆ ಎಂದು ಬಾಲಚಂದ್ರ ತಿಳಿಹೇಳಿದರು.
ಬೆಳಗಾವಿ: ಜಾರಕೊಹೊಳಿ ಸಹೋದರಲ್ಲಿ ರಮೇಶ್ ಅವರಿಗಿಂತ ಕಿರಿಯ ಮತ್ತು ಅರಭಾವಿ ಕ್ಷೇತ್ರದ ಬಿಜೆಪಿ ಶಾಸಕರಾಗಿರುವ ಬಾಲಚಂದ್ರ ಜಾರಕಿಹೊಳಿ (Balachandra Jarkiholi) ಅವರಿಗೆ ತಮ್ಮ ಕ್ಷೇತ್ರದಲ್ಲಿ ಟಿವಿ9 ಕನ್ನಡ ವಾಹಿನಿ ವರದಿಗಾರ ರಮೇಶ್ ದೆಹಲಿ ಹೋಗಿ ಡಿಕೆ ಶಿವಕುಮಾರ ವಿರುದ್ಧ ಮಾಡಿರುವ ಆರೋಪಗಳ ಸಿಡಿಯನ್ನು ಗೃಹ ಸಚಿವ ಅಮಿತ್ ಶಾ (Amit Shah) ಅವರಿಗೆ ನೀಡಿ ಸಿಬಿಐ ತನಿಖೆಗೆ ಮನವಿ ಮಾಡಿರುವ ಬಗ್ಗೆ ಪ್ರಶ್ನಿಸಿದಾಗ ಬಹಳ ಪ್ರಬುದ್ಧತೆಯಿಂದ ಮಾತಾಡಿದರು. ರಮೇಶ್ ಜಾರಕಿಹೊಳಿ, ಡಿಕೆ ಶಿವಕುಮಾರ್ (DK Shivakumar) ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar)-ಮೂವರು ಹಿರಿಯ ಮತ್ತು ಅನುಭವಸ್ಥ ರಾಜಕಾರಣಿಗಳಾಗಿದ್ದಾರೆ, ಹಾಗಾಗಿ ಈ ಸಿಡಿಗಳ ರಾಜಕೀಯಕ್ಕೆ ಇತಿಶ್ರೀ ಹಾಡಿ ಪಕ್ಷಗಳ ಸಿದ್ಧಾಂತಗಳ ಆಧಾರದಲ್ಲಿ ಹೋರಾಟ ಮಾಡಲು ಮುಂದಾಗುವಂತೆ ವಿನಂತಿಸಿದರು. ಸಿಡಿ ರಾಜಕೀಯದಿಂದ ಎಲ್ಲ ಮೂರು ಕುಟುಂಬಗಳ ಪ್ರತಿಷ್ಠೆಗೆ ದೊಡ್ಡ ಹಾನಿಯಾಗುತ್ತದೆ ಎಂದು ಬಾಲಚಂದ್ರ ತಿಳಿಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ