ಒಂದೇ ದೇಹ 2 ತಲೆ, 6 ಕಾಲು ಹೊಂದಿದ ವಿಚಿತ್ರ ಕರು ಜನನ: ನೋಡಲು ಮುಗಿಬಿದ್ದ ಜನ

| Updated By: ಗಂಗಾಧರ​ ಬ. ಸಾಬೋಜಿ

Updated on: Feb 11, 2024 | 6:02 PM

ಬಳ್ಳಾರಿ ಜಿಲ್ಲೆಯ ಕುರಗೋಡು ತಾಕೂಕಿನ ವದ್ದಟ್ಟಿ ಗ್ರಾಮದಲ್ಲಿ ಒಂದೇ ದೇಹ ಎರಡು ತಲೆ, ಆರು ಕಾಲು ಹೊಂದಿದ ವಿಚಿತ್ರ ಕರು ಜನನವಾಗಿರುವಂತಹ ಘಟನೆ ನಡೆದಿದೆ. ಆರು ಕಾಲು, ಎರಡು ತಲೆ ಆದರೆ ಒಂದೇ ದೇಹದ ಗಂಡು ಕರು ಜನನವಾಗಿದೆ. ಆದರೆ ಜನಿಸಿದ ಕೆಲ ಗಂಟೆಗಳ ಕಾಲ ಮಾತ್ರ ಜೀವಂತವಿತ್ತು. ವಿಚಿತ್ರ ಕರುವನ್ನು ಕುತೂಹಲದಿಂದ ನೋಡಲು ಜನರು ಬರುತ್ತಿದ್ದರು.

ಬಳ್ಳಾರಿ, ಫೆಬ್ರವರಿ 11: ಒಂದೇ ದೇಹ ಎರಡು ತೆಲೆ, ಆರು ಕಾಲು ಹೊಂದಿದ ವಿಚಿತ್ರ ಕರು (calf) ಜನನವಾಗಿರುವಂತಹ ಘಟನೆ ಜಿಲ್ಲೆಯ ಕುರಗೋಡು ತಾಕೂಕಿನ ವದ್ದಟ್ಟಿ ಗ್ರಾಮದಲ್ಲಿ ನಡೆದಿದೆ. ಬಸಪ್ಪ ಎಂಬ ರೈತರ ಮನೆಯಲ್ಲಿ ಈ ವಿಚಿತ್ರ ಕರು ಜನನವಾಗಿದೆ. ಆರು ಕಾಲು, ಎರಡು ತಲೆ ಆದರೆ ಒಂದೇ ದೇಹದ ಗಂಡು ಕರು ಜನನವಾಗಿದೆ. ಆದರೆ ಜನಿಸಿದ ಕೆಲ ಗಂಟೆಗಳ ಕಾಲ ಮಾತ್ರ ಜೀವಂತವಿತ್ತು. ವಿಚಿತ್ರ ಕರುವನ್ನು ಕುತೂಹಲದಿಂದ ನೋಡಲು ಜನರು ಬರುತ್ತಿದ್ದರು. ಸ್ಥಳಕ್ಕೆ ಪಶುವೈದ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಕರು ಪಡೆದಿದ್ದ ಹಸುವಿನ ಆರೋಗ್ಯಕ್ಕೆ ಯಾವ ತೊಂದರೆ ಇಲ್ಲ ಎಂದು ಪಶುವೈದ್ಯರು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.