ಮತ್ತೆ ಒಟ್ಟಿಗೆ ಕಾಣಿಸಿಕೊಳ್ತಾರಾ ಸಂಗೀತಾ-ಕಾರ್ತಿಕ್-ತನಿಷಾ: ಸಿಂಹಿಣಿ ಹೇಳಿದ್ದು ಹೀಗೆ
Sangeetha Sringeri: ಬಿಗ್ಬಾಸ್ ಕನ್ನಡ ಸೀಸನ್ 10ರ ಗೆಲ್ಲುವ ಸ್ಪರ್ಧಿ ಎಂದೇ ಬಿಂಬಿತವಾಗಿದ್ದ ಸಂಗೀತಾ ಕಪ್ ಗೆಲ್ಲಲಿಲ್ಲ. ಇಂದು ಕಾರ್ಯಕ್ರಮದಲ್ಲಿ ಅಭಿಮಾನಿಗಳನ್ನು ಭೇಟಿಯಾದ ಸಂಗೀತಾ, ತಾವು, ಕಾರ್ತಿಕ್, ತನಿಷಾ ಅವರುಗಳು ಒಟ್ಟಿಗೆ ಒಂದೇ ವೇದಿಕೆ ಮೇಲೆ ಕಾಣಿಸಿಕೊಳ್ಳುವುದು ಸಾಧ್ಯವಾ ಎಂಬ ಬಗ್ಗೆ ಮಾತನಾಡಿದ್ದಾರೆ.
ಬಿಗ್ಬಾಸ್ ಕನ್ನಡ ಸೀಸನ್ 10 (BiggBoss) ಮುಗಿದು ಎರಡು ವಾರಕ್ಕೂ ಹೆಚ್ಚು ಸಮಯವಾಗಿದ್ದರೂ ಸಹ ಅದರ ಹವಾ ಇನ್ನೂ ಇಳಿದಿಲ್ಲ. ಬಿಗ್ಬಾಸ್ ಮನೆಯಿಂದ ಹೊರಗೆ ಬಂದವರು ಸೆಲೆಬ್ರಿಟಿಗಳಾಗಿದ್ದು ಅವರು ಹೋದಲ್ಲಿ-ಬಂದಲ್ಲಿ ಎಲ್ಲ ಅಭಿಮಾನಿಗಳು ಮುತ್ತಿಗೆ ಹಾಕುತ್ತಿದ್ದಾರೆ. ಗೆದ್ದೇ ಗೆಲ್ಲುತ್ತಾರೆ ಎಂದು ನಿರೀಕ್ಷೆ ಹುಟ್ಟಿಸಿದ್ದ ಸಂಗೀತಾ ಫಿನಾಲೆಯಲ್ಲಿ ಎಡವಿದರು. ಮತಗಳ ಆಧಾರದಲ್ಲಿ ಅವರಿಗೆ ಕಡಿಮೆ ಮತಗಳು ಬಂದವು. ಅಂತಿಮವಾಗಿ ಕಾರ್ತಿಕ್ ಮಹೇಶ್ ವಿನ್ನರ್ ಆದರು. ಬಿಗ್ಬಾಸ್ ಮನೆಯಿಂದ ಹೊರಗೆ ಬಂದ ಬಳಿಕ ಹೆಚ್ಚೇನೂ ಕಾಣಿಸಿಕೊಳ್ಳದೇ ಇದ್ದ ಸಂಗೀತಾ ಇದೀಗ ಅಭಿಮಾನಿಗಳನ್ನು ಭೇಟಿಯಾಗಲೆಂದು ಕಾರ್ಯಕ್ರಮ ಆಯೋಜಿಸಿದ್ದರು. ಕಾರ್ಯಕ್ರಮದಲ್ಲಿ ಅಭಿಮಾನಿಗಳನ್ನು ಭೇಟಿಯಾಗಿ ಧನ್ಯಾವಾದ ಹೇಳಿದರು. ಬಿಗ್ಬಾಸ್ ಮನೆಯೊಳಗೆ ಆರಂಭದಲ್ಲಿ ಗೆಳೆಯರಾಗಿದ್ದ ಕೊನೆಗೆ ವೈರಿಗಳಾದ ಕಾರ್ತಿಕ್, ತನಿಷಾ ಅವರನ್ನು ಮತ್ತೆ ಆಗುತ್ತೇವೆಯೇ ಇಲ್ಲವೇ ಎಂಬ ಬಗ್ಗೆ ಸಂಗೀತಾ ಮಾತನಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Feb 11, 2024 09:37 PM
Latest Videos