ದರ್ಶನ್ ತೂಗುದೀಪ: ಡಿ ಬಾಸ್​ನನ್ನು ಮುಸುಕು ಹಾಕಿ ಕರೆತಂದಿದ್ದು ತೀವ್ರ ನಿರಾಶೆಯುಂಟು ಮಾಡಿದೆ ಎಂದ ಅಭಿಮಾನಿಗಳು

ಅರುಣ್​ ಕುಮಾರ್​ ಬೆಳ್ಳಿ

Updated on: Aug 29, 2024 | 12:56 PM

ದರ್ಶನ್ ತೂಗುದೀಪ: ದರ್ಶನ್ ಒಬ್ಬ ಉದಾರ ಜೀವಿ, ಹಲವಾರು ಬಡವರಿಗೆ ಸಹಾಯ ಮಾಡಿರುವ ಪರೋಪಕಾರಿ ಹಾಗಾಗಿ ಅವರು ಕೊಲೆಯಂಥ ಹೀನ ಕೃತ್ಯವೆಸಗುವುದು ಸಾಧ್ಯವೇ ಇಲ್ಲ ಎಂದು ನಟನ ಬಳ್ಳಾರಿ ಅಭಿಮಾನಿಗಳು ಹೇಳುತ್ತಾರೆ. ಅವರು ನಿರ್ದೋಷಿಯಾಗಿ ಜೈಲಿನಿಂದ ಹೊರಬೀಳಲಿದ್ದಾರೆ ಎಂಬ ಆಶಾಭಾವನೆ ಅವರು ತಳೆದಿದ್ದಾರೆ.

ಬಳ್ಳಾರಿ: ಕೊಲೆ ಪ್ರಕರಣದಲ್ಲಿ ಅರೋಪಿಯಾಗಿರುವ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡುವಾಗ ಮುಖಕ್ಕೆ ಮುಸುಕು ಹಾಕಿ ಕರೆತಂದಿದ್ದು ಅವರನ್ನು ನೋಡಲು ಬೆಳಗ್ಗೆ 5 ಗಂಟೆಯಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ತೀವ್ರ ನಿರಾಶೆಯಾಗಿದೆ. ನಟನೆಡೆ ಅವರ ಅಭಿಮಾನ ಪ್ರೀತಿ ಕಿಂಚಿತ್ತೂ ಕಡಿಮೆಯಾಗಿಲ್ಲ, ಅವರು ಜೈಲಲ್ಲಿರಲಿ ಅಥವಾ ಹೊರಗಿರಲಿ ತಮಗಂತೂ ಡಿ ಬಾಸ್ ಎಂದು ಅಭಿಮಾನಿಗಳು ಹೇಳುತ್ತಾರೆ. ನಮ್ಮ ವರದಿಗಾರ ಹಲವಾರು ಅಭಿಮಾನಿಗಳೊಂದಿಗೆ ಮಾತಾಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ದರ್ಶನ್ ತೂಗುದೀಪ: ನಟನನ್ನು ಬಳ್ಳಾರಿಗೆ ಸೆಂಟ್ರಲ್ ಜೈಲಿಗೆ ಶಿಫ್ಟ್ ಮಾಡಿದ್ದು ಗೊತ್ತೇ ಇಲ್ಲವೆಂದ ಗೃಹಸಚಿವ!

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.