Loading video

ಬೇಡಿಕೆ ಈಡೇರಿಸದಿದ್ದರೆ ಒತ್ತೆಯಾಳುಗಳನ್ನು ಗಲ್ಲಿಗೇರಿಸುತ್ತೇವೆ; ಬಲೂಚ್ ದಂಗೆಕೋರರ ಎಚ್ಚರಿಕೆ

|

Updated on: Mar 12, 2025 | 6:49 PM

ಮಂಗಳವಾರ ಮಧ್ಯಾಹ್ನ ಬಲೂಚಿಸ್ತಾನದ ಬೋಲಾನ್ ಜಿಲ್ಲೆಯ ಮಚ್ ಬಳಿ ಜಾಫರ್ ಎಕ್ಸ್‌ಪ್ರೆಸ್‌ನ ನಿಯಂತ್ರಣವನ್ನು ಬಿಎಲ್‌ಎ ಹೋರಾಟಗಾರರು ವಶಪಡಿಸಿಕೊಂಡಾಗ ಒತ್ತೆಯಾಳುಗಳ ಬಿಕ್ಕಟ್ಟು ಪ್ರಾರಂಭವಾಯಿತು. ಉಗ್ರರು 200 ಪಾಕಿಸ್ತಾನಿ ಮಿಲಿಟರಿ, ಅರೆಸೈನಿಕ, ಪೊಲೀಸ್ ಮತ್ತು ಗುಪ್ತಚರ ಸಿಬ್ಬಂದಿಯನ್ನು ಒತ್ತೆಯಾಳುಗಳಾಗಿ ತೆಗೆದುಕೊಂಡರು. ಇಂದಿನ ಪಾಕ್ ಸೇನೆಯ ಬಾಂಬ್ ದಾಳಿಗೆ ಪ್ರತಿಕ್ರಿಯೆಯಾಗಿ ನಾವು 10 ಒತ್ತೆಯಾಳುಗಳನ್ನು ತಕ್ಷಣವೇ ಗಲ್ಲಿಗೇರಿಸಬೇಕಾಗುತ್ತದೆ. ಪಾಕಿಸ್ತಾನಿ ಪಡೆಗಳು ಮತ್ತೊಂದು ದಾಳಿಯನ್ನು ಪ್ರಾರಂಭಿಸಿದರೆ ಒತ್ತೆಯಾಳುಗಳನ್ನು ತಕ್ಷಣವೇ ಗಲ್ಲಿಗೇರಿಸಲಾಗುತ್ತದೆ ಎಂದು ಹೇಳಲಾಗಿದೆ.

ಕ್ವೆಟ್ಟಾ (ಮಾರ್ಚ್ 12): ಪಾಕಿಸ್ತಾನಿ ಪಡೆಗಳ ಡ್ರೋನ್ ದಾಳಿ ಮತ್ತು ಫಿರಂಗಿ ಶೆಲ್ ದಾಳಿಗೆ ಪ್ರತೀಕಾರವಾಗಿ ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್‌ಎ) 10 ಪಾಕಿಸ್ತಾನಿ ಒತ್ತೆಯಾಳುಗಳನ್ನು ಗಲ್ಲಿಗೇರಿಸುವುದಾಗಿ ಬೆದರಿಕೆ ಹಾಕಿದೆ. ಬಲೂಚಿಸ್ತಾನದಲ್ಲಿ ಮಿಲಿಟರಿ ದಾಳಿಯ ನಂತರ ಪಾಕಿಸ್ತಾನಿ ಒತ್ತೆಯಾಳುಗಳನ್ನು ಗಲ್ಲಿಗೇರಿಸುವುದಾಗಿ ಬಿಎಲ್‌ಎ ಬೆದರಿಕೆ ಹಾಕಿದೆ. ಪಾಕಿಸ್ತಾನಕ್ಕೆ 48 ಗಂಟೆಗಳ ಗಡುವು ಕೂಡ ನೀಡಿದೆ. ಬಲೂಚಿಸ್ತಾನದ ಬೋಲಾನ್ ಜಿಲ್ಲೆಯಲ್ಲಿ ನಡೆಯುತ್ತಿರುವ ಒತ್ತೆಯಾಳು ಪರಿಸ್ಥಿತಿಯ ನಡುವೆಯೂ, ಬಲವಂತವಾಗಿ ವಶಕ್ಕೆ ಪಡೆದ ಕಾರ್ಯಕರ್ತನನ್ನು ಬಿಡುಗಡೆ ಮಾಡುವಂತೆ ಪಾಕಿಸ್ತಾನಕ್ಕೆ ಒತ್ತಾಯಿಸಿ 48 ಗಂಟೆಗಳ ಗಡುವು ನೀಡಿದೆ ಎಂದು ಬಲೂಚಿಸ್ತಾನ್ ಪೋಸ್ಟ್ ವರದಿ ಮಾಡಿದೆ. ಹೈಜಾಕ್ ಮಾಡಲಾದ ಜಾಫರ್ ಎಕ್ಸ್‌ಪ್ರೆಸ್ ರೈಲಿನ ಬಳಿ ಡ್ರೋನ್ ದಾಳಿ ಮತ್ತು ಫಿರಂಗಿ ಶೆಲ್ ದಾಳಿ ನಡೆಸಲಾಗಿದ್ದು, ಬಿಎಲ್‌ಎ ಉಗ್ರರನ್ನು ಹಿಡಿಯಲು ಪ್ರಯತ್ನ ಮುಂದುವರೆದಿದೆ.

ಇಂದಿನ ಪಾಕ್ ಸೇನೆಯ ಬಾಂಬ್ ದಾಳಿಗೆ ಪ್ರತಿಕ್ರಿಯೆಯಾಗಿ ನಾವು 10 ಒತ್ತೆಯಾಳುಗಳನ್ನು ತಕ್ಷಣವೇ ಗಲ್ಲಿಗೇರಿಸಬೇಕಾಗುತ್ತದೆ. ಪಾಕಿಸ್ತಾನಿ ಪಡೆಗಳು ಮತ್ತೊಂದು ದಾಳಿಯನ್ನು ಪ್ರಾರಂಭಿಸಿದರೆ ಒತ್ತೆಯಾಳುಗಳನ್ನು ತಕ್ಷಣವೇ ಗಲ್ಲಿಗೇರಿಸಲಾಗುತ್ತದೆ ಎಂದು ಹೇಳಲಾಗಿದೆ. ಉಗ್ರರು 200 ಪಾಕಿಸ್ತಾನಿ ಮಿಲಿಟರಿ, ಅರೆಸೈನಿಕ, ಪೊಲೀಸ್ ಮತ್ತು ಗುಪ್ತಚರ ಸಿಬ್ಬಂದಿಯನ್ನು ಒತ್ತೆಯಾಳುಗಳಾಗಿ ತೆಗೆದುಕೊಂಡರು. ಬಂಧಿತ ಬಲೂಚ್ ರಾಜಕೀಯ ಕೈದಿಗಳು, ಬಲವಂತವಾಗಿ ಕಣ್ಮರೆಯಾದ ಕಾರ್ಯಕರ್ತರು ಮತ್ತು ಸೆರೆಹಿಡಿಯಲಾದ ಪ್ರತಿರೋಧ ಹೋರಾಟಗಾರರನ್ನು ತಕ್ಷಣ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಬಿಎಲ್‌ಎ ಸಂಘಟನೆ 48 ಗಂಟೆಗಳ ಗಡುವು ನೀಡಿದೆ.

ಬಂಧಿತ ಬಲೂಚ್ ರಾಜಕೀಯ ಕೈದಿಗಳು, ಬಲವಂತವಾಗಿ ಕಣ್ಮರೆಯಾದ ಕಾರ್ಯಕರ್ತರು ಮತ್ತು ಸೆರೆಹಿಡಿಯಲಾದ ಪ್ರತಿರೋಧ ಹೋರಾಟಗಾರರನ್ನು ತಕ್ಷಣ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಬಿಎಲ್‌ಎ 48 ಗಂಟೆಗಳ ಗಡುವು ನೀಡಿದೆ. “ನಮ್ಮ ಬೇಡಿಕೆಗಳನ್ನು ಉಳಿದಿರುವ ಸಮಯದೊಳಗೆ ಈಡೇರಿಸದಿದ್ದರೆ ಅಥವಾ ಪಾಕಿಸ್ತಾನಿ ಪಡೆಗಳು ಯಾವುದೇ ಹೆಚ್ಚಿನ ಮಿಲಿಟರಿ ಹಸ್ತಕ್ಷೇಪಕ್ಕೆ ಪ್ರಯತ್ನಿಸಿದರೆ ಎಲ್ಲಾ ಯುದ್ಧ ಕೈದಿಗಳನ್ನು ಗಲ್ಲಿಗೇರಿಸಲಾಗುತ್ತದೆ ಮತ್ತು ವಶಪಡಿಸಿಕೊಂಡ ರೈಲನ್ನು ಸಂಪೂರ್ಣವಾಗಿ ನಾಶಪಡಿಸಲಾಗುತ್ತದೆ” ಎಂದು ಜೀಯಾಂಡ್ ಬಲೋಚ್ ಎಚ್ಚರಿಸಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ