Banaras: ಶಾರುಖ್ ಅಥವಾ ಸಲ್ಮಾನ್.. ಇಬ್ಬರಲ್ಲಿ ಝೈದ್ ಖಾನ್ಗೆ ಹೆಚ್ಚು ಇಷ್ಟ ಯಾರು? ಉತ್ತರಿಸಿದ ಜಮೀರ್ ಪುತ್ರ
Zaid Khan: ‘ಬನಾರಸ್’ ಟ್ರೇಲರ್ ಬಿಡುಗಡೆ ಆಗಿದೆ. ಈ ಚಿತ್ರದ ಹೀರೋ ಝೈದ್ ಖಾನ್ ಅವರಿಗೆ ಸಲ್ಮಾನ್ ಖಾನ್ ಕುಟುಂಬದ ಬೆಂಬಲ ಮತ್ತು ಪ್ರೋತ್ಸಾಹ ಇದೆ.
ಜಮೀರ್ ಅಹ್ಮದ್ ಅವರ ಪುತ್ರ ಝೈದ್ ಖಾನ್ (Zaid Khan) ಅವರು ರಾಜಕೀಯದ ಹಾದಿಯನ್ನು ಆಯ್ಕೆ ಮಾಡಿಕೊಂಡಿಲ್ಲ. ಬದಲಿಗೆ ಅವರು ಸಿನಿಮಾದ ಕಡೆಗೆ ಆಸಕ್ತಿ ತೋರಿಸಿದ್ದಾರೆ. ಝೈದ್ ಖಾನ್ ನಟಿಸಿರುವ ಮೊದಲ ಸಿನಿಮಾ ‘ಬನಾರಸ್’ ಟ್ರೇಲರ್ ಲಾಂಚ್ ಮಾಡಲಾಗಿದೆ. ಈ ಕಾರ್ಯಕ್ರಮಕ್ಕೆ ಸಲ್ಮಾನ್ ಖಾನ್ (Salman Khan) ಅವರ ಸಹೋದರ ಅರ್ಬಾಜ್ ಖಾನ್ ಮುಖ್ಯ ಅತಿಥಿಯಾಗಿ ಬಂದಿದ್ದರು. ಈ ವೇಳೆ ‘ಶಾರುಖ್ ಖಾನ್ (Shah Rukh Khan) ಮತ್ತು ಸಲ್ಮಾನ್ ಖಾನ್.. ಇವರಿಬ್ಬರಲ್ಲಿ ನೀವು ಯಾರನ್ನು ಫಾಲೋ ಮಾಡ್ತೀರಿ’ ಎಂದು ಝೈದ್ ಖಾನ್ಗೆ ಪ್ರಶ್ನೆ ಎದುರಾಯಿತು. ‘ನನಗೆ ಇಬ್ಬರ ಮೇಲೂ ಅಭಿಮಾನ ಇದೆ. ಆದರೆ ಸಲ್ಮಾನ್ ಖಾನ್ಗೆ ನಾನು ದೊಡ್ಡ ಅಭಿಮಾನಿ’ ಎಂದು ಅವರು ಉತ್ತರ ನೀಡಿದ್ದಾರೆ. ಕನ್ನಡ, ತಮಿಳು, ಹಿಂದಿ, ಮಲಯಾಳಂ ಹಾಗೂ ತೆಲುಗು ಭಾಷೆಯಲ್ಲಿ ‘ಬನಾರಸ್ ಟ್ರೇಲರ್ ರಿಲೀಸ್ ಆಗಿದೆ.
Published on: Sep 27, 2022 09:28 AM