ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ, ಬೆಲೆ ಕೇಳಿದ್ರೆ ಶಾಕ್​ ಆಗುತ್ತೆ

Edited By:

Updated on: Oct 05, 2024 | 3:22 PM

ಮೈಸೂರು ಅರಮನೆ ಬಳಿ ರೈತ ದಸರಾ ಆಯೋಜಿಸಿದ್ದು, ಈ ರೈತ ದಸರೆಯಲ್ಲಿ ಬಂಡೂರು ಕುರಿಗಳು ಆಕರ್ಷಣೆಯ ಕೇಂದ್ರಬಿಂದುವಾಗಿದೆ. . ಗಿಡ್ಡದಾದ ಕಾಲುಗಳನ್ನು ಹೊಂದಿದ ಮುದ್ದಾದ ಬಂಡೂರು ಕುರಿ ಬೆಲೆ ಕೇಳಿದ್ರೆ ಶಾಕ್​ ಆಗುತ್ತೀರಿ.

ಮೈಸೂರು, (ಅಕ್ಟೋಬರ್ 05): ಮೈಸೂರಿನಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾ ಸಂಭ್ರಮ ಮನೆಮಾಡಿದೆ. ದಸರಾ ಪ್ರಯುಕ್ತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅದರಂತೆ ಅರಮನೆ ಬಳಿ ರೈತ ದಸರಾ ಆಯೋಜಿಸಿದ್ದು, ಈ ರೈತ ದಸರೆಯಲ್ಲಿ ಬಂಡೂರು ಕುರಿಗಳು ಆಕರ್ಷಣೆಯ ಕೇಂದ್ರ ಬಿಂದುವಾಗಿವೆ. ಗಿಡ್ಡದಾದ ಕಾಲುಗಳನ್ನು ಹೊಂದಿದ ಮುದ್ದಾದ ಬಂಡೂರು ಕುರಿ ಬೆಲೆ ಬರೋಬ್ಬರಿ 1 ಲಕ್ಷ ರೂಪಾಯಿ. ವಿನಾಶದ ಅಂಚಿನಲ್ಲಿರುವ ಬಂಡೂರು ಕುರಿ ತಳಿ ಸಂರಕ್ಷಣೆಗೆ ರೈತರು ಒತ್ತಾಯಿಸಿದ್ದಾರೆ. ಈ ಬಗ್ಗೆ ನಮ್ಮ ಮೈಸೂರು ಪ್ರತಿನಿಧಿ ರಾಮ್ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ ನೋಡಿ.

Published on: Oct 05, 2024 03:18 PM
Follow Us
Ram

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More