AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru Mock Drill live streaming: ಬೆಂಗಳೂರಿನಲ್ಲಿ ನಡೆಯುತ್ತಿರುವ ಮಾಕ್ ಡ್ರಿಲ್​ ನೇರ ಪ್ರಸಾರ

Bengaluru Mock Drill live streaming: ಬೆಂಗಳೂರಿನಲ್ಲಿ ನಡೆಯುತ್ತಿರುವ ಮಾಕ್ ಡ್ರಿಲ್​ ನೇರ ಪ್ರಸಾರ

ರಮೇಶ್ ಬಿ. ಜವಳಗೇರಾ
|

Updated on:May 07, 2025 | 3:59 PM

Share

ಭಾರತ-ಪಾಕ್‌ ಪ್ರತೀಕಾರದ ಸಂಘರ್ಷದ ಹಿನ್ನೆಲೆಯಲ್ಲಿ ಇಂದು (ಮೇ 07) ದೇಶಾದ್ಯಂತ ಮಾಕ್ ಡ್ರಿಲ್ ಕೈಗೊಳ್ಳಲಾಗುತ್ತಿದೆ. ಅದರಲ್ಲೂ ಬೆಂಗಳೂರು ನಗರದಲ್ಲೂ ಸಹ ಮಾಕ್ ಡ್ರಿಲ್ ಸಂಬಂಧ ಸೈರನ್​ ಶಬ್ಧ ಮೊಳಗಲಿದೆ. ಬೆಂಗಳೂರು ನಗರದ 35 ಕಡೆಗಳಲ್ಲೂ ಸೈರನ್ ಮೊಳಗಲಿದ್ದು, ಜನರು ಆತಂಕ ಪಡುವ ಅಗತ್ಯ ಇಲ್ಲ. ಸೈರನ್ ಶಬ್ಧ ಕೇಳಿ ಜನರು ಆತಂಕ ಪಡಬೇಡಿ.

ಬೆಂಗಳೂರು, (ಮೇ 07): ಭಾರತ-ಪಾಕ್‌ ಪ್ರತೀಕಾರದ ಸಂಘರ್ಷದ ಹಿನ್ನೆಲೆಯಲ್ಲಿ ಇಂದು (ಮೇ 07) ದೇಶಾದ್ಯಂತ ಮಾಕ್ ಡ್ರಿಲ್ ಕೈಗೊಳ್ಳಲಾಗುತ್ತಿದೆ. ಅದರಲ್ಲೂ ಬೆಂಗಳೂರು ನಗರದಲ್ಲೂ ಸಹ ಮಾಕ್ ಡ್ರಿಲ್ ಸಂಬಂಧ ಸೈರನ್​ ಶಬ್ಧ ಮೊಳಗಲಿದೆ. ಬೆಂಗಳೂರು ನಗರದ 35 ಕಡೆಗಳಲ್ಲೂ ಸೈರನ್ ಮೊಳಗಲಿದ್ದು, ಜನರು ಆತಂಕ ಪಡುವ ಅಗತ್ಯ ಇಲ್ಲ. ಸೈರನ್ ಶಬ್ಧ ಕೇಳಿ ಜನರು ಆತಂಕ ಪಡಬೇಡಿ. ಇದು ಅಣಕು ಪ್ರದರ್ಶನದ ಭಾಗವಾಗಿ ನಡೆಯುವ ಸೈರನ್ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮಾಕ್ ಡ್ರಿಲ್‌ ನಾಗರಿಕರ ರಕ್ಷಣಾ ಅಣಕು ಪ್ರದರ್ಶನ ಇದಾಗಿದ್ದು, ಮೊದಲಿಗೆ ಹಲಸೂರು ಕೆರೆಯಲ್ಲಿ ಬೋಟಿಂಗ್ ರಕ್ಷಣಾ ಕಾರ್ಯದ ಅಣಕು ಪ್ರದರ್ಶನ ನಡೆಸಲಾಗುತ್ತಿದೆ. ನಂತರ ಸೈರನ್ ಪ್ರೋಟೋಕಾಲ್ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಇನ್ನು ಮಾಕ್​ ಡ್ರಿಲ್​ ಹೇಗೆಲ್ಲಾ ನಡೆಯುತ್ತೆ ಎನ್ನುವ ನೇರ ಪ್ರಸಾರದಲ್ಲಿ ನೋಡಿ.

Published on: May 07, 2025 03:58 PM