Bangalore Rains: ಮಳೆ, ಪ್ರವಾಹ ಬಂದರೇನು ನಾನಿದ್ದೀನಿ ನೀನು ಮಲಗು ಕಂದ
Bangalore News: ನಗರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದ್ದು, ಹಲವು ಮನೆಗಳಿಗೆ ನೀರು ನುಗ್ಗಿದೆ. ಕುಮಾರಸ್ವಾಮಿ ಲೇಔಟ್‌ನ ಮನೆಯೊಂದರಲ್ಲಿ ಮಳೆ ನೀರಿನ ನಡುವೆ ಮಹಿಳೆಯೊಬ್ಬರು ತನ್ನ ಮಗುವನ್ನು ಮಲಗಿಸಲು ಪರಿತಪಿಸಿದ ದೃಶ್ಯ ಕಂಡು ಬಂದಿದೆ.
ಬೆಂಗಳೂರು: ನಗರದ ಹಲವೆಡೆ ಶನಿವಾರ ರಾತ್ರಿ ಧಾರಾಕಾರ ಮಳೆಯಾಗಿದ್ದು, ಜನಜೀವನ, ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಅಷ್ಟೇ ಅಲ್ಲದೆ, ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ನೀರು ಕೂಡ ನುಗ್ಗಿ ನಿವಾಸಿಗರು ಪರದಾಡುವಂತಾಯಿತು. ಕುಮಾರಸ್ವಾಮಿ ಲೇಔಟ್‌ನ ತಗ್ಗು ಪ್ರದೇಶಕ್ಕೆ ರಾಜಕಾಲುವೆ ನೀರು ನುಗ್ಗಿ ಕೆಸರಿನಂತಾಗಿದೆ. ಅವೈಜ್ಞಾನಿಕ ಕಾಮಗಾರಿಯಿಂದ ಈ ರೀತಿಯ ಸಮಸ್ಯೆ ಉಂಟಾಗಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸುತ್ತಿದ್ದಾರೆ. ಬಿಬಿಎಂಪಿ, ಡಿಡಬ್ಲ್ಯುಎಸ್‌ಎಸ್‌ಬಿ ಸಿಬ್ಬಂದಿಯಿಂದ ಸ್ವಚ್ಛತಾ ಕಾರ್ಯ ನಡೆದಿದೆ. ಈ ವೇಳೆ ಮನೆಗೆ ನುಗ್ಗಿದ ಮಳೆಯ ನೀರಿನ ನಡುವೆ ಮಗುವನ್ನು ಮಲಗಿಸಲು ತಾಯಿ ಪರಿತಪಿಸಿದ ದೃಶ್ಯ ಕಂಡು ಬಂದಿದೆ.
Published on: Jul 31, 2022 11:32 AM
Latest Videos